ನವದೆಹಲಿ: ಗಂಡ ಹೆಂಡತಿ ಜಗಳದಲ್ಲಿ  ಐದು ತಿಂಗಳ ಮಗು ಗಾಯಗೊಂಡು ಮೃತಪಟ್ಟಿರುವ ಘಟನೆ ಪೂರ್ವ ದೆಹಲಿಯ ಕೊಂಡ್ಲಿ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಪೊಲೀಸರ ಪ್ರಕಾರ ಭಾನುವಾರ 29 ವರ್ಷದ ದೀಪ್ತಿ ಮತ್ತು ಪತಿ ಸತ್ಯಜಿತ್ (32) ನಡುವೆ ಜಗಳ ನಡೆದಿತ್ತು, ನಂತರ ಅವನು ಪತ್ನಿಗೆ ಕೋಲಿನಿಂದ ಹೊಡೆಯಲು ಪ್ರಾರಂಭಿಸಿದನು ಎನ್ನಲಾಗಿದೆ. ಈ ಸಂದರ್ಭದಲ್ಲಿ ಕೋಲು ಆಕಸ್ಮಿಕವಾಗಿ ಮಗುವಿನ ತಲೆಗೆ ಬಡಿದಿದೆ. ಅದಕ್ಕೆ ಪೋಷಕರು ಪ್ರಥಮ ಚಿಕಿತ್ಸೆ ನೀಡಿದ್ದಾರೆ, ಆದರೆ ಅದು ಮಂಗಳವಾರ ಬೆಳಗ್ಗೆ ವಾಂತಿ ಮಾಡಿಕೊಂಡ ಹಿನ್ನಲೆಯಲ್ಲಿ ಅದನ್ನು ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ, ಅಲ್ಲಿ ಮಗು ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ ಎನ್ನಲಾಗಿದೆ.


ಮಗುವಿನ ಮರಣೋತ್ತರ ವರದಿಯ ಪ್ರಕಾರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಅದು ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈಗ ಸೆಕ್ಷನ್ 304 ರ ಅಡಿಯಲ್ಲಿ ಪ್ರಕರಣವನ್ನು ಗಾಜಿಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ಆರೋಪಿ ತಂದೆ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿ ಬಂಧನಕ್ಕಾಗಿ ಪೊಲೀಸರು ಬಲೆ ಬಿಸಿದ್ದಾರೆ ಎನ್ನಲಾಗಿದೆ.