New Airport: ಭಾರತದಲ್ಲಿ ಶೀಘ್ರದಲ್ಲೇ 5 ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ, ಇಲ್ಲಿದೆ ವಿವರ

New Airport: ಗುಜರಾತಿನ ಕೇಶೋಡ್, ಜಾರ್ಖಂಡ್‌ನ ದೇವಘರ್, ಮಹಾರಾಷ್ಟ್ರದ ಗೊಂಡಿಯಾ ಮತ್ತು ಸಿಂಧುದುರ್ಗ ಮತ್ತು ಉತ್ತರ ಪ್ರದೇಶದ ಕುಶಿನಗರದಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುವುದು.

Written by - Yashaswini V | Last Updated : Sep 10, 2021, 11:15 AM IST
  • ಉಡಾನ್ ಯೋಜನೆಯಡಿ ಐದು ಹೊಸ ವಿಮಾನ ನಿಲ್ದಾಣಗಳು, ಆರು ಹೆಲಿಪೋರ್ಟ್‌ಗಳು ಮತ್ತು 50 ಹೊಸ ಮಾರ್ಗಗಳ ನಿರ್ಮಾಣ
  • ಮುಂದಿನ 100 ದಿನಗಳಲ್ಲಿ 50 ಹೊಸ ಮಾರ್ಗಗಳನ್ನು ಆರಂಭಿಸುವ ಗುರಿ, ಇದರಲ್ಲಿ 30 ಹೊಸ ಮಾರ್ಗಗಳನ್ನು ಅಕ್ಟೋಬರ್‌ನಲ್ಲಿಯೇ ಆರಂಭಿಸಲಾಗುವುದು- ವಿಮಾನಯಾನ ಸಚಿವ
  • ಡೆಹ್ರಾಡೂನ್ ಮತ್ತು ಅಗರ್ತಲಾಗಳಿಗೂ ಉಡುಗೊರೆ
New Airport: ಭಾರತದಲ್ಲಿ ಶೀಘ್ರದಲ್ಲೇ 5 ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ, ಇಲ್ಲಿದೆ ವಿವರ title=
Union civil aviation minister Jyotiraditya Scindia (Photo Credit-ANI)

New Airport: ಪ್ರಾದೇಶಿಕ ಸಂಪರ್ಕ ಉಡಾನ್ ಯೋಜನೆಯಡಿ ಐದು ಹೊಸ ವಿಮಾನ ನಿಲ್ದಾಣಗಳು, ಆರು ಹೆಲಿಪೋರ್ಟ್‌ಗಳು ಮತ್ತು 50 ಹೊಸ ಮಾರ್ಗಗಳನ್ನು ನಿರ್ವಹಿಸುವುದು ಸೇರಿದಂತೆ ವಾಯುಯಾನ ಕ್ಷೇತ್ರದಲ್ಲಿ ಪ್ರಮುಖ ಸುಧಾರಣೆಗಳನ್ನು ತರುವ 100 ದಿನಗಳ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಗುರುವಾರ ಅನಾವರಣಗೊಳಿಸಿದರು. 

ನಾವು 100 ದಿನಗಳ ಯೋಜನೆಯನ್ನು ಹೊಂದಿದ್ದೇವೆ, ಅದರ ಆಧಾರದ ಮೇಲೆ ನಾವು ಮಧ್ಯಸ್ಥಗಾರರಿಗೆ ಪಾರದರ್ಶಕವಾಗಿ ಉತ್ತರಿಸುತ್ತೇವೆ. ಈ 100 ದಿನಗಳ ಗುರಿಯಡಿಯಲ್ಲಿ, ನಾವು ಮೂರು ಮುಖ್ಯ ಅಡಿಪಾಯಗಳನ್ನು ಹೊಂದಿದ್ದೇವೆ: ಮೂಲಸೌಕರ್ಯ, ನೀತಿ ಗುರಿಗಳು ಮತ್ತು ಸುಧಾರಣೆಗಳ ಉಪಕ್ರಮ, ಯೋಜನೆ ನವೆಂಬರ್ 30 ರವರೆಗೆ ಮುಂದುವರಿಯುತ್ತದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ  (Union civil aviation minister Jyotiraditya Scindia) ಪತ್ರಿಕಾಗೋಷ್ಠಿಯಲ್ಲಿ ತಿಳಿಸದರು.

100 ದಿನಗಳ ಯೋಜನೆಯಡಿ, ಗುಜರಾತಿನ ಕೇಶೋಡ್, ಜಾರ್ಖಂಡ್‌ನ ದೇವಘರ್, ಮಹಾರಾಷ್ಟ್ರದ ಗೊಂಡಿಯಾ ಮತ್ತು ಸಿಂಧುದುರ್ಗ ಮತ್ತು ಉತ್ತರ ಪ್ರದೇಶದ ಕುಶಿನಗರದಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುವುದು. ಇದರೊಂದಿಗೆ ಸಂಜೋಲಿಯಲ್ಲಿ  (ಶಿಮ್ಲಾ), ಸಸೆ (ಮನಾಲಿ), ಮಂಡಿ, ಬಡ್ಡಿ (ಹಿಮಾಚಲ ಪ್ರದೇಶ), ಹಲ್ದ್ವಾನಿ, ಅಲ್ಮೋರಾ (ಉತ್ತರಾಖಂಡ)ದಲ್ಲಿ ಹೊಸ ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗುವುದು. ಉಡಾನ್ ಯೋಜನೆಯಲ್ಲಿ (UDAN Scheme), ಮುಂದಿನ 100 ದಿನಗಳಲ್ಲಿ 50 ಹೊಸ ಮಾರ್ಗಗಳನ್ನು ಆರಂಭಿಸಲಾಗುತ್ತಿದೆ. ಇದರಲ್ಲಿ 30 ಹೊಸ ಮಾರ್ಗಗಳನ್ನು ಅಕ್ಟೋಬರ್‌ನಲ್ಲಿಯೇ ಆರಂಭಿಸಲಾಗುವುದು ಎಂದು ಅವರು ವಿವರಿಸಿದರು.

ಇದನ್ನೂ ಓದಿ- Whatsapp: ಈ ಟ್ರಿಕ್ ಮೂಲಕ ಸಮಯ ಮಿತಿ ಮುಗಿದ ನಂತರವೂ ವಾಟ್ಸಾಪ್ ಸಂದೇಶಗಳನ್ನು Delete ಮಾಡಬಹುದು

ಕುಶಿನಗರ ಬೌದ್ಧ ಸರ್ಕ್ಯೂಟ್‌ನ ಕೇಂದ್ರವಾಗಲಿದೆ :
ಸರ್ಕಾರದ ಘೋಷಣೆಯ ಪ್ರಕಾರ, ಉತ್ತರ ಪ್ರದೇಶವು ದೊಡ್ಡ ಉಡುಗೊರೆಯನ್ನು ಪಡೆಯಲಿದೆ. ಕುಶಿನಗರ (Kushi Nagar) ಮತ್ತು ಜೇವರ್‌ನಲ್ಲಿ ವಿಮಾನ ನಿಲ್ದಾಣಗಳ ನಿರ್ಮಾಣವನ್ನು ವೇಗಗೊಳಿಸಲಾಗುವುದು. ಮೊದಲಿಗೆ ವಿಮಾನ ನಿಲ್ದಾಣವನ್ನು ಕುಶಿನಗರದಲ್ಲಿ ನಿರ್ಮಿಸಲಾಗುವುದು. ಇದರ ಸಾಮರ್ಥ್ಯವು ಏರ್‌ಬಸ್ 321 ಮತ್ತು ಬೋಯಿಂಗ್ 737 ಇಲ್ಲಿ ಇಳಿಯಬಹುದು. ಕುಶಿನಗರ ಬೌದ್ಧ ಸರ್ಕ್ಯೂಟ್‌ನ ಕೇಂದ್ರ ಬಿಂದುವಾಗಲಿದೆ. ಗ್ರೇಟರ್ ನೋಯ್ಡಾದಲ್ಲಿ ನಿರ್ಮಿಸಲಿರುವ ಜೇವರ್ ವಿಮಾನ ನಿಲ್ದಾಣವು ಒಟ್ಟು 30,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಕುಶಿನಗರ, ಜೇವರ್ (ಗ್ರೇಟರ್ ನೋಯ್ಡಾ) ಹೊರತುಪಡಿಸಿ, ಡೆಹ್ರಾಡೂನ್ ಮತ್ತು ಅಗರ್ತಲಾದಲ್ಲಿ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸಿಂಧಿಯಾ ತಿಳಿಸದರು.

