ಲಕ್ನೌ: ಮಂಜಿನ ಕಾರಣದಿಂದಾಗಿ ಡಿ. 1 ರಿಂದ ಫೆ. 13ರವರೆಗೆ 8 ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಸೋಮವಾರ ಈಶಾನ್ಯ ರೈಲ್ವೇ (ಎನ್ಇಆರ್) ತನ್ನ ಅಧಿಕೃತ ವರದಿಯಲ್ಲಿ ತಿಳಿಸಿದೆ.


COMMERCIAL BREAK
SCROLL TO CONTINUE READING

ಈ ರೈಲುಗಳು ಆಗ್ರಾ ಇಂಟರ್ಸಿಟಿ, 12179 ಲಕ್ನೋ ಜಂಕ್ಷನ್-ಆಗ್ರಾ ಕ್ಯಾಂಟ್ ಎಕ್ಸ್ಪ್ರೆಸ್, 15209 ಸಹರ್ಸಾ-ಅಮೃತಸರ್ ಎಕ್ಸ್ಪ್ರೆಸ್, 14674 ಅಮೃತಸರ್-ಜೈನಗರ್ ಶಹೀದ್ ಎಕ್ಸ್ಪ್ರೆಸ್ ಮತ್ತು ಲಕ್ನೋ-ಆನಂದ್ ವಿಹಾರ್ ಎಕ್ಸ್ಪ್ರೆಸ್ ಅನ್ನು ಒಳಗೊಂಡಿದೆ.


ಎನ್ಇಆರ್ ಮುಖ್ಯ ಪಬ್ಲಿಕ್ ರಿಲೇಶನ್ಸ್ ಆಫೀಸರ್ (ಸಿಪಿಆರ್ಒ) ಸಂಜಯ್ ಯಾದವ್ ಅವರು ಮಂಜಿನ ವಾತಾವರಣದಿಂದಾಗಿ ರೈಲುಗಳನ್ನು ರದ್ದು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ಇವುಗಳಲ್ಲಿ ಗ್ವಾಲಿಯರ್-ಬಾರೂನಿ ಎಕ್ಸ್ಪ್ರೆಸ್ ಸಹ ಸೇರಿದೆ. 


ಜೈನಾಗರ್-ನವ ದೆಹಲಿ ಎಕ್ಸ್ಪ್ರೆಸ್, ಅಝಾಮ್ ಘರ್-ದೆಹಲಿ ಕೈಫಿಯತ್ ಎಕ್ಸ್ಪ್ರೆಸ್, ಬಾರೂನಿ-ಅಂಬಾಲ ಹರಿಹರನಾಥ್ ಎಕ್ಸ್ಪ್ರೆಸ್ ಗಳು ಡಿಸೆಂಬರ್ 1 ರಿಂದ ಫೆಬ್ರವರಿ 13 ರವರೆಗೆ ಪ್ರತಿ ಗುರುವಾರವೂ ರದ್ದುಗೊಳ್ಳಲಿವೆ.


ಜೈನ್-ಅಮೃತಸರ್ ಎಕ್ಸ್ಪ್ರೆಸ್ ಡಿಸೆಂಬರ್ 1 ರಿಂದ ಫೆಬ್ರವರಿ 13 ರವರೆಗೆ ಪ್ರತಿ ವಾರದ ಶುಕ್ರವಾರ ಪ್ರಯಾಣಿಸುವುದಿಲ್ಲ. ರೈಲಿನ ರದ್ದುಗೊಳಿಸುವಿಕೆಯು ದೈನಂದಿನ ಪ್ರಯಾಣಿಕರಿಗೆ ಹೆಚ್ಚಿನ ತೊಂದರೆಯನ್ನುಂಟು ಮಾಡಿದೆ.