ನವದೆಹಲಿ : ಏಳನೇ ವೇತನ ಆಯೋಗದ (7th Pay Commission) ಶಿಫಾರಸುಗಳ ಅನುಷ್ಠಾನದ ಬಳಿಕ ಕೇಂದ್ರ ಸರ್ಕಾರಿ ನೌಕರರರ ನಡುವೆ ಫಿಟ್ ಮೆಂಟ್ ಫ್ಯಾಕ್ಟರ್ ಬಗ್ಗೆ ಇದೀಗ ಹೆಚ್ಚಾಗಿ ಚರ್ಚೆ ನಡೆಯುತ್ತಿದೆ. ಈ ಫಿಟ್ಮೆಂಟ್ ಫ್ಯಾಕ್ಟರ್ ಬಗ್ಗೆ  ಅಷ್ಟೊಂದು ಚರ್ಚೆ ಯಾಕೆ..? ಯಾಕೆಂದರೆ ಕೇಂದ್ರ ಸರ್ಕಾರಿ ನೌಕರರ (Central government employee) ವೇತನ ನಿಗದಿಪಡಿಸುವಲ್ಲಿ ಫಿಟ್ಮೆಂಟ್ ಫ್ಯಾಕ್ಟರ್ ಪಾತ್ರ ಅತ್ಯಂತ ಮಹತ್ವದ್ದಾಗಿದೆ.  ಏಳನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ ನೌಕರರ ವೇತನ, ಭತ್ಯೆ,  ಮೂಲ ವೇತನ ಇತ್ಯಾದಿ ಫಿಟ್ಮೆಂಟ್ ಫ್ಯಾಕ್ಟರ್ ಮೂಲಕವೇ ನಿರ್ಧಾರಿತವಾಗುತ್ತದೆ.  ಈ ಸೂತ್ರದ ಮೂಲಕವೇ ಕೇಂದ್ರದ ನೌಕರರ ಸ್ಯಾಲರಿ (Salary)ಎರಡೂವರೆ ಪಟ್ಟು ಹೆಚ್ಚಾಗುತ್ತದೆ. 


COMMERCIAL BREAK
SCROLL TO CONTINUE READING

ಫಿಟ್ಮೆಂಟ್ ಫ್ಯಾಕ್ಟರ್ (Fitment Factor)ಅಂದರೆ ಏನು..?
ಏಳನೇ ವೇತನ ಆಯೋಗದ (7th Pay Commission) ಶಿಫಾರಸುಗಳ ಪ್ರಕಾರ ಫಿಟ್ಮೆಂಟ್ ಫ್ಯಾಕ್ಟರ್ 2.57 ಆಗಿದೆ.  ಕೇಂದ್ರ ನೌಕರರ ವೇತನ ನಿಗದಿಪಡಿಸುವಾಗ ತುಟ್ಟಿ ಭತ್ಯೆ (DA), ಪ್ರವಾಸ ಭತ್ಯೆ, ಹೌಸ್ ರೆಂಟ್ ಅಲೊವೆನ್ಸ್ ಭತ್ಯೆ (HRA)ಇತ್ಯಾದಿ ನಿಗದಿಪಡಿಸುವಾಗ ನೌಕರರ ಮೂಲ ವೇತನವನ್ನು ಫಿಟ್ಮೆಂಟ್ ಫ್ಯಾಕ್ಟರ್ 2.57 ರಿಂದ ಗುಣಿಸಲಾಗುತ್ತದೆ.  ಈ ಮೂಲಕ ಡಿಎ, ಟಿಎ, ಹೆಚ್ಆರ್ ಎ ನಿಗದಿಯಾಗುತ್ತದೆ.  ಉದಾಹರಣೆಗೆ ಓರ್ವ ನೌಕರನ ಸ್ಯಾಲರಿ 18000 ಇದೆ ಅಂದು ಕೊಳ್ಳೋಣ.  ಭತ್ಯೆ ಬಿಟ್ಟು ಅವರ ಸ್ಯಾಲರಿ 18000 X 2.57= 46,260 ಆಗಿರುತ್ತದೆ. 


ಇದನ್ನೂ ಓದಿ: Post Office: ಪೋಸ್ಟ್ ಆಫೀಸ್‌ನ ಹಲವು ವೈಶಿಷ್ಟ್ಯಗಳು ಈ ಅಪ್ಲಿಕೇಶನ್‌ನಲ್ಲಿ ಲಭ್ಯ


