ಪಬ್ಜಿ ಆಡಲು ಅವಕಾಶ ನೀಡದಿರುವುದಕ್ಕೆ ಅಣ್ಣನನ್ನೇ ಕೊಂದ 15 ರ ಬಾಲಕ
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಾಂಡಿ ಮೂಲದ 15 ವರ್ಷದ ಬಾಲಕ ತನ್ನ ಮೊಬೈಲ್ ಫೋನ್‌ನಲ್ಲಿ ಪಬ್‌ಜಿ ಆಟ ಆಡುತ್ತಿದ್ದಕ್ಕಾಗಿ ತನ್ನ ಹಿರಿಯ ಸಹೋದರನನ್ನು ಗದರಿಸಿದ್ದಕ್ಕಾಗಿ ಆತನನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನವದೆಹಲಿ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಾಂಡಿ ಮೂಲದ 15 ವರ್ಷದ ಬಾಲಕ ತನ್ನ ಮೊಬೈಲ್ ಫೋನ್‌ನಲ್ಲಿ ಪಬ್‌ಜಿ ಆಟ ಆಡುತ್ತಿದ್ದಕ್ಕಾಗಿ ತನ್ನ ಹಿರಿಯ ಸಹೋದರನನ್ನು ಗದರಿಸಿದ್ದಕ್ಕಾಗಿ ಆತನನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊಹಮ್ಮದ್ ಶೇಖ್ (19) ಇಂದು ಬೆಳಿಗ್ಗೆ ತನ್ನ ಮೊಬೈಲ್ ಫೋನ್‌ನಲ್ಲಿ ಪಬ್ಜಿ ಆಟವಾಡುವುದನ್ನು ನಿಲ್ಲಿಸುವಂತೆ ಕೇಳಿದಾಗ ಬಾಲಕ ಕೋಪಗೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಮಮತಾ ಡಿಸೋಜಾ ತಿಳಿಸಿದ್ದಾರೆ. ಆತ ಶೇಖ್‌ನ ತಲೆಯನ್ನು ಗೋಡೆಗೆ ಬಡಿದು ಕತ್ತರಿಯಿಂದ ಪದೇ ಪದೇ ಇರಿದಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
ತಕ್ಷಣ ಶೇಖ್ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾದರೂ ಕೂಡ ಅಲ್ಲಿ ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸೋಜಾ ತಿಳಿಸಿದ್ದಾರೆ.