Viral Video: “ನೀ ಜಾಣಮರಿ ಅಲಾ, ಮೊಬೈಲ್ ನೋಡ್ಬಾರ್ದು…”: 2 ವರ್ಷದ ಕಂದಮ್ಮ ಹೇಳೋ ಬುದ್ಧಿಮಾತು ಕೇಳ್ರೀ
Today Trending Video: ತೊದಲು ನುಡಿಯಲ್ಲೇ ಮೊಬೈಲ್ ಹೆಚ್ಚು ಬಳಕೆಯ ಅಪಾಯವನ್ನು ಹೇಳುತ್ತಿದೆ. ಮೊಬೈಲ್ ಯೂಸ್ ಮಾಡ್ಬಾರ್ದು ಕಣ್ಣು ನೋವು ಬರುತ್ತೆ. ಆಮೇಲೆ ಡಾಕ್ಟರ್ ಹತ್ರ ಹೋಗ್ಬೇಕಾಗುತ್ತೆ. ನೀ ಜಾಣ ಮರಿ ಅಲಾ ಮೊಬೈಲ್ ಉಪಯೋಗ ಮಾಡ್ಬೇಡ” ಎನ್ನುತ್ತಾ ಮುದ್ದಾಗಿ ಮಾತನಾಡುತ್ತಿದೆ.
Today Trending Video: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತಿದೆ. ಸಣ್ಣ ಮಕ್ಕಳಿಂದ ಹಿಡಿದು ಮುದುಕರವರೆಗೆ ಮೊಬೈಲ್ ಬಳಕೆ ಮಾಡುವುದು ಕಾಮನ್ ಆಗಿದೆ. ಮಿತಿ ಇಲ್ಲದೆ ಮೊಬೈಲ್ ಬಳಕೆ ಮಾಡಿದ್ರೆ ಅಪಾಯ ತಪ್ಪಿದ್ದಲ್ಲ ಎಂದು ಆರೋಗ್ಯ ತಜ್ಞರು ಎಚ್ಚರಿಸಿದರೂ ಸಹ ಕೇರ್ ಮಾಡದ ಜನತೆ, ತಮ್ಮಿಷ್ಟದಂತೆ ಉಪಯೋಗ ಮಾಡುತ್ತಾರೆ.
ಇದನ್ನೂ ಓದಿ: Mangal Gochar 2023: ಕೆಲವೇ ಗಂಟೆಗಳಲ್ಲಿ ಮಂಗಳ ಪಥ ಬದಲಾಯಿಸುತ್ತಿದ್ದಂತೆ ಈ ಜನರ ಜೀವನದಲ್ಲಿ ನಡೆಯುತ್ತೆ ಆಘಾತಕಾರಿ ಘಟನೆಗಳು!
ಆದರೆ ಇಲ್ಲೊಂದು ಪುಟ್ಟ ಮಗು ವಿಡಿಯೋ ಕಾಲ್ ಮೂಲಕ ಮತ್ತೊಂದು ಮಗುವಿಗೆ ಮೊಬೈಲ್ ಬಳಕೆ ಮಾಡಬಾರದು ಎಂದು ಪಾಠ ಮಾಡುತ್ತಿದೆ. ಈ ಮಗು ಮುಗ್ಧತೆಯ ಜೊತೆಗೆ ಒಂದೊಳ್ಳೆ ಸಂದೇಶವನ್ನು ಕೂಡ ನೀಡುತ್ತಿದೆ.
ತೊದಲು ನುಡಿಯಲ್ಲೇ ಮೊಬೈಲ್ ಹೆಚ್ಚು ಬಳಕೆಯ ಅಪಾಯವನ್ನು ಹೇಳುತ್ತಿದೆ. ಮೊಬೈಲ್ ಯೂಸ್ ಮಾಡ್ಬಾರ್ದು ಕಣ್ಣು ನೋವು ಬರುತ್ತೆ. ಆಮೇಲೆ ಡಾಕ್ಟರ್ ಹತ್ರ ಹೋಗ್ಬೇಕಾಗುತ್ತೆ. ನೀ ಜಾಣ ಮರಿ ಅಲಾ ಮೊಬೈಲ್ ಉಪಯೋಗ ಮಾಡ್ಬೇಡ” ಎನ್ನುತ್ತಾ ಮುದ್ದಾಗಿ ಮಾತನಾಡುತ್ತಿದೆ.
ಈ ವಿಡಿಯೋವನ್ನು ಫೇಸ್ಬುಕ್ ಪೇಜ್ ‘ಆಶಾ ಮಂಜುಆಚಾರ್’ ನಲ್ಲಿ ಹಂಚಿಕೊಳ್ಳಲಾಗಿದ್ದು, ಈಗಾಗಲೇ 86 ಸಾವಿರ ಲೈಕ್ಸ್ ಬಂದಿದೆ. ಒಬ್ಬ ಸೋಶಿಯಲ್ ಮೀಡಿಯಾ ಬಳಕೆದಾರ, “ಮಕ್ಕಳು ನಿಂಥರಾ ಇದ್ರೆ ಟೆನ್ಶನ್ ಇರಲ್ಲ ಪುಟ್ಟ” ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು “ಇದಕ್ಕೆ ಯಾವಾಗಲೂ ಆರೋಗ್ಯದ್ದೇ ಚಿಂತೆ, ನೀನು ಡಾಕ್ಟರ್ ಆಗ್ತೀಯ ಬಿಡು ಅಪ್ಪಿ” ಎಂದು ಹೇಳಿದ್ದಾರೆ. “ನಿನ್ನಷ್ಟು ಬುದ್ಧಿ ದೊಡ್ಡವರಿಗೂ ಇರಬೇಕು” ಅಂತಾ ಒಬ್ಬರು ಹೇಳಿದ್ರೆ, “ಈ ಸಣ್ಣ ಮಗು ಏನು ಹೇಳುತ್ತಿದೆಯೋ ಅದನ್ನು ಅರ್ಥ ಮಾಡಿಕೊಳ್ಳಿ” ಎಂದು ಹೇಳಿದ್ದಾರೆ.
ವಿಡಿಯೋ ನೋಡಿ: https://www.facebook.com/reel/641143434485962
ಇದನ್ನೂ ಓದಿ: Aashika Ranganath: ರೇಷ್ಮೆ ಸೀರೆ ಅಂದ ಹೆಚ್ಚಿಸಿದ ಆಶಿಕಾ ಸೌಂದರ್ಯ: ಈ ಬ್ಯೂಟಿಗೆ ದೃಷ್ಟಿಯಾಗದಂತೆ ಕಾಪಾಡಪ್ಪಾ ‘ರಂಗನಾಥ’
ಒಟ್ಟಾರೆ ಕೇವಲ 2 ವರ್ಷದ ಈ ಕಂದಮ್ಮ ಮಾತನಾಡುತ್ತಿರುವುದು ನೂರಕ್ಕೆ ನೂರು ಸತ್ಯದ ಮಾತು. ಹೆಚ್ಚಾಗಿ ಪೋಷಕರು ತಮ್ಮ ಮಕ್ಕಳಿಗೆ ಮೊಬೈಲ್’ಗಳನ್ನು ಹೆಚ್ಚಾಗಿ ಬಳಕೆ ಮಾಡಲು ನೀಡುತ್ತಾರೆ. ಆದರೆ ಅದರಿಂದಾಗುವ ಅಪಾಯದ ಬಗ್ಗೆ ಯೋಚನೆಯೇ ಮಾಡುವುದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.