ಮಾಹಿತಿಯ ಪ್ರಕಾರ ಬಿಎಸ್ ಎಫ್ ಖರೀದಿಸಲು ನಿರ್ಧರಿಸಿರುವ ಆ್ಯಂಟಿ ಡ್ರೋನ್ ಗನ್ ತುಂಬಾ ಹಗುರವಾಗಿರಲಿದ್ದು, ಇದು ಬಿಎಸ್ ಎಫ್ ಜವಾನನ ಸಹಾಯದಿಂದ ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಶತ್ರು ಡ್ರೋನ್ ಗಳನ್ನು ಹೊಡೆದುರುಳಿಸಲು ಸಾಧ್ಯವಾಗುತ್ತದೆ.
ಮೂಲಗಳ ಪ್ರಕಾರ, ತಾಲಿಬಾನ್ ಕಾಶ್ಮೀರ ಸಮಸ್ಯೆಯನ್ನು ಭಾರತ ಮತ್ತು ಪಾಕಿಸ್ತಾನದ ನಡುವಿನ ಆಂತರಿಕ ಸಮಸ್ಯೆ ಎಂದು ಹೇಳಿದೆ. ಕಾಶ್ಮೀರ ತಮ್ಮ ಅಜೆಂಡಾದಲ್ಲಿ ಇಲ್ಲ, ಇದು ಎರಡು ದೇಶಗಳ ನಡುವಿನ ಸಮಸ್ಯೆ ಎಂದು ತಾಲಿಬಾನ್ ಹೇಳಿದೆ.
ಝೀ ನ್ಯೂಸ್ಗೆ ದೊರೆತ ವಿಶೇಷ ಮಾಹಿತಿಯ ಪ್ರಕಾರ ಎಲ್ಒಸಿಯ ವಿವಿಧ ಲಾಂಚ್ ಪ್ಯಾಡ್ಗಳಲ್ಲಿ ಸುಮಾರು 400 ಭಯೋತ್ಪಾದಕರು ಇದ್ದಾರೆ, ಅವರನ್ನು ದೇಶಕ್ಕೆ ನುಸುಳಲು ಪಾಕಿಸ್ತಾನ ಸೇನೆಯ ಎಸ್ಎಸ್ಜಿಗೆ ನಿಯೋಜಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ ಸೆಕ್ಟರ್ನಲ್ಲಿ ವಾಡಿಕೆಯ ದಿನನಿತ್ಯದ ಗಸ್ತು ಮತ್ತು ಲೈನ್ ಆಫ್ ಕಂಟ್ರೋಲ್ ಪ್ರಾಬಲ್ಯದ ಸಮಯದಲ್ಲಿ ಭಾರೀ ಹಿಮದಲ್ಲಿ ಜಾರಿಬಿದ್ದ 11 ಗರ್ವಾಲ್ ರೈಫಲ್ಸ್ ರೆಜಿಮೆಂಟ್ಗೆ ಸೇರಿದ ಭಾರತೀಯ ಸೇನಾ ಜವಾನ್ ಕಳೆದ ಐದು ದಿನಗಳಿಂದ ಕಾಣೆಯಾಗಿದ್ದಾರೆ. ಕಾಣೆಯಾದ ಸೈನಿಕನನ್ನು ಪತ್ತೆ ಹಚ್ಚಲು ಮತ್ತು ರಕ್ಷಿಸಲು ಭಾರತೀಯ ಸೇನಾಧಿಕಾರಿಗಳ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.
ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ-ಪಾಕ್ ಗಡಿಯ ಕುರಿತು ಗಂಭೀರವಾಗಿ ಹೇಳಿಕೆ ನೀಡಿರುವ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್, LoC ಬಳಿ ಯಾವುದೇ ಸಂದರ್ಭದಲ್ಲಿ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಹೆಚ್ಚಿದ್ದು, ಭಾರತೀಯ ಸೇನೆ ಯಾವುದೇ ಪರಿಸ್ಥಿಯಲ್ಲೂ ಕೂಡ ತಕ್ಕ ಪ್ರತ್ಯುತ್ತರ ನೀಡಲು ಸಿದ್ಧವಿರಬೇಕು ಎಂದಿದ್ದಾರೆ.
ಸಿಗ್ನಲ್ ಕಾರ್ಪ್ಸ್ ರೇಡಿಯೊ ಫ್ರೀಕ್ವೆನ್ಸಿ ಮೂಲಕ ಭಯೋತ್ಪಾದಕರಿಗೆ ಸಂದೇಶಗಳನ್ನು ಕಳುಹಿಸುತ್ತಿದೆ. ಪಾಕಿಸ್ತಾನ ಸೇನೆಯು ಎಫ್ಎಂ ರೇಡಿಯೊ ಕೇಂದ್ರವನ್ನು ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಸ್ಥಳಾಂತರಿಸುತ್ತಿದೆ ಎಂದು ಹೇಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.