ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದ 40 ವರ್ಷದ ಪಂಜಾಬ್ ರೈತ ಸಾವು
ಕೇಂದ್ರ ಕೃಷಿ ಕಾನೂನುಗಳ ವಿರುದ್ಧ ಸಿಂಗು ಗಡಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದ 40 ವರ್ಷದ ಪಂಜಾಬ್ ರೈತ, ಶನಿವಾರ ಸಂಜೆ ವಿಷ ಸೇವಿಸಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನವದೆಹಲಿ: ಕೇಂದ್ರ ಕೃಷಿ ಕಾನೂನುಗಳ ವಿರುದ್ಧ ಸಿಂಗು ಗಡಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದ 40 ವರ್ಷದ ಪಂಜಾಬ್ ರೈತ, ಶನಿವಾರ ಸಂಜೆ ವಿಷ ಸೇವಿಸಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Farmers Protest: ರೈತರ ಜೊತೆ ಸಭೆ ವಿಫಲವಾಗಿದ್ದೇಕೆ? ಕೇಂದ್ರ ಕೃಷಿ ಸಚಿವರು ನೀಡಿರುವ ಕಾರಣ ಇದು!
ಮೃತಪಟ್ಟಿರುವ ರೈತನನ್ನು ಪಂಜಾಬ್‌ನ ಫತೇಘರ್ ಸಾಹಿಬ್ ಜಿಲ್ಲೆಯ ನಿವಾಸಿ ಅಮರಿಂದರ್ ಸಿಂಗ್ ಎಂದು ಗುರುತಿಸಲಾಗಿದ್ದು, ವಿಷ ಸೇವಿಸಿದ ವ್ಯಕ್ತಿಯನ್ನು ಸೋನಿಪತ್‌ನ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಸೋನಿಪತ್‌ನ ಕುಂಡ್ಲಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರವಿ ಕುಮಾರ್ ಹೇಳಿದ್ದಾರೆ.
ਕਿਸਾਨ ਅੰਦੋਲਨ ਦਾ ਇਕ ਹੋਰ ਸਾਥੀ ਅਮਰਿੰਦਰ ਸਿੰਘ ਸ਼ਹੀਦ ਹੋਇਆ | किसान आंदोलन का एक और साथी अमरिंदर सिंह शहीद हुआ | #AmarinderSingh #Martyred #KisanAndolan #KisanEktaMorcha
Posted by Kisan Ekta Morcha on Saturday, 9 January 2021
ದೇಶದ ವಿವಿಧ ಭಾಗಗಳ ರೈತರು (farmers), ಹೆಚ್ಚಾಗಿ ಪಂಜಾಬ್ ಮತ್ತು ಹರಿಯಾಣದಿಂದ ಬಂದವರು, ದೆಹಲಿಯ ವಿವಿಧ ಗಡಿಭಾಗಗಳಲ್ಲಿ ಒಂದು ತಿಂಗಳಿನಿಂದ ಕ್ಯಾಂಪಿಂಗ್ ಮಾಡುತ್ತಿದ್ದಾರೆ, ಈಗ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟಿಸುತ್ತಿದ್ದಾರೆ.
ಇದನ್ನೂ ಓದಿ: Farmers Protest: ಹೋರಾಟನಿರತ ರೈತರಿಗೆ ಕೇಂದ್ರದಿಂದ 'ಬಿಗ್ ಶಾಕ್'..!
ಪ್ರತಿಭಟನಾ ನಿರತ ರೈತರು ಹೊಸ ಕಾನೂನುಗಳು ಕನಿಷ್ಟ ಬೆಂಬಲ ಬೆಲೆಯ ಸುರಕ್ಷತಾ ಕವಚವನ್ನು ತೆಗೆದುಹಾಕಲು ದಾರಿ ಮಾಡಿಕೊಡುತ್ತವೆ ಮತ್ತು ಮಂಡಿ ವ್ಯವಸ್ಥೆಯನ್ನು ದೂರವಿಡುತ್ತವೆ ಮತ್ತು ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ ಅನುಕೂಲ ಮಾಡುತ್ತವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ಆದರೆ ಕೇಂದ್ರ ಸರ್ಕಾರ ಕೃಷಿ ಕಾನೂನುಗಳನ್ನು ಸಮರ್ಥಿಸಿಕೊಂಡಿದ್ದು,ಎಂಎಸ್‌ಪಿ ಮತ್ತು ಮಂಡಿ ವ್ಯವಸ್ಥೆಗಳು ಉಳಿಯುತ್ತವೆ ಪ್ರತಿಪಾದಿಸುತ್ತಿದ್ದು, ಪ್ರತಿಪಕ್ಷಗಳು ರೈತರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದೆ.