7th Pay Commission Update: ನಿವೃತ್ತ ಕೇಂದ್ರ ಸರ್ಕಾರಿ ನೌಕರರ (Central Government Employees) ಪಾಲಿಗೆ ಒಳ್ಳೆಯ ಸುದ್ದಿ ಪ್ರಕಟವಾಗಿದೆ. ಹಣಕಾಸು ಸಚಿವಾಲಯದ ಖರ್ಚು ಇಲಾಖೆಯು ನಿವೃತ್ತ ಕೇಂದ್ರ ನೌಕರರಿಗೆ ನಗದು ಪಾವತಿ ಮತ್ತು ಗ್ರಾಚ್ಯುಟಿ ನೀಡಿದೆ. ಜನವರಿ 2020 ರಿಂದ ಜೂನ್ 2021 ರವರೆಗಿನ ಗ್ರಾಚ್ಯುಟಿ ಮಾಹಿತಿಯನ್ನು ಇಲಾಖೆ ಬಿಡುಗಡೆ ಮಾಡಿದೆ. ಸಚಿವಾಲಯವು ಜ್ಞಾಪಕ ಪತ್ರವನ್ನು ನೀಡುವ ಮೂಲಕ ಈ ಬಗ್ಗೆ ಮಾಹಿತಿಯನ್ನು ನೀಡಿದೆ. ಈ ಜ್ಞಾಪಕ ಪತ್ರದಲ್ಲಿ, 1 ಜನವರಿ 2020 ರಿಂದ 30 ಜೂನ್ 2021 ರವರೆಗೆ ಭತ್ಯೆಯ ಬಿಡುಗಡೆಯ ಕುರಿತು ಮಾಹಿತಿಯನ್ನು ನೀಡಲಾಗಿದೆ.


COMMERCIAL BREAK
SCROLL TO CONTINUE READING

ಗ್ರ್ಯಾಚುಟಿ ಹಾಗೂ ಲೀವ್ ಎನ್ಕ್ಯಾಷ್ಮೆಂಟ್ ಮಾಹಿತಿ
ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಈ ಟ್ವೀಟ್ ನಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಗ್ರ್ಯಾಚ್ಯುಟಿ (Gratuity) ಹಾಗೂ ಲೀವ್ ಎನ್ಕಾಶ್ಮೆಂಟ್ (Leave Encashment) ಕುರಿತು ಸೆಪ್ಟೆಂಬರ್ 7, 2021 ರಂದು ಜ್ಞಾಪನಾ ಪತ್ರವನ್ನು ನೀಡಿದೆ ಎಂದು ಹೇಳಲಾಗಿದೆ. ಜನವರಿ 2020 ರಿಂದ ಜೂನ್ 2021ರ ಅವಧಿಯಲ್ಲಿ ನಿವೃತ್ತರಾಗಿರುವ ಉದ್ಯೋಗಿಗಲಿದೆ ಎಂದು ಅನ್ವಯಿಸಲಿದೆ.


India vs England: ಭಾರತ ಮತ್ತು ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯ ರದ್ದು


ಕೇಂದ್ರೀಯ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳು, 1972 ರಲ್ಲಿ ಪ್ರಸ್ತುತ ಇರುವ ನಿಬಂಧನೆಗಳ ಪ್ರಕಾರ, ನಿವೃತ್ತಿ ಅಥವಾ ಮರಣದ ದಿನಾಂಕದ ಡಿಎಯನ್ನು ಗ್ರ್ಯಾಚುಟಿ ಗಣನೆಯ ಆಧಾರದ ಮೇಲೆ ಭಟ್ಯಯನ್ನು ಪರಿಗಣಿಸಲಾಗುತ್ತದೆ. ಹಣಕಾಸು ಸಚಿವಾಲಯವು ನೀಡಿರುವ ಜ್ಞಾಪಕ ಪತ್ರದಲ್ಲಿ, ಜನವರಿ 1, 2020 ರಿಂದ ಜೂನ್ 30, 2021 ರವರೆಗೆ, ನಿವೃತ್ತ ಕೇಂದ್ರ ನೌಕರರು ಮತ್ತು ಈಗಾಗಲೇ ನಿವೃತ್ತ ನೌಕರರಿಗೆ ರಜೆಯ ಬದಲಾಗಿ ಗ್ರಾಚ್ಯುಟಿ ಮತ್ತು ನಗದು ಪಾವತಿ ಒಂದು ಬಾರಿ ನಿವೃತ್ತಿ ಪ್ರಯೋಜನಗಳಾಗಿವೆ ಎಂದು ಜ್ಞಾಪಕ ಪತ್ರದಲ್ಲಿ ಹೇಳಲಾಗಿದೆ.


ಇದನ್ನೂ ಓದಿ- New Airport: ಭಾರತದಲ್ಲಿ ಶೀಘ್ರದಲ್ಲೇ 5 ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ, ಇಲ್ಲಿದೆ ವಿವರ


ತುಟ್ಟಿ ಭತ್ಯೆ ದರ ಕೆಳಗಿನಂತಿದೆ
>> ಜನವರಿ 1, 2020 ರಿಂದ ಜೂನ್ 30. 2020 - ಮೂಲ ವೇತನದ ಶೇ.21ರಷ್ಟು 
>> ಜನವರಿ 1, 2020 ರಿಂದ ಡಿಸೆಂಬರ್ 30, 2020 - ಮೂಲ ವೇತನದ ಶೇ.24ರಷ್ಟು 
>> ಜನವರಿ 1, 2021 ರಿಂದ ಮೇ 30, 2021ರವರೆಗೆ - ಮೂಲ ವೇತನದ ಶೇ. 28ರಷ್ಟು 


ಸಿಸಿಎಸ್ ಪಿಂಚಣಿ ನಿಯಮಗಳು, 1972 ರಲ್ಲಿ ನೀಡಲಾಗಿರುವ ಎಲ್ಲಾ ಇತರ ಷರತ್ತುಗಳು ಮತ್ತು ಪಿಂಚಣಿ ಮತ್ತು ಪಿಡಬ್ಲ್ಯೂ ಇಲಾಖೆಯ ಆದೇಶಗಳು ಇದಕ್ಕೆ ಅನ್ವಯಿಸಲಿವೆ.


ಇದನ್ನೂ ಓದಿ-ಟಿ20 ವಿಶ್ವಕಪ್‌ಗಾಗಿ ಭಾರತದ ತಂಡವನ್ನ ಪ್ರಕಟಿಸಿದ ಬಿಸಿಸಿಐ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.