ನವದೆಹಲಿ : 50 ಲಕ್ಷ ಕೇಂದ್ರ ಸರ್ಕಾರದ (Central government) ನೌಕರರು ಮತ್ತು ಲಕ್ಷಾಂತರ ಪಿಂಚಣಿದಾರರಿಗೆ ಹೊಸ ವರ್ಷದ ಶುಭ ಸುದ್ದಿ.  ಕೇಂದ್ರ ಸರ್ಕಾರ ತನ್ನ ನೌಕರರ ವೇತನ, ಪಿಂಚಣಿ  ಹೆಚ್ಚಿಸುವ ಸಾಧ್ಯತೆ ಇದೆ.  ಕೇಂದ್ರ ಸರ್ಕಾರ  ಏಳನೇ ವೇತನ ಆಯೋಗದ (7th Pay  Commission) ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಸರ್ಕಾರಿ ನೌಕರರ ಸಂಬಳ ಜಾಸ್ತಿಯಾಗಲಿದೆ. ಕರೋನಾ ಮಹಾಮಾರಿ (Corona) ಕಾರಣದಿಂದಾಗಿ ಕಳೆದ  ವರ್ಷ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ತಡೆ ಹಿಡಿಯಲಾಗಿತ್ತು. ಈ ತುಟ್ಟಿ ಭತ್ಯೆ ಕೂಡಾ ಜೂನ್ ವೇಳೆಗೆ ಸರಿಯಾಗುವ ಸಾಧ್ಯತೆಗಳಿವೆ. 


COMMERCIAL BREAK
SCROLL TO CONTINUE READING

ಸಾಮಾನ್ಯವಾಗಿ ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಶೇಕಡಾ 21 ರಷ್ಟು ತುಟ್ಟಿ ಭತ್ಯೆ ಸಿಗುತ್ತದೆ. ಆದರೆ, ಈಗ ಶೇ.  17ರಷ್ಟು ತುಟ್ಟಿ ಭತ್ಯೆ ನೀಡಲಾಗುತ್ತಿದೆ. ಜೂನ್ 2021 ರವರೆಗೆ ಈ ವ್ಯವಸ್ಥೆ ಇರಲಿದೆ.  ಜೂನ್ 2021 ರ ನಂತರ ಸರ್ಕಾರವು ತುಟ್ಟಿಭತ್ಯೆ ಹೆಚ್ಚಿಸಬಹುದು ಎನ್ನಲಾಗಿದೆ. ತುಟ್ಟಿ ಭತ್ಯೆ ಹೆಚ್ಚಾದರೆ, ನೌಕರರ ಸಂಬಳ, (Salary) ಪಿಂಚಣಿದಾರರ ಪಿಂಚಣಿ ಎರಡೂ ಕೂಡಾ ಹೆಚ್ಚಾಗುತ್ತದೆ.  ಸಾಮಾನ್ಯವಾಗಿ ಸರ್ಕಾರ (Central Government) ಜನವರಿ 1 ಮತ್ತು ಜುಲೈ 1 ರಂದು ತುಟ್ಟಿ ಭತ್ಯೆಯನ್ನು ಹೆಚ್ಚಿಸುತ್ತದೆ.


ALSO READ : 7th pay commission: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದ ಮೋದಿ ಸರ್ಕಾರ


5 ಸಾವಿರದಿಂದ 25 ಸಾವಿರದವರೆಗೆ ಸಾಲರಿ ಹೈಕ್..!. 
ಮಾಧ್ಯಮ ವರದಿಗಳ ಪ್ರಕಾರ, ಗೆಜೆಟೆಡ್ ಮತ್ತು ನಾನ್ ಗಜೆಟೆಡ್ ವೈದ್ಯಕೀಯ ಸಿಬ್ಬಂದಿಗೆ, ತಿಂಗಳಿಗೆ ಕನಿಷ್ಠ 5000 ರೂ.ಗಳ ಹೆಚ್ಚಳವಾಗಲಿದೆ.  ಇದರೊಂದಿಗೆ ಅವರ ಎಚ್‌ಆರ್‌ಎ, (HRA) ಡಿಎ ಮತ್ತು ಟಿಎ ಕೂಡ ಹೆಚ್ಚಾಗಬಹುದು. ಒಟ್ಟಾರೆ ವಿವಿಧ ಸ್ತರಗಳಲ್ಲಿ 5 ಸಾವಿರದಿಂದ 25 ಸಾವಿರ ರೂಪಾಯಿ ತನಕ ವೇತನ ಹೆಚ್ಚಳವಾಗಬಹುದು.  7 ನೇ ವೇತನ ಆಯೋಗದ (7th Pay Commission) ಪ್ರಕಾರ ಜುಲೈನಲ್ಲಿ ಸರ್ಕಾರ ತುಟ್ಟಿ ಭತ್ಯೆ ಹೆಚ್ಚಳ ಮಾಡುವ ಸಾಧ್ಯತೆ ಇದೆ. 


2014ರಲ್ಲಿ 7ನೇ ವೇತನ ಆಯೋಗ ರಚನೆ:
ಏಳನೇ ವೇತನ ಆಯೋಗವನ್ನು 2014 ರಲ್ಲಿ ರಚಿಸಲಾಯಿತು. ಇದರ ಮೇರೆಗೆ ಕೇಂದ್ರ ನೌಕರರ ವೇತನ, ಪಿಂಚಣಿ ಮತ್ತು ತುಟ್ಟಿ ಭತ್ಯೆ ಎಲ್ಲವೂ ಈ ಆಯೋಗದ ಶಿಫಾರಸ್ಸಿನಂತೆ ನಿರ್ಧಾರವಾಗುತ್ತದೆ.  ಇದೇ ವೇಳೆ ರೈಲ್ವೆ (Railway) ಕೂಡಾ ತನ್ನ ನಾನ್ ಗೆಜೆಟೆಡ್ ಸಿಬ್ಬಂದಿಯ ವೇತನ ಹೆಚ್ಚಳಕ್ಕೆ ಅನುಮೋದನೆ ನೀಡಿದೆ.


ALSO READ : ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ಸ್ಕಾಲರ್‍ಶಿಪ್...!


ನೌಕರರ ಕನಿಷ್ಠ ವೇತನದಲ್ಲೂ ಹೆಚ್ಚಳ..?  
ಕನಿಷ್ಠ ವೇತನ 26000 ಇರಬೇಕು ಎಂದು ಕೇಂದ್ರ ಸರ್ಕಾರದ ನೌಕರರು ಒತ್ತಾಯಿಸುತ್ತಿದ್ದಾರೆ. ಪ್ರಸ್ತುತ 18 ಸಾವಿರ ವೇತನ ಸಿಗುತ್ತಿದೆ.  7ನೇ ವೇತನ ಆಯೋಗದಡಿ ಕೇಂದ್ರ ನೌಕರರ  ಈ ಬೇಡಿಕೆ ಕೂಡಾ ಈಡೇರಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G


iOS Link - https://apple.co/3loQYe
 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.