ಡೆಹ್ರಾಡೂನ್ ಮತ್ತು ಅಗರ್ತಲಾಗಳಿಗೂ ಉಡುಗೊರೆ:
ಡೆಹ್ರಾಡೂನ್ ವಿಮಾನ ನಿಲ್ದಾಣದಲ್ಲಿ 457 ರೂ. ಕೋಟಿ ಹೂಡಿಕೆ ಮಾಡಲಾಗುತ್ತಿದೆ. ಇಲ್ಲಿ ಹೊಸ ಟರ್ಮಿನಲ್ ಕಟ್ಟಡವನ್ನು ನಿರ್ಮಿಸಲಾಗುವುದು. ಈ ಹೂಡಿಕೆಯ ನಂತರ, ಟರ್ಮಿನಲ್ ಕಟ್ಟಡದ ಸಾಮರ್ಥ್ಯವು 250 ಪ್ರಯಾಣಿಕರಿಂದ 800 ಪ್ರಯಾಣಿಕರಿಗೆ ಹೆಚ್ಚಾಗುತ್ತದೆ. ಅದೇ ಸಮಯದಲ್ಲಿ, ಅಗರ್ತಲಾ ವಿಮಾನ ನಿಲ್ದಾಣದಲ್ಲಿ 490ರೂ. ಕೋಟಿ ಹೂಡಿಕೆ ಇರುತ್ತದೆ. ಪ್ರಸ್ತುತ, ಗಂಟೆಗೆ 500 ಪ್ರಯಾಣಿಕರು ಬರುತ್ತಾರೆ. ಈ ಹೂಡಿಕೆಯ ನಂತರ, ಈ ಸಾಮರ್ಥ್ಯವು ಗಂಟೆಗೆ 1200 ಪ್ರಯಾಣಿಕರಿಗೆ ಹೆಚ್ಚಾಗುತ್ತದೆ  ಎಂದು ಅವರು ಹೇಳಿದರು.

ಇದನ್ನೂ ಓದಿ- Viral Video: ಗರ್ಲ್ ಫ್ರೆಂಡ್ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿ, ಮುಂದೇನಾಯ್ತು ನೀವೇ ನೋಡಿ...

ಏರ್ ಸೆವಾ 3.0 ಎಂಬ ದೂರು ಪೋರ್ಟಲ್ ಅನ್ನು ಯೋಜನೆಯ ಭಾಗವಾಗಿ ಸ್ಥಾಪಿಸಲಾಗುವುದು. ಟ್ರಾವೆಲ್ ಏಜೆಂಟ್‌ಗಳು ಅಥವಾ ಆನ್‌ಲೈನ್ ಪೋರ್ಟಲ್‌ಗಳ ಮೂಲಕ ಟಿಕೆಟ್ ಖರೀದಿಸಿದರೂ ಸಹ, ಪ್ರಯಾಣಿಕರು ಭರವಸೆಯ ಸಮಯದೊಳಗೆ ಮರುಪಾವತಿಯನ್ನು ಪಡೆಯುವುದನ್ನು ಖಾತ್ರಿಪಡಿಸುವ ಜವಾಬ್ದಾರಿಯನ್ನು ಏರ್ಲೈನ್ಸ್ ಹೊಂದಿದೆ ಎಂದು ಸಿಂಧಿಯಾ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News