7th Pay Commission: ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ, ಮತ್ತೊಂದು ಭತ್ಯೆಗೆ ಸಿಕ್ತು ಅನುಮೋದನೆ
7th Pay Commission: ಸರ್ಕಾರದ ಈ ನಿರ್ಧಾರದಿಂದ, ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು ಮತ್ತು ವೈದ್ಯಕೀಯ ಕಾಲೇಜು ಶಿಕ್ಷಕರ ವೇತನ ಹೆಚ್ಚಾಗಲಿದೆ. ಈ ಕುರಿತು ವಿವರಗಳನ್ನು ತಿಳಿದುಕೊಳೋಣ.
7th Pay Commission: ಸರ್ಕಾರಿ ನೌಕರರ ಪಾಲಿಗೆ ಮತ್ತೊಂದು ಸಂತಸಸ ಸುದ್ದಿ ಪ್ರಕಟವಾಗಿದೆ. ಗುಜರಾತ್ ಸರ್ಕಾರವು ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು ಮತ್ತು ಗುಜರಾತ್ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸೊಸೈಟಿ (GMERS) ವೈದ್ಯಕೀಯ ಕಾಲೇಜುಗಳ ಶಿಕ್ಷಕರಿಗೆ ಏಳನೇ ವೇತನ ಆಯೋಗದ (7th Pay Commission) ಶಿಫಾರಸಿನಂತೆ Non-Practice Allowance (NPA) ಹಸಿರು ನಿಶಾನೆ ತೋರಿಸಿದೆ. ಅಂದರೆ ಈ ಎಲ್ಲಾ ನೌಕರರ ವೇತನದಲ್ಲಿ ಒಮ್ಮಿಂದೊಮ್ಮೆ ಭಾರಿ ಏರಿಕೆಯಗಲಿದೆ.
ಯಾರಿಗೆ ಸಿಗಲಿದೆ ಈ ಭತ್ಯೆ?
ಗುಜರಾತ್ ಉಪಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವ ನಿತಿನ್ ಪಟೇಲ್ (Nitin Patel) ಈ ನಿರ್ಧಾರವನ್ನು ಘೋಷಿಸಿದ್ದಾರೆ. ಇದು ವೈದ್ಯರು ಮತ್ತು ವೈದ್ಯಕೀಯ ಕಾಲೇಜು ಶಿಕ್ಷಕರಿಗೆ ರಕ್ಷಾಬಂಧನ್ ಉಡುಗೊರೆ ಎಂದು ಅವರು ಹೇಳಿದ್ದಾರೆ. ಶಿಕ್ಷಕರು ಮತ್ತು ವೈದ್ಯರು ಇದಕ್ಕಾಗಿ ದೀರ್ಘಕಾಲದಿಂದ ಬೇಡಿಕೆ ಇಟ್ಟಿದ್ದರು ಮತ್ತು ಮತ್ತು ಈ ಬಗ್ಗೆ ಮುಷ್ಕರವನ್ನೂ ಕೂಡ ನಡೆಸಿದ್ದರು. ಈಗ ಈ ನಿರ್ಧಾರದ ನಂತರ, ನೌಕರರ ವೇತನ ಪ್ರತಿ ತಿಂಗಳು ಹೆಚ್ಚಾಗಲಿದೆ.
ವೈದ್ಯರಿಗೆ ಹಬ್ಬದ ಉಡುಗೊರೆ
ಈ ಕುರಿತು ತನ್ನ ಫೇಸ್ ಬುಕ್ ಪುಟದಲ್ಲಿ ನಿತೀನ್ ಪಟೇಲ್ ಪೋಸ್ಟ್ ವೊಂದನ್ನು ಕೂಡ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಪ್ರಕಾರ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ಸರ್ಕಾರಿ ಆಸ್ಪತ್ರೆಗಳ ಅರ್ಹ ಸೇವೆ ಸಲ್ಲಿಸುವ ವೈದ್ಯರು ಮತ್ತು GMERS ವೈದ್ಯಕೀಯ ಕಾಲೇಜಿನ ಶಿಕ್ಷಕರಿಗೆ ರಕ್ಷಾಬಂಧನ ಉಡುಗೊರೆಯಾಗಿ 7 ನೇ ವೇತನ ಆಯೋಗದ ಪ್ರಕಾರ ಅಭ್ಯಾಸೇತರ ಭತ್ಯೆಯನ್ನು (NPA) ಅನುಮೋದಿಸಿದ್ದಾರೆ.