ತುಟ್ಟಿ ಭತ್ಯೆ ಲೆಕ್ಕಾಚಾರ ಹೇಗೆ..?
ಒಂದು ಸಲ ಭತ್ಯೆ ಇಲ್ಲದ ವೇತನ ನಿಗದಿ ಆದ ಮೇಲೆ ನೌಕರರ ಭತ್ಯೆಗಳ ಲೆಕ್ಕಾಚಾರ ನಡೆಯುತ್ತದೆ.  ಅಂದರೆ DA, TA, HRA,ಮೆಡಿಕಲ್ ರಿಎಂಬಸ್ಮೆಂಟ್ ಇತ್ಯಾದಿ ಭತ್ಯೆಗಳು ನಿರ್ಧಾರಿತವಾಗುತ್ತದೆ. ಬೆಲೆ ಏರಿಕೆಯಿಂದಾಗುವ ನಷ್ಟದ ಪರಿಹಾರ ರೂಪದಲ್ಲಿ ಡಿಎ ನೀಡಲಾಗುತ್ತದೆ.  ವರ್ಷಕ್ಕೆ ಎರಡು ಸಲ ಇದನ್ನು ನಿರ್ಧರಿಸಲಾಗುತ್ತದೆ.  ಮೊದಲ ಸಲ ಜನವರಿ ಹಾಗೂ ಎರಡನೇ ಸಲ ಜುಲೈ ತಿಂಗಳಿನಲ್ಲಿ ಡಿಎ ನಿರ್ಧಾರಿತವಾಗುತ್ತದೆ. 


ವರ್ಷದ ಮೊದಲ 6 ತಿಂಗಳ ಹಣದುಬ್ಬರದ ಸರಾಸರಿಯನ್ನು ಸರ್ಕಾರ ಲೆಕ್ಕಾಚಾರ ಮಾಡುತ್ತದೆ, ನಂತರ ದ್ವಿತೀಯಾರ್ಧದಲ್ಲಿ ಹಣದುಬ್ಬರದ ಸರಾಸರಿ ಆಧಾರದ ಮೇಲೆ ಡಿಎ ಹೆಚ್ಚಳವನ್ನು ನಿಗದಿಪಡಿಸಲಾಗುತ್ತದೆ.  ಡಿಎ ಯಾವಾಗಲೂ ಸರಾಸರಿ ಹಣದುಬ್ಬರಕ್ಕಿಂತ ಹೆಚ್ಚಾಗಿರುತ್ತದೆ..


ಇದನ್ನೂ ಓದಿ: SBI Online FD Fraud : ಪತ್ತೆಯಾಗಿದೆ ಸೈಬರ್ ಕಳ್ಳರ ಹೊಸ ವಂಚನೆ, ಒಂದೇ ಒಂದು ತಪ್ಪಿನಿಂದ ಆಗಲಿದೆ ಎಫ್‌ಡಿ ಖಾತೆ ಖಾಲಿ


ಹೆಚ್ಆರ್ ಎ, ಮೆಡಿಕಲ್ ಪರಿಹಾರ ಹೇಗೆ..?
ಡಿಎ ಘೋಷಿಸಿದ ನಂತರ, ಟಿಎ ಅಂದರೆ ಪ್ರವಾಸ ಭತ್ಯೆ (TA)ಅದೇ ಆಧಾರದ ಮೇಲೆ ಹೆಚ್ಚಾಗುತ್ತದೆ. ಆದ್ದರಿಂದ ಡಿಎ ಹೆಚ್ಚಳವು ಕೂಡಾ  ಟಿಎಗೆ ಲಿಂಕ್ ಆಗಿರುತ್ತದೆ. ಅದೇ ರೀತಿ  ಎಚ್‌ಆರ್‌ಎ ಮತ್ತು ಮೆಡಿಕಲ್ ರಿಂಬರಸ್ಮೆಂಟ್ ಕೂಡಾ ನಿರ್ಧಾರಿತವಾಗುತ್ತದೆ.  ಈ ಎಲ್ಲಾ ಭತ್ಯೆಗಳನ್ನು ಲೆಕ್ಕಹಾಕಿ ಕೇಂದ್ರ ನೌಕರರ ಮಾಸಿಕ ಸಿಟಿಸಿ (CTC) ನಿಗದಿಯಾಗುತ್ತದೆ. 


ಪಿಎಫ್, ಗ್ರ್ಯಾಚ್ಯುಟಿ ಕಡಿತದ ಲೆಕ್ಕಾಚಾರ ಹೀಗೆ.!
ಎಲ್ಲಾ ಭತ್ಯೆ ಮತ್ತು ಸಂಬಳ ಫಿಕ್ಸ್ ಆದ ಮೇಲೆ ಪಿಎಫ್ (PF)ಮತ್ತು ಮತ್ತು ಗ್ರ್ಯಾಚುಟಿ ಕಾಂಟ್ರಿಬ್ಯೂಶನ್ ಲೆಕ್ಕಾಚಾರ ಬರುತ್ತದೆ.  ಪಿಎಫ್ ಮತ್ತು ಗ್ರ್ಯಾಚುಟಿ ಕಾಂಟ್ರಿಬ್ಯೂಶನ್ ಕೂಡಾ ಮೂಲ ವೇತನ ಮತ್ತು ಡಿಎಗೆ ಲಿಂಕ್ ಆಗಿರುತ್ತದೆ.  ಎಲ್ಲಾ ಭತ್ಯೆಗಳು ಮತ್ತು ಪಿಎಫ್ ಗ್ರಾಚ್ಯುವಿಟಿ ಕಡಿತದ ಲೆಕ್ಕಾಚಾರದ ಬಳಿಕ  ನಂತರ ಕೇಂದ್ರ ನೌಕರರ ಟೇಕ್ ಹೋಮ್ ವೇತನ ನಿಗದಿಯಾಗುತ್ತದೆ. 
ಸೇರಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.