ನವದೆಹಲಿ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕರೋನಾವೈರಸ್ ಅನ್ನು ನಿಯಂತ್ರಿಸಲು ದೆಹಲಿ ಸರ್ಕಾರ ಬಲವಾದ ನಿರ್ಧಾರವನ್ನು ತೆಗೆದುಕೊಂಡಿದೆ. ದೆಹಲಿಯಲ್ಲಿ ಮಾಸ್ಕ್ ಧರಿಸದಿದ್ದರೆ ಈಗ 2000 ರೂ.ಗಳ ಭಾರೀ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.


Arvind Kejriwal) ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಇಂದಿನ ಸಭೆಯಲ್ಲಿ ಉತ್ತಮ ಚರ್ಚೆ ನಡೆಯಿತು. ಅನೇಕ ಸಲಹೆಗಳನ್ನು ಸ್ವೀಕರಿಸಲಾಯಿತು, ನಾವು ಆ ಸಲಹೆಗಳನ್ನು ಕಾರ್ಯಗತಗೊಳಿಸುತ್ತೇವೆ ಎಂದರು.


COMMERCIAL BREAK
SCROLL TO CONTINUE READING

Covid-19:ತನ್ನ ವ್ಯಾಕ್ಷಿನ್ ಶೇ.95ರಷ್ಟು ಯಶಸ್ವಿ ಎಂದ Pfizer, ಸುರಕ್ಷತೆಯ ಮಾನದಂಡಗಳ ಮೇಲೂ ಸೈ


ಇದೇ ಸಂದರ್ಭದಲ್ಲಿ ಛಾತ್ ಪೂಜೆ ಕುರಿತಂತೆ ಸ್ಪಷ್ಟನೆ ನೀಡಿದ ಅರವಿಂದ್ ಕೇಜ್ರಿವಾಲ್ ರಾಜ್ಯ ಸರ್ಕಾರದಿಂದ ಛಾತ್ ಪೂಜೆ (Chhathpuja) ಮಾಡುವುದನ್ನು ನಿಷೇಧಿಸಲಾಗಿಲ್ಲ. ಆದರೆ 200 ಜನರು ಛಾತ್ ಪೂಜೆ ಮಾಡಲು ನದಿ ಅಥವಾ ಕೊಳಕ್ಕೆ ಇಳಿದರೆ ಮತ್ತು ಅವರಲ್ಲಿ ಯಾರಿಗಾದರೂ ಕರೋನಾ ಇದ್ದರೆ ಅದು ದೊಡ್ಡ ಪ್ರಮಾಣದಲ್ಲಿ ಹರಡುತ್ತದೆ. ವೈರಸ್ ನೀರಿಗೆ ಹೋಗುತ್ತದೆ ಮತ್ತು ಕರೋನಾ ವೇಗವಾಗಿ ಹರಡುವ ಅಪಾಯ ಹೆಚ್ಚಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.


ಕೊರೊನಾ ವೇಳೆ ಮಕ್ಕಳಿಗಾಗಿ ವಿಡಿಯೋ ಕ್ಲಿಪಿಂಗ್ ಸಿದ್ದಪಡಿಸಿದ ನಿಮಾನ್ಸ್


ಈ ಹಿನ್ನಲೆಯಲ್ಲಿ ಜನರು ಗುಂಪು ಗುಂಪಾಗಿ ಸೇರಿ ಪೂಜೆ ಮಾಡುವುದಕ್ಕಿಂತ ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಛತ್ ಪೂಜೆಯನ್ನು ಆಚರಿಸಬೇಕು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದರು.


Covid 19) ಹರಡುವ ಸಾಧ್ಯತೆ ಹೆಚ್ಚಾಗಿದೆ. ಅದಕ್ಕಾಗಿ ಈ ಬಗ್ಗೆ ರಾಜಕೀಯ ಮಾಡಬಾರದೆಂದು  ಕೇಜ್ರಿವಾಲ್ ಇತರ ಪಕ್ಷಗಳನ್ನು ಕೋರಿದರು.