ನವದೆಹಲಿ: ಹೋಳಿ ಹಬ್ಬಕ್ಕೆ ಇನ್ನು ಒಂದು ವಾರ ಬಾಕಿಯಿದೆ. ಈ ಬಾರಿ ತಿಂಗಳ ಕೊನೆಯಲ್ಲಿ ಹೋಳಿ ಬರ್ತಿದೆ. ಬಹುತೇಕ ನೌಕರರ ಜೇಬು ಖಾಲಿಯಾಗಿರುವ ಸಮಯವದು. ಹಬ್ಬ ಆಚರಿಸಲು ಹಣವಿಲ್ಲದೆ ಪರದಾಡುವ ನೌಕರರ ಸಮಸ್ಯೆಗೆ ಸ್ಪಂದಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರಿ ನೌಕರರಿಗೆ ವಿಶೇಷ ಘೋಷಣೆ ಮಾಡಿದೆ.


COMMERCIAL BREAK
SCROLL TO CONTINUE READING

ಕೇಂದ್ರ ಸರ್ಕಾರ, ನೌಕರರಿಗೆ ವಿಶೇಷ ಉತ್ಸವದ ಮುಂಗಡ ಯೋಜನೆಯ ಲಾಭವನ್ನು ನೀಡುತ್ತಿದೆ. 7ನೇ ವೇತನ ಆಯೋಗ(7th Pay Commission)ದಲ್ಲಿ ಯಾವುದೇ ಮುಂಗಡ ವೇತನದ ಪ್ರಸ್ತಾಪವಿಲ್ಲ. ಆದ್ರೂ ಕೇಂದ್ರ ಸರ್ಕಾರ ವಿಶೇಷ ಯೋಜನೆಯನ್ನು ಘೋಷಿಸಿದೆ. 6ನೇ ವೇತನ ಆಯೋಗದಲ್ಲಿ 4500 ರೂಪಾಯಿ ಸಿಗ್ತಿತ್ತು. ಈಗ ಸರ್ಕಾರ ಇದನ್ನು 10 ಸಾವಿರಕ್ಕೆ ಏರಿಸಿದೆ.


West Bengal Election 2021: 'ನಾನೋರ್ವ ವ್ಯಾಪಾರಿ, ನನ್ನನ್ನು ನಂಬಿ' ಎಂದು Amit Shah ಹೇಳಿದ್ದೇಕೆ?


ಕೇಂದ್ರ ಸರ್ಕಾರಿ ನೌಕರರು(Central Govt Employees) ಹೋಳಿ ಆಚರಿಸಲು 10 ಸಾವಿರ ರೂಪಾಯಿ ಮುಂಗಡ ಹಣ ಪಡೆಯಬಹುದು. ಇದಕ್ಕೆ ಯಾವುದೇ ಬಡ್ಡಿಯಿಲ್ಲ. ಇದ್ರ ಲಾಭ ಪಡೆಯಲು ಮಾರ್ಚ್ 31 ಕೊನೆ ದಿನ. ನೌಕರರು ಇದನ್ನು 10 ಕಂತುಗಳಲ್ಲಿ ವಾಪಸ್ ನೀಡಬೇಕು. ನೂರು ರೂಪಾಯಿ ಮಾಸಿಕ ಕಂತುಗಳಲ್ಲಿ ಅದನ್ನು ಮರು ಪಾವತಿ ಮಾಡಬೇಕು.


Cyber Attack Alert On Transport System: ದೇಶದ ಸಾರಿಗೆ ವ್ಯವಸ್ಥೆ ಮೇಲೆ ಸೈಬರ್ ಕಳ್ಳರ ಕಣ್ಣು, NHAI ನೀಡಿರುವ ಎಚ್ಚರಿಕೆ ಏನು?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.