ಲಕ್ಷಾಂತರ ಮೌಲ್ಯದ 77 ಚಿನ್ನದ ಬಿಸ್ಕತ್ತು ವಶಕ್ಕೆ: ಚೇಸ್ ಮಾಡಿ ಆರೋಪಿಗಳನ್ನು ಹಿಡಿದ ಖಾಕಿಪಡೆ..!
ಸೌದಿ ಅರೇಬಿಯಾದಿಂದ ಹಿಂದಿರುಗಿದ್ದ ಇಬ್ಬರು ಪ್ರಯಾಣಿಕರು ಕಳ್ಳಸಾಗಣೆ ಮಾಡುತ್ತಿದ್ದ 9 ಕೆಜಿ ತೂಕದ 75 ಚಿನ್ನದ ಬಿಸ್ಕತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಲಕ್ನೋ: ಈ ಘಟನೆ ಯಾವುದೇ ಹಾಲಿವುಡ್, ಬಾಲಿವುಡ್ ಸಿನಿಮಾ ಕಥೆಗೂ ಕಮ್ಮಿಯಿಲ್ಲ. ಅಕ್ರಮವಾಗಿ ಚಿನ್ನ ಕಳ್ಳಸಾಗಣೆ(Gold Biscuit Smuggling) ಮಾಡುತ್ತಿದ್ದ ಆರೋಪಿಗಳನ್ನು ಖಾಕಿಪಡೆ ಬಲೆಗೆ ಕೆಡವಿರುವ ಈ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಹೌದು, ಸೌದಿ ಅರೇಬಿಯಾದಿಂದ ಹಿಂದಿರುಗಿದ್ದ ಇಬ್ಬರು ಪ್ರಯಾಣಿಕರು ಕಳ್ಳಸಾಗಣೆ ಮಾಡುತ್ತಿದ್ದ ಸುಮಾರು 9 ಕೆಜಿ ತೂಕದ 75 ಚಿನ್ನದ ಬಿಸ್ಕತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸೌದಿ ಅರೇಬಿಯಾ ರಾಜಧಾನಿ ರಿಯಾದ್‌ನಿಂದ ಆಗಮಿಸಿದ್ದ ಇಬ್ಬರು ಪ್ರಯಾಣಿಕ(Saudi Passengers)ರು ಚಿನ್ನದ ಬಿಸ್ಕಟ್(Gold Biscuits)ಗಳನ್ನು ಕಳ್ಳಸಾಗಣೆ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಲಕ್ನೋದಲ್ಲಿನ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ. ಗುಪ್ತಚರ ಮಾಹಿತಿಯ ಪ್ರಕಾರ, ಲಕ್ನೋದ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನದ ಬಿಸ್ಕತ್ತುಗಳನ್ನು ಮುಜಾಫರ್ ನಗರದ ಕಡೆಗೆ ಹೋಗುವ ಅಪರಿಚಿತರಿಗೆ ಹಸ್ತಾಂತರಿಸಲಾಗಿತ್ತು.
ಇದನ್ನೂ ಓದಿ: ಗ್ರಾಹಕರಿಗೆ ಮನೆ ಬಾಗಿಲಿಗೆ ವಿತರಣೆಯಾಗಲಿದೆ ಡಿಸೇಲ್, BPCL ಆರಂಭಿಸಿದೆ 'Safar20' ಸೇವೆ
ಶಂಕಿತರು ಲಕ್ನೋ(Lucknow)ಗೆ ಬಂದ ನಂತರ ಅವರ ಮೇಲೆ ಡಿಆರ್‌ಐ ಲಕ್ನೋ ಅಧಿಕಾರಿಗಳು ಕಣ್ಣಿಟ್ಟಿದ್ದರು. ಆಗ್ರಾ-ಲಕ್ನೋ ಎಕ್ಸ್ ಪ್ರೆಸ್‌ವೇಯಲ್ಲಿ 2 SUV ಕಾರುಗಳ ನಡುವೆ ಅತಿವೇಗದ ರೇಸ್ ನಡೆದಿತ್ತು. ಚಿನ್ನ ಕಳ್ಳಸಾಗಣೆದಾರರ ಕಾರನ್ನು ಬೆನ್ನಟ್ಟಿದ್ದ ಅಧಿಕಾರಿಗಳ ತಂಡ ಅಂತಿಮವಾಗಿ ಅವರನ್ನು ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದರು. ಆ ಕಾರಿನಲ್ಲಿ ರಿಯಾದ್‌ನ ಇಬ್ಬರು ಪ್ರಯಾಣಿಕರು ಮತ್ತು ಚಿನ್ನದ ಬಿಸ್ಕೆಟ್ ಸ್ವೀಕರಿಸಲು ಬಂದವರು ಖಾಕಿಬಲೆಗೆ ಸಿಕ್ಕಿಹಾಕಿಕೊಂಡಿದ್ದರು.
ಇದನ್ನೂ ಓದಿ: Good News: DL ಮತ್ತು RC ಎಕ್ಸ್ಪೈರ್ ಆಗಿದೆಯಾ? ಟೆನ್ಶನ್ ಬೇಡ... ಈ ದಿನಾಂಕದ ಮಾನ್ಯತೆ ಇರಲಿದೆ
ಕಾರನ್ನು ಸಂಪೂರ್ಣವಾಗಿ ತಪಾಸಣೆಗೊಳಪಡಿಸಿದಾಗ ಬೆಲ್ಟ್ ಗಳಲ್ಲಿ ಬಚ್ಚಿಟ್ಟಿದ್ದ 9 ಕೆಜಿ ತೂಕದ 77 ಚಿನ್ನದ ಬಿಸ್ಕಟ್‌ಗಳನ್ನು ವಶ(Gold Seized)ಪಡಿಸಿಕೊಳ್ಳಲಾಯಿತು. ಈ ಬಗ್ಗೆ ಆರೋಪಿಗಳ ತೀವ್ರ ವಿಚಾರಣೆ ನಡೆಸಲಾಯಿತು. ಬಳಿಕ ಕಳ್ಳಸಾಗಣೆದಾರರಿಗೆ ವಿಮಾನ ನಿಲ್ದಾಣದ ಮೂಲಕ ಚಿನ್ನವನ್ನು ತರುವಲ್ಲಿ ಸಹಕರಿಸಿದ ಕಸ್ಟಮ್ಸ್ ಹವಾಲ್ದಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.