West Bengal Election 2021: 'ನಾನೋರ್ವ ವ್ಯಾಪಾರಿ, ನನ್ನನ್ನು ನಂಬಿ' ಎಂದು Amit Shah ಹೇಳಿದ್ದೇಕೆ?

West Bengal Election 2021 News - ಪಶ್ಚಿಮ ಬಂಗಾಳದ ಚುನಾವಣೆಗಾಗಿ 'ಸಂಕಲ್ಪ ಪತ್ರ' ಹೆಸರಿನಲ್ಲಿ ತನ್ನ ಇಲೆಕ್ಷನ್ ಮ್ಯಾನಿಫೆಸ್ಟೋ ಜಾರಿಗೊಳಿಸಿದೆ. ಇದರಲ್ಲಿ ಪಕ್ಷ ಹಲವು ದೊಡ್ಡ ಭರವಸೆಗಳನ್ನು ನೀಡಿದೆ. 

Written by - Nitin Tabib | Last Updated : Mar 22, 2021, 11:54 AM IST
  • ನಾನೋರ್ವ ವ್ಯಾಪಾರಿ ನನ್ನನ್ನು ನಂಬಿ ಎಂದ ಬಿಜೆಪಿ ಮುಖಂಡ ಅಮಿತ್ ಷಾ
  • ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲಾ ಲೆಕ್ಕಾಚಾರದ ಬಳಿಕವೆ ಈ ಘೋಷಣೆ ಎಂದಿದ್ದಾರೆ.
  • ಪಶ್ಚಿಮ ಬಂಗಾಳ ಚುನಾವಣೆಯ ಘೋಷಣಾ ಪತ್ರದಲ್ಲಿ ಬಿಜೆಪಿ ಮಹತ್ವದ ಘೋಷಣೆಗಳು
West Bengal Election 2021: 'ನಾನೋರ್ವ ವ್ಯಾಪಾರಿ, ನನ್ನನ್ನು ನಂಬಿ' ಎಂದು Amit Shah ಹೇಳಿದ್ದೇಕೆ? title=
I am a baniya, believe me (File Photo- Amit Shah)

ಕೊಲ್ಕತಾ:  West Bengal Election 2021 News - ಪಶ್ಚಿಮ ಬಂಗಾಳದ ಚುನಾವಣೆಗಾಗಿ 'ಸಂಕಲ್ಪ ಪತ್ರ' ಹೆಸರಿನಲ್ಲಿ ತನ್ನ ಇಲೆಕ್ಷನ್ ಮ್ಯಾನಿಫೆಸ್ಟೋ ಜಾರಿಗೊಳಿಸಿದೆ. ಇದರಲ್ಲಿ ಪಕ್ಷ ಹಲವು ದೊಡ್ಡ ಭರವಸೆಗಳನ್ನು ನೀಡಿದೆ. ಇದರಲ್ಲಿ ಪ್ರತಿಯೊಂದು ಕುಟುಂಬದ ಓರ್ವ ಸದಸ್ಯನಿಗೆ ಸರ್ಕಾರಿ ನೌಕರಿ ನೀಡುವ ಭರವಸೆ ಕೂಡ ನೀಡಲಾಗಿದೆ. ಮ್ಯಾನಿಫೆಸ್ಟೋ ಜಾರಿಗೊಳಿಸಿದ ಬಿಜೆಪಿ ಹಿರಿಯ ಮುಖಂಡ ಅಮಿತ್ ಷಾ, 'ನಾನೋರ್ವ ವ್ಯಾಪಾರಿ, ನನ್ನನ್ನು ನಂಬಿ' ಎಂದು ಹೇಳಿದ್ದಾರೆ. ಪ್ರತಿಯೊಂದು ಕುಟುಂಬದ ಓರ್ವ ಸದಸ್ಯನಿಗೆ ಸರ್ಕಾರಿ ನೌಕರಿ ನೀಡುವುದರಿಂಗಾಗುವ ಆರ್ಥಿಕ ವೆಚ್ಚದ ಕುರಿತು ಮಾತನಾಡುತ್ತಾ ಅವರು ಈ ವಿಷಯ ಹೇಳಿದ್ದಾರೆ.  ಪಕ್ಷದ ಪ್ರನಾಳಿಕೆಯಲ್ಲಿ ಮಾಡಿರುವ ಭರವಸೆಗಳನ್ನು ಪೂರ್ಣಗೊಳಿಸಲು ಹಣ ಎಲ್ಲಿಂದ ತರುವಿರಿ ಎಂದು ಹಲವು ಪತ್ರಕರ್ತರು ತಮ್ಮನ್ನು ವಿಚಾರಿಸುತ್ತಾರೆ. ಅದಕ್ಕೆ ನಾನು ಇದು ಪಶ್ಚಿಮ ಬಂಗಾಳದ ಒಟ್ಟು ಬಜೆಟ್ ನ ಶೇ.15ರಷ್ಟು ಮಾತ್ರ ಇದೆ. ನಾನೋರ್ವ ವ್ಯಾಪಾರಿ, ನನ್ನನ್ನು ನಂಬಿ (I am Baniya Believe Me). ಸಂಪೂರ್ಣ ಲೆಕ್ಕಾಚಾರದ ಬಳಿಕವೇ ಈ ಘೋಷಣೆ ಮಾಡಲಾಗಿದೆ ಎನ್ನುತ್ತೇನೆ ಎಂದಿದ್ದಾರೆ.

