Viral Video: ಪೆಟ್ರೋಲ್ ಹಾಕಿಸಲು ಬಂದ ಮಗನ ಆತುರಕ್ಕೆ ಬಲಿಪಶುವಾಗಿದ್ದು ತಂದೆ!! ವಿಡಿಯೋ ನೋಡಿ

Petrol Pump Viral Video: ಈ ವೀಡಿಯೊವನ್ನು Twitter ನಲ್ಲಿ ಹಂಚಿಕೊಳ್ಳಲಾಗಿದೆ. ಅನೇಕರು ಇದನ್ನು ರಿಟ್ವೀಟ್ ಕೂಡ ಮಾಡಿದ್ದಾರೆ. ಸದ್ಯ ಸುವಿದಾ ಎಂಬ ಬಳಕೆದಾರರು ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು ತಮಾಷೆಯಾಗಿ ಶೀರ್ಷಿಕೆಯನ್ನು ನೀಡಿದ್ದಾರೆ. ಈ ವೀಡಿಯೋ ಪೋಸ್ಟ್ ಮಾಡಿದ ಬಳಿಕ ಭಾರೀ ವೈರಲ್ ಆಗಿದೆ.

Written by - Bhavishya Shetty | Last Updated : Nov 28, 2022, 11:20 AM IST
    • ಒಬ್ಬ ವ್ಯಕ್ತಿ ಬೈಕ್‌ ನಲ್ಲಿ ಪೆಟ್ರೋಲ್ ಹಾಕಿಸಲೆಂದು ಪಂಪ್‌ಗೆ ಬರುತ್ತಾನೆ
    • ಈ ವ್ಯಕ್ತಿಯ ಆತುರಕ್ಕೆ ಬಲಿಪಶುವಾಗಿದ್ದು ಹಿಂಬದಿ ಸವಾರ
    • ವ್ಯಕ್ತಿಯೋರ್ವನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ
Viral Video: ಪೆಟ್ರೋಲ್ ಹಾಕಿಸಲು ಬಂದ ಮಗನ ಆತುರಕ್ಕೆ ಬಲಿಪಶುವಾಗಿದ್ದು ತಂದೆ!! ವಿಡಿಯೋ ನೋಡಿ title=
viral video

Petrol Pump Viral Video: ಪೆಟ್ರೋಲ್ ಬಂಕ್ ಗಳಲ್ಲಿ ವಾಹನಕ್ಕೆ ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸಲು ಹೋದಾಗ ಕ್ಯೂ ನಿಲ್ಲುತ್ತೇವೆ. ಆದರೆ ಕೆಲವರು ಮಾತ್ರ ಎಷ್ಟೇ ಜನಸಂದಣಿ ಇದ್ದರೂ ಕೂಡ ಲೆಕ್ಕಿಸದೆ ಆತುರದಲ್ಲಿ ಲೈನ್ ದಾಟಿ ಮುಂದೆ ಹೋಗುತ್ತಾರೆ. ಇದೀಗ ಈ ರೀತಿ ಮಾಡಿದ ವ್ಯಕ್ತಿಯೋರ್ವನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: SSC GD ಕಾನ್ಸ್‌ಟೇಬಲ್ ಹುದ್ದೆಗಳನ್ನು 45000 ಕ್ಕೆ ಹೆಚ್ಚಳ, ನ.30 ರೊಳಗೆ ಅರ್ಜಿ ಹಾಕಿ

ವೀಡಿಯೊವನ್ನು Twitter ನಲ್ಲಿ ಹಂಚಿಕೊಳ್ಳಲಾಗಿದೆ. ಅನೇಕರು ಇದನ್ನು ರಿಟ್ವೀಟ್ ಕೂಡ ಮಾಡಿದ್ದಾರೆ. ಸದ್ಯ ಸುವಿದಾ ಎಂಬ ಬಳಕೆದಾರರು ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು ತಮಾಷೆಯಾಗಿ ಶೀರ್ಷಿಕೆಯನ್ನು ನೀಡಿದ್ದಾರೆ. ಈ ವೀಡಿಯೋ ಪೋಸ್ಟ್ ಮಾಡಿದ ಬಳಿಕ ಭಾರೀ ವೈರಲ್ ಆಗಿದೆ.

 

ವಿಡಿಯೋದಲ್ಲಿ ಏನಿದೆ?

ಒಬ್ಬ ವ್ಯಕ್ತಿ ಬೈಕ್‌ ನಲ್ಲಿ ಪೆಟ್ರೋಲ್ ಹಾಕಿಸಲೆಂದು ಪಂಪ್‌ಗೆ ಬರುತ್ತಾನೆ. ಆತನ ಜೊತೆ ಅವನ ತಂದೆಯೂ ಹಿಂಬದಿಯಲ್ಲಿ ಕುಳಿತಿರುತ್ತಾರೆ. ಈ ಸಂದರ್ಭದಲ್ಲಿ ಪೆಟ್ರೋಲ್ ಬಂಕ್ ನಲ್ಲಿ ಕೊಂಚ ಜನಸಂದಣಿ ಇದ್ದು, ಎಲ್ಲರೂ ಕ್ಯೂನಲ್ಲಿ ಬರುತ್ತಾರೆ. ಆದರೆ ಈತ ಮಾತ್ರ ತನ್ನ ಬೈಕನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಪ್ರಯತ್ನಿಸುತ್ತಾನೆ. ಈ ಸಂದರ್ಭದಲ್ಲಿ ಬ್ಯಾಲೆನ್ಸ್ ತಪ್ಪಿದ ಬೈಕ್ ಒಂದೇ ಬಾರಿಗೆ ಮುನ್ನುಗ್ಗುತ್ತದೆ. ಪರಿಣಾಮ ಹಿಂಬದಿ ಕುಳಿತಿದ್ದ ವ್ಯಕ್ತಿಯ ತಂದೆ ಕೆಳಗೆ ಬೀಳುತ್ತಾರೆ. ಜೊತೆಗೆ ಪಕ್ಕದಲ್ಲಿಯೇ ನಿಲ್ಲಿಸಿದ್ದ ಮತ್ತೊಂದು ಬೈಕ್ ಕೂಡ ನೆಲಕ್ಕೆ ಬೀಳುತ್ತದೆ.

ಇದನ್ನೂ ಓದಿ: Viral Video: ದೈತ್ಯ ಹಾವಿನ ಮೇಲೆ ದಾಳಿ ಇಟ್ಟ ಮೊಸಳೆ.. ಮುಂದೇನಾಯ್ತು ತಿಳಿಯಲು ವಿಡಿಯೋ ನೋಡಿ

ವ್ಯಕ್ತಿಯ ತಂದೆ ಬೆನ್ನಿಗೆ ಗಂಭೀರ ಗಾಯವಾದಂತೆ ಭಾಸವಾಗುತ್ತಿದೆ. ಮಗ ಮಾಡಿರುವ ತಪ್ಪಿಗೆ ತಂದೆಗೆ ಶಿಕ್ಷೆ ನೀಡಿದಂತಾಗಿದೆ. ಈ ವಿಡಿಯೋ ಕಂಡ ಅನೇಕರು ತಂದೆಯ ಪರಿಸ್ಥಿತಿ ಕಂಡು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ವ್ಯಕ್ತಿಯ ಆತುರದ ವರ್ತನೆಗೆ ