Goa Family Bloody Attack: ಗೋವಾದ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ನಾಲ್ಕೈದು ಗೂಂಡಾಗಳು ಕುಟುಂಬವೊಂದರ ಮೇಲೆ ಚಾಕು ಮತ್ತು ಕತ್ತಿಗಳಿಂದ ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದು. ಯುವಕನ ಮೇಲೆ ದುಷ್ಕರ್ಮಿಗಳು ತೀವ್ರವಾಗಿ ಹಲ್ಲೆ ನಡೆಸಿದ್ದು, ಆತ ರಕ್ತಸಿಕ್ತವಾದ ನೆಲದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾನೆ. ಈ ದಾಳಿಯ ಭಯಾನಕ ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗಿದ್ದು, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕೂಡ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Viral Video: ಪ್ರೊಫೆಸರ್ ಇರುವಾಗ್ಲೇ ತರಗತಿ ಒಳಗೆ ಈ ಜೋಡಿ… ವಿಡಿಯೋ ನೋಡಿ ಗೊತ್ತಾಗುತ್ತೆ!
ಗೋವಾದ ಪ್ರಸಿದ್ಧ ಅಂಜುನಾ ಬೀಚ್ ಬಳಿ ಈ ದಾಳಿ ನಡೆದಿದೆ. ಅಂಜುನಾ ಬೀಚ್’ಗೆ ಭೇಟಿ ನೀಡಲು ಅನೇಕ ಪ್ರವಾಸಿಗರು ಬರುತ್ತಾರೆ. ವರದಿಗಳ ಪ್ರಕಾರ, ಪ್ರವಾಸಿಗರು ಮತ್ತು ದಾಳಿಕೋರರ ನಡುವೆ ಸಣ್ಣ ವಿವಾದ ಸಂಭವಿಸಿತ್ತು. ಬಳಿಕ ಆರೋಪಿಗಳು ಕತ್ತಿ, ಚಾಕು ತೆಗೆದು ಈ ಕುಟುಂಬದವರಿಗೆ ಥಳಿಸಿದ್ದಾರೆ. ಪರಿಣಾಮ ರೆಸಾರ್ಟ್’ನಲ್ಲಿದ್ದ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ದುಷ್ಕರ್ಮಿಗಳು ಕೈಯಲ್ಲಿ ಕತ್ತಿ ಹಿಡಿದು ಪ್ರವಾಸಿಗರನ್ನು ಹಿಂಬಾಲಿಸುತ್ತಿರುವುದು ಘಟನೆಯ ವೀಡಿಯೋದಲ್ಲಿ ಕಾಣಬಹುದಾಗಿದ್ದು, ಬಳಿಕ ಪ್ರವಾಸಿಗರೊಬ್ಬರ ಮೈಮೇಲೆ ದಾಳಿ ನಡೆಸಿರುವುದು ಕೂಡ ಕಾಣಿಸುತ್ತಿದೆ. ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಸೂಚನೆ: ವೀಡಿಯೊದಲ್ಲಿ ಸೂಕ್ಷ್ಮ ದೃಶ್ಯಗಳಿವೆ
#Shocking- A tourist family attacked with swords and knives, injured grievously at Anjuna (#Warning- Graphic Video, Viewers Discretion Advised) (1/4) pic.twitter.com/LXCpii3bnc
— In Goa 24x7 (@InGoa24x7) March 12, 2023
ಆಘಾತಕಾರಿ ವಿಡಿಯೋ ಹೊರಬಿದ್ದ ಕೂಡಲೇ ಗೋವಾ ಸಿಎಂ ಪ್ರಮೋದ್ ಸಾವಂತ್ ಟ್ವೀಟ್ ಮಾಡಿ, “ಅಂಜುನಾದಲ್ಲಿ ಇಂದು ನಡೆದ ಹಿಂಸಾತ್ಮಕ ಘಟನೆ ಆಘಾತಕಾರಿ ಮತ್ತು ಅಸಹನೀಯವಾಗಿದೆ. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಇಂತಹ ಸಮಾಜಘಾತುಕ ಶಕ್ತಿಗಳು ರಾಜ್ಯದ ಜನರ ಶಾಂತಿ ಮತ್ತು ಭದ್ರತೆಗೆ ಧಕ್ಕೆ ತಂದಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.
ಘಟನೆಯ ವಿಡಿಯೋವನ್ನು ನೊಂದ ಪ್ರವಾಸಿಗರೊಬ್ಬರು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಜತಿನ್ ಶರ್ಮಾ, “ಅಂಜುನಾದಲ್ಲಿರುವ ಸ್ಪಾಜಿಯೋ ಲೀಸರ್ ರೆಸಾರ್ಟ್’ನ ಹೊರಗೆ ರಾಯ್ಸ್ಟನ್ ಡಯಾಸ್, ನೈರೋನ್ ಡಯಾಸ್ ಮತ್ತು ಕಾಶಿನಾಥ್ ಅಗರ್ವಾಡೇಕರ್ ಎಂಬವರು ತನ್ನ ಮೇಲೆ ಮತ್ತು ತನ್ನ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಅಂದು ಸಾಮಾನ್ಯ ಮಹಿಳೆ; ಇಂದು ಸ್ಟಾರ್ ಕ್ರಿಕೆಟಿಗನ ಪತ್ನಿ: ಈಕೆಯ ಅದೃಷ್ಟದಿಂದಲೇ ವಿಶ್ವಕಪ್ ಗೆದ್ದಿದ್ದರಂತೆ ಆ ನಾಯಕ!
ಸಿಬ್ಬಂದಿಯೊಂದಿಗಿನ ವಿವಾದವನ್ನು ಅವರ ಕುಟುಂಬವು ಹೋಟೆಲ್ ಮ್ಯಾನೇಜರ್‌ಗೆ ವರದಿ ಮಾಡಿದೆ ಎಂದು ಶರ್ಮಾ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮ್ಯಾನೆಜರ್, ಸಿಬ್ಬಂದಿಗೆ ವಾಗ್ದಂಡನೆ ವಿಧಿಸಿದ್ದಾರೆ. ಇದರಿಂದ ಕೋಪಗೊಂಡ ಸಿಬ್ಬಂದಿಗಳು ತಮ್ಮ ಸ್ನೇಹಿತರೊಂದಿಗೆ ಹೋಟೆಲ್’ನ ಹೊರಗೆ ಬಂದು ಕುಟುಂಬದವರ ಮೇಲೆ ಕತ್ತಿ ಮತ್ತು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ..
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.