ತನ್ನ ಪ್ರಣಾಳಿಕೆಯಲ್ಲಿ ಭಾರತೀಯ ಜನತಾ ಪಕ್ಷ (BJP)ದಲಿತರು, ಹಿಂದುಳಿದವರ್ಗದವರು ಹಾಗೂ ಮಹಿಳೆಯರನ್ನು ಕೂಡ ಗುರಿಯಾಗಿಸಿದೆ. ಹುಟ್ಟುವ ಪ್ರತಿ ಹೆಣ್ಣು ಮಗುವಿಗೆ ರಾಜ್ಯದಲ್ಲಿ 50,000 ರೂ ಬಾಂಡ್ ನೀಡುವ ಘೋಷಣೆ ಕೂಡ ಪಕ್ಷ ಮಾಡಿದೆ. ಇದಲ್ಲದೆ ಮದುವೆಯ ಸಂದರ್ಭದಲ್ಲಿ ಯುವತಿಯರಿಗೆ 1 ಲಕ್ಷ ರೂ.ಸಹಾಯ ಧನ ಕೂಡ ನೀಡಲಾಗುವುದು ಮತ್ತು ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕೂಡ ಮಾಡಿಕೊಡಲಾಗುವುದು ಎಂಬ ಘೋಷಣೆಗಳು ಕೂಡ ಇದರಲ್ಲಿ ಶಾಮೀಲಾಗಿವೆ.

ಕೋಲ್ಕತ್ತಾ ಅನ್ನು ಫ್ಯೂಚರ್ ಸಿಟಿ ಮಾಡುವ ಕನಸು ತೋರಿಸಿದ ಬಿಜೆಪಿ
ಕೋಲ್ಕತ್ತಾವನ್ನು ಭವಿಷ್ಯದ ನಗರವನ್ನಾಗಿ ಮಾಡಲು ಬಿಜೆಪಿ 22,000 ಕೋಟಿ ರೂ. ವೆಚ್ಚ ಮಾಡಲಿದೆ ಎಂದು ಘೋಷಿಸಲಾಗಿದೆ. ಅಷ್ಟೇ ಅಲ್ಲ, ಬಾಗ್ದೋಗ್ರಾದಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು 100 ಹೊಸ ಸರ್ಕಾರಿ ಕಾಲೇಜುಗಳ ಸ್ಥಾಪನೆಯ ಬಗ್ಗೆಯೂ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ-West Bengal elections 2021: ಪ. ಬಂಗಾಳ ಎಲೆಕ್ಷನ್: ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ!

ಭೂಮಿ ರಹಿತ ರೈತರಿಗೆ ವಾರ್ಷಿಕ 4000 ರೂ. ನೀಡಲಾಗುವುದು
ಮಮತಾ ಬ್ಯಾನರ್ಜಿ ರಾಜ್ಯದ ಬಡವರಿಗಾಗಿ ಮದರ್ ಕ್ಯಾಂಟೀನ್ ಪ್ರಾರಂಭಿಸಿದ್ದಾರೆ. ಅದೇ ಮಾರ್ಗದಲ್ಲಿ, ಬಡವರಿಗೆ 5 ರೂಪಾಯಿಗೆ ಆಹಾರವನ್ನು ಒದಗಿಸಲು ಅನ್ನಪೂರ್ಣ ಕ್ಯಾಂಟೀನ್ ಪ್ರಾರಂಭಿಸುವುದಾಗಿಯೂ ಬಿಜೆಪಿ ಭರವಸೆ ನೀಡಿದೆ. ಇಲ್ಲಿಯವರೆಗೆ, ರೈತರಿಗೆ ವಾರ್ಷಿಕವಾಗಿ 6,000 ರೂ.ಗಳನ್ನು ನೀಡುತ್ತಿರುವ ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆ ಹೊರತುಪಡಿಸಿ, ಕೃಷಿಯಲ್ಲಿ ನಿರತರಾಗಿರುವ ಭೂಮಿ ರಹಿತ ರೈತರಿಗೆ ವಾರ್ಷಿಕವಾಗಿ ರೂ.4000 ನೀಡುವುದಾಗಿ ಭರವಸೆ ನೀಡಿದೆ.

ಇದನ್ನೂ ಓದಿ-Amit Shah: 'ಯುವಕರು ನಮಗೆ ಮತ ನೀಡಿದ್ರೆ ನಿರುದ್ಯೋಗವನ್ನು ಶೇ.40ಕ್ಕಿಂತ ಕಡಿಮೆ ಮಾಡುತ್ತೇವೆ'

1 ರೂ. ಪ್ರತಿ ಕೆ.ಜಿ ಅಕ್ಕಿ ಮತ್ತು ಗೋಧಿ ವಿತರಣೆ
ಇದಲ್ಲದೆ, ಬಡವರಿಗೆ ಪ್ರತಿ ಕೆಜಿಗೆ 1 ರೂ ದರದಲ್ಲಿ ಗೋಧಿ ಮತ್ತು ಅಕ್ಕಿ ನೀಡುವುದಾಗಿ ಘೋಷಣಾ ಪತ್ರದಲ್ಲಿ ಹೇಳಲಾಗಿದೆ. ಪಕ್ಷವು ಪ್ರಣಾಳಿಕೆಯಲ್ಲಿ ಸಾಮಾಜಿಕ ಸಮೀಕರಣಗಳ ಬಗ್ಗೆ ಮಾತನಾಡಿದೆ. ಮಹಿಷ್ಯ, ತೇಜಿ ಮತ್ತು ಇತರ ಹಲವು ಹಿಂದೂ ಜಾತಿಗಳನ್ನು ಒಬಿಸಿ ಕೋಟಾದ ವ್ಯಾಪ್ತಿಗೆ ತರುವುದಾಗಿ ಬಿಜೆಪಿ ಘೋಷಿಸಿದೆ.

ಇದನ್ನೂ ಓದಿ-"ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 200 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ"

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News