ಇದನ್ನೂ ಓದಿ- Sonu Sood tax evasion case : ಸರ್ಕಾರಕ್ಕೆ 20 ಕೋಟಿ ತೆರಿಗೆ ವಂಚಿಸಿದ ನಟ ಸೋನು ಸೂದ್!
ಮುಷ್ಕರ ಹಿಂಪಡೆಯುವ ಷರತ್ತಿನ ಮೇರೆಗೆ ಅನುಮೋದನೆ
ಏಳನೇ ವೇತನ ಆಯೋಗದ ಪ್ರಕಾರ ಈ ವರ್ಷದ ಮೇ ತಿಂಗಳಲ್ಲಿ, ಗುಜರಾತ್ ಸರ್ಕಾರ ಆರು ಸರ್ಕಾರಿ ವೈದ್ಯಕೀಯ ಕಾಲೇಜುಗಳ ಶಿಕ್ಷಕರ NPA ಅನ್ನು ಅನುಮೋದಿಸಿತ್ತು. ಆದರೆ ಇದೀಗ ಕೆಲವು ತಿಂಗಳುಗಳ ನಂತರ, 8 GMERS ವೈದ್ಯಕೀಯ ಕಾಲೇಜುಗಳ ಶಿಕ್ಷಕರೊಂದಿಗೆ ಅವರ ಮುಷ್ಕರವನ್ನು ಹಿಂತೆಗೆದುಕೊಳ್ಳುವ ಷರತ್ತಿನ ಮೇಲೆ ಅವರಿಗೂ ಕೂಡ ಈ ಅನುಮೋದನೆಯನ್ನು ನೀಡಲಾಗಿದೆ.
ಇದನ್ನೂ ಓದಿ- PAN Aadhaar Link:ಮತ್ತೆ ವಿಸ್ತರಣೆಯಾದ ಆಧಾರ್-ಪ್ಯಾನ್ ಜೋಡಣೆಯ Deadline
ನಿರ್ಣಯಕ್ಕೆ ಸ್ವಾಗತ
ಸರ್ಕಾರದ ಈ ನಿರ್ಣಯವನ್ನು ಸ್ವಾಗತಿಸಿರುವ ಗುಜರಾತ್ ವೈದ್ಯಕೀಯ ಶಿಕ್ಷಕರ ಸಂಘದ (GMTA) ಅಧ್ಯಕ್ಷ ಡಾ.ರಜನೀಶ್ ಪಟೇಲ್, ಜಿಎಂಇಆರ್ ಎಸ್ ವೈದ್ಯಕೀಯ ಕಾಲೇಜಿನ ಶಿಕ್ಷಕರು ಮತ್ತು ಸೇವೆ ಸಲ್ಲಿಸುತ್ತಿರುವ ವೈದ್ಯರ ಬಾಕಿ ಇರುವ ಬೇಡಿಕೆಗಳನ್ನು ಸರ್ಕಾರ ಸ್ವೀಕರಿಸಿರುವುದು ಸ್ವಾಗತಾರ್ಹ ಹೆಜ್ಜೆ ಎಂದು ಹೇಳಿದ್ದಾರೆ. GMERS ವೈದ್ಯಕೀಯ ಕಾಲೇಜುಗಳು ರಾಜ್ಯ ಆರೋಗ್ಯ ಇಲಾಖೆಯ ಗುಜರಾತ್ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸೊಸೈಟಿಯ ಅಡಿಯಲ್ಲಿ ಸ್ಥಾಪಿಸಲಾದ ಒಂದು ಅರೆ ಸರ್ಕಾರಿ ಸಂಸ್ಥೆಯಾಗಿದೆ.
ಇದನ್ನೂ ಓದಿ-ಬಾಂದ್ರಾ-ಕುರ್ಲಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತ, ಅಪಘಾತದಲ್ಲಿ 14 ಕಾರ್ಮಿಕರಿಗೆ ಗಾಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.