Climbing On Roof Of Bus: ಪ್ರತೀ ದಿನ ಮಾಡುವ ಅಭ್ಯಾಸಗಳು ನಮ್ಮನ್ನು ಪರಿಪೂರ್ಣಗೊಳಿಸುತ್ತವೆ ಎಂದು ಪಾಠವನ್ನು ಸಣ್ಣ ವಯಸ್ಸಿನಿಂದ ನಾವೆಲ್ಲರೂ ಕೇಳಿಕೊಂಡು ಬಂದಿದ್ದವೆ. ಒಂದು ಕೆಲಸವನ್ನು ನಿರಂತರವಾಗಿ ಮಾಡಿದರೆ, ಅದು ಆತನನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ಮಾಡುತ್ತದೆ. ಅನೇಕ ಬಾರಿ ಇದಕ್ಕೆ ಸಂಬಂಧಿಸಿದಂತೆ ನಾವೆಲ್ಲ ಉದಾಹರಣೆಗಳನ್ನು ನೋಡಿರುತ್ತೇವೆ. ಇತ್ತೀಚೆಗೆ ಈ ಮಾತಿಗೆ ಹೋಲಿಕೆ ಆಗುವಂತಹ ಒಂದು ವಿಡಿಯೋ ವೈರಲ್ ಆಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: PM Modi Meets Tribal Brothers: ಅನಾಥ ಕಂದಮ್ಮಗಳ ಭೇಟಿ ಮಾಡಿದ ಪ್ರಧಾನಿ: ಶಿಕ್ಷಣದ ಜವಾಬ್ದಾರಿ ಹೊತ್ತ ಮೋದಿ


ವಿಡಿಯೋದಲ್ಲಿ ಒಬ್ಬ ಕಾರ್ಮಿಕ ತನ್ನ ಶಕ್ತಿ ಮತ್ತು ಸಮತೋಲನ ಪ್ರದರ್ಶಿಸಿ ತಲೆ ಮೇಲೆ ಬೈಕ್ ನ್ನು ಹೊತ್ತುಕೊಂಡು ಬಸ್ ಏರುತ್ತಿದ್ದಾನೆ. ಬಸ್ ನ ಟಾಪ್ ಹತ್ತಲು ಪಕ್ಕದಲ್ಲಿಯೇ ಇರುವ ಏಣಿಯನ್ನು ಹತ್ತುತ್ತಿದ್ದಾನೆ. ಇದನ್ನು ಕಂಡ ಜನರು ಶಾಕ್ ಆಗಿದ್ದಾರೆ.


ಶಕ್ತಿ ಮತ್ತು ಸಮತೋಲನದ ಚಮತ್ಕಾರ:


ಈ ವೀಡಿಯೊವನ್ನು ಟ್ವಿಟರ್ ನಲ್ಲಿ ಸೋಶಿಯಲ್ ಮೀಡಿಯಾದ ಅನೇಕ ಬಳಕೆದಾರರು ಹಂಚಿಕೊಂಡಿದ್ದಾರೆ. ಮಾಹಿತಿಯ ಪ್ರಕಾರ, ಬಸ್ ನಿಲ್ದಾಣದಲ್ಲಿರುವ ಬಸ್ ನ ಟಾಪ್ ಅಂದರೆ ಲಗೇಜ್ ಇಡುವ ಸ್ಥಳಕ್ಕೆ ಬೈಕ್ ನ್ನು ಹಾಕಬೇಕಿತ್ತು. ಹೀಗಾಗಿ ಕಾರ್ಮಿಕನೊಬ್ಬ ತನ್ನ ತಲೆಯ ಮೇಲೆ ಬೈಕ್ ಎತ್ತಿಕೊಂಡು ಬಂದು, ಅದನ್ನು ಬಸ್ ನಲ್ಲಿರುವ ಏಣಿಯ ಮೂಲಕ ಹತ್ತಿ ಮೇಲಕ್ಕೆ  ಹಾಕಿದ್ದಾನೆ.


ವಿಡಿಯೋ ನೋಡಿದರೆ, ಇದು ಕಷ್ಟವೇನಲ್ಲ ಎಂದು ಅನಿಸಬಹುದು, ಆದರೆ ಇದಕ್ಕೆ ಯಾರ ಸಹಾಯವನ್ನೂ ತೆಗೆದುಕೊಳ್ಳದೆ ತನ್ನ ಶ್ರಮ ಮತ್ತು ಸಮತೋಲದ ಸಹಾಯದಿಂದ ಬಸ್ ಮೇಲೆ ಬೈಕ್ ನ್ನು ಇಟ್ಟಿದ್ದು ಅಚ್ಚರಿಯ ಸಂಗತಿ ಎನ್ನಬಹುದು.


Viral Video: ಪೆಟ್ರೋಲ್ ಹಾಕಿಸಲು ಬಂದ ಮಗನ ಆತುರಕ್ಕೆ ಬಲಿಪಶುವಾಗಿದ್ದು ತಂದೆ!! ವಿಡಿಯೋ ನೋಡಿ


ಈ ವಿಡಿಯೋ ಕಂಡ ಸೋಶಿಯಲ್ ಮೀಡಿಯಾ ಬಳಕೆದಾರರು, ಈ ವ್ಯಕ್ತಿಯನ್ನು ಹಾಡಿಹೊಗಳಿದ್ದಾರೆ. “ನಿಜವಾಗಿಯೂ ಅವರು ಸೂಪರ್ ಮ್ಯಾನ್”, “ಇವರು ನಿಜವಾದ ಬಾಹುಬಲಿ” ಎಂದೆಲ್ಲಾ ಕಮೆಂಟ್ ಮಾಡುತ್ತಾ ವಿಡಿಯೋವನ್ನು ರಿಟ್ವೀಟ್ ಮಾಡುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ..