Who is Rekha Gupta?: 3 ಬಾರಿ ಕೌನ್ಸಿಲರ್ ಆಗಿದ್ದ ರೇಖಾ ಗುಪ್ತಾ ಅವರನ್ನು ದೆಹಲಿಯ ಮುಖ್ಯಮಂತ್ರಿಯಾಗಿ ಬಿಜೆಪಿ ಆಯ್ಕೆ ಮಾಡಿದೆ. ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯೊಂದಿಗೆ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದ ಗುಪ್ತಾ ಅವರನ್ನು ಆಯ್ಕೆ ಮಾಡುವ ಮೂಲಕ, ಬಿಜೆಪಿ ತನ್ನ ಪರಂಪರೆಯನ್ನು ಭದ್ರಪಡಿಸಿಕೊಳ್ಳಲು ಮತ್ತು ತನ್ನ ಮಹಿಳಾ ಮತದಾರರಿಗೆ ಸಂದೇಶವನ್ನು ರವಾನಿಸಲು ಪ್ರಯತ್ನಿಸಿದೆ.
Delhi Election results 2025: ದೆಹಲಿ ಚುನಾವಣೆಯಲ್ಲಿ ಬಿಜೆಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿರಲಿಲ್ಲ. ಹೀಗಾಗಿ ದೆಹಲಿಯ ನೂತನ ಸಿಎಂ ಯಾರಾಗಲಿದ್ದಾರೆ ಅನ್ನೋ ಕುತೂಹಲ ಮೂಡಿದೆ. ಈಗಾಗಲೇ ಕೆಲವು ನಾಯಕರ ಹೆಸರುಗಳು ಕೇಳಿಬರುತ್ತಿದ್ದು, ಹೈಕಮಾಂಡ್ ತೀರ್ಮಾನವೇ ಅಂತಿಮವಾಗಲಿದೆ.
Delhi Election 2025: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭಾರೀ ಮುಖಭಂಗವನ್ನ ಅನುಭವಿಸಿದೆ. ಉಚಿತ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದ ಕಾಂಗ್ರೆಸ್ ಒಂದೇ ಒಂದು ಕ್ಷೇತ್ರದಲ್ಲಿಯೂ ಖಾತೆ ತೆರೆಯದೆ ದೊಡ್ಡ ಮುಖಭಂಗ ಅನುಭವಿಸಿದೆ.
Parvesh Sahib Singh Verma : ನವದೆಹಲಿ ಕ್ಷೇತ್ರದಿಂದ ಎಎಪಿ ಮುಖ್ಯಸ್ಥ, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಅವರು ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ, ಅವರು ದೆಹಲಿಯ ಮುಖ್ಯಮಂತ್ರಿ ಅಭ್ಯರ್ಥಿಯ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ.. ಕಳೆದ ಲೋಕಸಭಾ ಚುನಾವಣೆಯಿಂದ ದೂರ ಉಳಿದಿದ್ದ ಪರ್ವೇಶ್ ವರ್ಮಾ, ಸದ್ಯ ನವದೆಹಲಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ್ದಿದ್ದರು.
Delhi Assembly Elections: ಶನಿವಾರ ಮತ ಎಣಿಕೆಯ ಸಮಯದಲ್ಲಿ, ಆಮ್ ಆದ್ಮಿ ಪಕ್ಷವು ಹಿಂದುಳಿದಿರುವ ಸೂಚನೆಗಳು ಇದ್ದಾಗ, ಬೆಳಿಗ್ಗೆ 11:40 ರ ಸುಮಾರಿಗೆ, ಸ್ವಾತಿ ಮಲಿವಾಲ್ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಹ್ಯಾಂಡಲ್‌ನಿಂದ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.
Delhi Assembly Election Results 2025: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆಗೆ ಈ ತಿಂಗಳ 5 ರಂದು ಚುನಾವಣೆಗಳು ನಡೆದವು. ಚುನಾವಣೆ ಫಲಿತಾಂಶಗಳನ್ನು ಇಂದು ಬಹಿರಂಗಪಡಿಸಲಾಗುತ್ತಿದೆ.. ಎಣಿಕೆಗೆ ಮುನ್ನ ನಡೆದ ಅಂಚೆ ಮತಪತ್ರಗಳಲ್ಲಿ ಎಎಪಿ ಹಿಂದುಳಿದಿದೆ. ಮತ್ತೊಂದೆಡೆ, ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ.
ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಲ್ಲ,ಆದರೆ ಎಎಪಿ ಮಾಜಿ ಸಿಎಂ ಕೇಜ್ರಿವಾಲ್ ನೇತೃತ್ವದಲ್ಲಿಯೇ ಚುನಾವಣೆಯ ಕಣಕ್ಕೆ ಇಳಿದಿದೆ.
Delhi Assembly Election 2025: ದೆಹಲಿ ವಿಧಾನಸಭಾ ಚುನಾವಣೆ 2025 ಕ್ಕೆ ಮತದಾನ ಆರಂಭವಾಗಿದೆ. ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಶುರುವಾಗಿದೆ. ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಭವಿಷ್ಯವನ್ನು ಮತದಾರರು ಇಂದು ಬರೆಯಲಿದ್ದಾರೆ
Delhi New Chief Minister: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 2 ದಿನಗಳ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಇದರ ನಂತರ ದೆಹಲಿಯ ಮುಂದಿನ ಸಿಎಂ ಯಾರು ಎಂಬ ಪ್ರಶ್ನೆಗಳು ಎದ್ದಿವೆ.
ದೆಹಲಿ ಅಬಕಾರಿ ನೀತಿ ಪ್ರಕರಣದ ಇತ್ತೀಚಿನ ಮಹತ್ವದ ಬೆಳವಣಿಗೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ದೊಡ್ಡ ಶಾಕ್ ನೀಡಿದೆ. ಇಡಿ ಹೊಸ ಆರೋಪಪಟ್ಟಿ ಸಲ್ಲಿಸಿದ್ದು, ಇದರಲ್ಲಿ ಕೇಜ್ರಿವಾಲ್ ಅವರೇ ಒಟ್ಟಾರೆ ಪ್ರಕರಣದ ಕಿಂಗ್ ಪಿನ್ ಎಂದು ಉಲ್ಲೇಖಿಸಿದೆ.
ದೆಹಲಿ ಸಿಎಂ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್ ಶಾಕ್
ಇನ್ನು 4 ದಿನದಲ್ಲಿ ತಿಹಾರ್ ಜೈಲಿಗೆ ಶರಣಾಗಲೇಬೇಕು
ಕೇಜ್ರಿವಾಲ್‌ಗೆ ಸುಪ್ರಿಂಕೋರ್ಟ್ ಕಟ್ಟುನಿಟ್ಟಿನ ಆದೇಶ
ಜಾಮೀನು ಅವಧಿ ವಿಸ್ತರಣೆ ತಿರಸ್ಕರಿಸಿದ ಸುಪ್ರೀಂಕೋರ್ಟ್
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಭಾರೀ ಹಿನ್ನಡೆ
ತತ್ವಗಳಿಲ್ಲದ ಎಎಪಿ: ಎಎಪಿ ಯಾವುದೇ ತತ್ವಗಳಿಲ್ಲದ ಪಕ್ಷವಾಗಿದೆ. ಭ್ರಷ್ಟಾಚಾರ, ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ಬಂಡಾಯವೆದ್ದು ಅಸ್ತಿತ್ವಕ್ಕೆ ಬಂದ ಪಕ್ಷ ಇಂದು ತಾನೇ ಆ ಹಾದಿ ತುಳಿದಿದೆ ಎಂದು ಜೋಶಿ ಆರೋಪಿಸಿದರು.
