7th Pay Commission: ಇನ್ಮುಂದೆ ನಿಂತುಹೊಗಲ್ಲ ನಿಮ್ಮ ಬಡ್ತಿ, ಸರ್ಕಾರದ ಸಿದ್ಧತೆ ಏನು ?
7th Pay Commission: ಪ್ರಾಮಾಣಿಕವಾಗಿ ಕೆಲಸ ಮಾಡುವ ಸರ್ಕಾರಿ ನೌಕರರ ಮನೋಸ್ಥೈರ್ಯ ಹೆಚ್ಚಿಸಲು ಮೋದಿ ಸರ್ಕಾರ ಮತ್ತೊಮ್ಮೆ ಪ್ರಯತ್ನಿಸಿದೆ. ಪ್ರಾಮಾಣಿಕ ಕೆಲಸ ಮತ್ತು ಉತ್ತಮ ಸಾಧನೆ ಮಾಡುವವರ ಬಡ್ತಿಗೆ ತೊಂದರೆಯಾಗಲು ಅವಕಾಶ ನೀಡದಿರಲು ಶೀಘ್ರದಲ್ಲೇ ವ್ಯವಸ್ಥೆಯನ್ನು ಸಿದ್ಧಪಡಿಸಲಾಗುವುದು ಎಂದು ಕೇಂದ್ರ ಸಚಿವ ಜೀತೇಂದ್ರ ಸಿಂಗ್ ಹೇಳಿದ್ದಾರೆ.
7th Pay Commission - ನವದೆಹಲಿ: ಬಡ್ತಿಗೆ ಸಂಬಂಧಿಸಿದಂತೆ ಇರುವ ಸರ್ಕಾರಿ ನೌಕರರ ದೂರುಗಳಿಗೆ ಇದೀಗ ಶೀಘ್ರವೇ ಪರಿಹಾರ ಸಿಗಲಿದೆ. Department of Personnel and Training (DoPT) ಬಡ್ತಿಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ಸುಲಭ ಮತ್ತು ವೇಗವಾಗಿ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ (MoS, Personnel, Jitendra Singh) ಹೇಳಿದ್ದಾರೆ. ಆದರೆ, ಕಾಲಕಾಲಕ್ಕೆ ದಾಖಲಿಸಲಾಗುತ್ತಿರುವ ಪ್ರಕರಣಗಳ ಹಿನ್ನೆಲೆ ಈ ಪ್ರಕ್ರಿಯೆಗೆ ಅಡೆತಡೆ ಉಂಟಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಪ್ರಾಮಾಣಿಕತೆ ಕಾಗೂ ಉತ್ತಮ ಸಾಧನೆಗೆ ಪ್ರಾಧಾನ್ಯತೆ'
ಕೇಂದ್ರ ಮಂತ್ರಿ ಜಿತೇಂದ್ರ ಸಿಂಗ್ ಭಾರತೀಯ ಮಜ್ದೂರ್ ಸಂಘ (BMS) ನಿಯೋಗದ ಜೊತೆಗೆ ನಡೆಸಿರುವ ಸಭೆಯಲ್ಲಿ ಈ ವಿಷಯ ತಿಳಿಸಿದ್ದಾರೆ. ಸರ್ಕಾರವು (Modi Government) ಪ್ರಾಮಾಣಿಕ ಮತ್ತು ಉತ್ತಮ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಉತ್ತೇಜಿಸಲಿದೆ ಎಂದು ಅವರು ಹೇಳಿದರು, ಎಲ್ಲಕ್ಕಿಂತ ಹೆಚ್ಚಾಗಿ ಪ್ರಾಮಾಣಿಕತೆ ಮತ್ತು ಕಾರ್ಯಕ್ಷಮತೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಅಧಿಕಾರಿಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಉತ್ತಮ ಕೆಲಸದ ವಾತಾವರಣವನ್ನು ಸೃಷ್ಟಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
'ಅನಗತ್ಯ ಪ್ರಕರಣ ದಾಖಲಿಸುವುದರಿಂದ ಅಡೆತಡೆ'
ಅನಗತ್ಯ ಮೊಕದ್ದಮೆಗಳು ಬಡ್ತಿ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತಿವೆ. ಈ ಕುರಿತು ತಾವು ಖುದ್ದಾಗಿ ಹಲವಾರು ನೌಕರ ಸಂಘಟನೆಗಳನ್ನು ಭೇಟಿಯಾಗಿ ಈ ಕುರಿತು ಮನವಿ ಮಾಡುತ್ತಿರುವುದಾಗಿ ಹೇಳಿದ್ದಾರೆ. ಇದರಿಂದ ಹಲವು ವಿಸಂಗತಿಗಳನ್ನು ನಾವು ತೊಡೆದುಹಾಕಬಹುದು ಎಂದು ಅವರು ಹೇಳಿದ್ದಾರೆ. ಈ ವೇಳೆ ಅವರು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಅಂಗೀಕರಿಸಲ್ಪಟ್ಟ 'Mission Karmayogi' ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.
ಇದನ್ನುಓದಿ-ಸರ್ಕಾರಿ ನೌಕರರನ್ನು ಕರ್ಮಯೋಗಿಗಳನ್ನಾಗಿಸಲು ಬಂತು PM Modi ಅವರ 'Mission Karmayogi'
ಬಡ್ತಿ ಪ್ರಕ್ರಿಯೆ ಮೇಲೆ ಸರ್ಕಾರದ ಚಿತ್ತ
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರ ಮುಂದೆ ಹಲವಾರು ಪ್ರತ್ಯೇಕ ಜ್ಞಾಪಕ ಪತ್ರಗಳನ್ನು ಕೂಡ ಪ್ರಸ್ತುತಪಡಿಸಲಾಗಿದ್ದು, ಇವುಗಳ ಮಾಧ್ಯಮದ ಮೂಲಕ ಈ ಪ್ರಕ್ರಿಯೆಯ ಪ್ರಮುಖ ವಿಷಯಗಳನ್ನು ಮಂಡಿಸಲಾಗಿದೆ. ಈ ಜ್ಞಾಪಕ ಪಾತ್ರಗಳಲ್ಲಿ ಸರ್ವೆ ಆಫ್ ಇಂಡಿಯಾ ಅಧಿಕಾರಿಗಳ ಬಡ್ತಿ ಬಗ್ಗೆಯೂ ಉಲ್ಲೇಖಿಸಲಾಗಿದೆ. ಅಲ್ಲಿ ಖಾಲಿ ಉಳಿದಿರುವ ಅಧೀಕ್ಷಕ ಸರ್ವೇಯರ್ ಗಳ ಹುದ್ದೆಗಳು ಮತ್ತು ಗ್ರೂಪ್ ಎ ಮತ್ತು ಗ್ರೂಪ್ ಬಿ ಅಧಿಕಾರಿಗಳ ನೇಮಕಾತಿ ಕುರಿತು ಕೂಡ ಉಲ್ಲೇಖಿಸಲಾಗಿದೆ. ಈ ಎಲ್ಲ ಸಮಸ್ಯೆಗಳನ್ನು ಪ್ರತ್ಯೇಕವಾಗಿ ನೋಡುತ್ತೇವೆ ಮತ್ತು ಶೀಘ್ರದಲ್ಲೇ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ನಿಯೋಗಕ್ಕೆ ಭರವಸೆ ನೀಡಿದ್ದಾರೆ. ಅದಲ್ಲದೆ ಈ ಕುರಿತು ಹೆಚ್ಚಿನ ಚರ್ಚೆಗಳನ್ನು ಕೂಡ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ- Budget 2021 : ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್ ಪ್ರಯೋಜನಗಳಿವು
'ಆರು ವರ್ಷಗಳಲ್ಲಿ ಭಾರಿ ಸುಧಾರಣೆ'
ಇದಕ್ಕೂ ಮೊದಲು ಜನವರಿ 6 ರಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಪಂಜಾಬ್ ಸಿವಿಲ್ ಸರ್ವೀಸಸ್ ಅಧಿಕಾರಿಗಳೊಂದಿಗೆ ಮಾತನಾಡಿದ್ದರು.ಇದರಲ್ಲಿ ಭಾರತೀಯ ಆಡಳಿತ ಸೇವೆಗಳಲ್ಲಿನ ತಮ್ಮ ಇಂಡಕ್ಷನ್ ಪ್ರಕರಣಗಳನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದರು. ಈ ಮೊದಲು ಈ ಪ್ರಕ್ರಿಯೆಯು ತುಂಬಾ ನಿಧಾನವಾಗಿತ್ತು, ಆದರೆ ಕಳೆದ 6 ವರ್ಷಗಳಲ್ಲಿ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಇದು ಸಾಕಷ್ಟು ಸುಧಾರಿಸಿದೆ ಎಂದು ಅವರು ಹೇಳಿದ್ದಾರೆ. ವಿವಿಧ ಸಚಿವಾಲಯಗಳ ಡಿಒಪಿಟಿ ಸಂಪರ್ಕ ಇಲಾಖೆಗಳು, ಬಡ್ತಿ ಪ್ರಕ್ರಿಯೆಗಳಲ್ಲಿನ ಅಡೆತಡೆಗಳನ್ನು ತೆಗೆದುಹಾಕಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಚರ್ಚಿಸುತ್ತಿವೆ ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಇದನ್ನು ಓದಿ-WhatsApp New Privacy Policy ಹಿಂಪಡೆಯಲು ಕೇಂದ್ರದಿಂದ ಪತ್ರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.