Arvind Kejrival : ಗೃಹ ಸಚಿವ ಅಮಿತ್ ಶಾ ಅವರಿಗೆ ಭವಿಷ್ಯದಲ್ಲಿ ಪ್ರಧಾನಿ ಸ್ಥಾನಕ್ಕೆ ಏರಲು ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ಥಾನದಿಂದ ನಿವೃತ್ತಿ ಹೊಂದುತ್ತಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುರುವಾರ ಹೇಳಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಡಿಯಾ ಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಅವರಿಗೆ ಗೊತ್ತಿಲ್ಲ. ಈಗಾಗಲೇ ನರೇಂದ್ರ ಮೋದಿಯವರೇ ಮತ್ತೆ ಪ್ರಧಾನಿಯಾಗುವುದು ನಿಶ್ಚಿತವಾಗಿದೆ. 75 ವರ್ಷ ಕಳೆದವರಿಗೆ ಟಿಕೆಟ್ ನೀಡಲಾಗುತ್ತಿದೆ.
ಈ ಕುರಿತಾಗಿ ಮಾತನಾಡಿದ ಅಮಿತ್ ಶಾ 'ನಾನು ಅರವಿಂದ್ ಕೇಜ್ರಿವಾಲ್ ಮತ್ತು ಕಂಪನಿ ಮತ್ತು ಇಂಡಿಯಾ ಬ್ಲಾಕ್‌ಗೆ ಇದನ್ನು ಹೇಳಲು ಬಯಸುತ್ತೇನೆ, ಬಿಜೆಪಿಯ ಸಂವಿಧಾನದಲ್ಲಿ ಅಂತಹ ಯಾವುದೇ 75 ವರ್ಷಗಳ ಮಿತಿ ನಿಯಮವನ್ನು ಉಲ್ಲೇಖಿಸಲಾಗಿಲ್ಲ. ಪ್ರಧಾನಿ ಮೋದಿ ಈ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದ್ದಾರೆ ಮತ್ತು ಭವಿಷ್ಯದಲ್ಲಿ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ' ಎಂದು ಅವರು ಸ್ಪಷ್ಟಪಡಿಸಿದರು
Supreme Court: ಸುದೀರ್ಘ ವಿಚಾರಣೆಯ ನಂತರ ಸುಪ್ರೀಂ ಕೋರ್ಟ್ ಕೇಜ್ರಿವಾಲ್ ಅವರ ಮಧ್ಯಂತರ ಜಾಮೀನು ಕುರಿತು ತನ್ನ ಆದೇಶವನ್ನು ನೀಡಿದ್ದು, ಜೂನ್ 1 ರವರೆಗೆ ಅವರಿಗೆ ಮಧ್ಯಂತರ ಜಾಮೀನು ನೀಡಿದೆ. ಕೇಜ್ರಿವಾಲ್ ಜೂನ್ 2 ರಂದು ಶರಣಾಗಬೇಕು. ಆದರೆ, ಕೇಂದ್ರ ತನಿಖಾ ಸಂಸ್ಥೆ ಇಡಿ ಕೇಜ್ರಿವಾಲ್ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿತ್ತು.
ʼಪ್ರಧಾನಿ ಮೋದಿ ಅವರಾಗಲೀ, ಬಿಜೆಪಿಯವರಾಗಲೀ ಇವತ್ತಿನವರೆಗೆ ಯುವಕರು, ಮಹಿಳೆಯರು, ಶೂದ್ರರು, ದಲಿತರು, ಶ್ರಮಿಕರು, ದುಡಿಯುವವರ ಪರವಾಗಿ ಒಂದೇ ಒಂದು ಸರಿಯಾದ ಕಾರ್ಯಕ್ರಮ ಜಾರಿ ಮಾಡಲಿಲ್ಲ. ಇದೇನಾ ಅಚ್ಛೆ ದಿನ್? ಡೀಸೆಲ್, ಪೆಟ್ರೋಲ್, ಗ್ಯಾಸ್, ರಸಗೊಬ್ಬರ, ಬೇಳೆ ಕಾಳು, ಅಡುಗೆ ಎಣ್ಣೆ ಬೆಲೆ ಆಕಾಶಕ್ಕೆ ಏರಿಸಿದ್ದೀರಲ್ಲಾ ಮೋದಿಯವರೇ? ಇದಾ ನಿಮ್ಮ ಅಭಿವೃದ್ಧಿ?ʼ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.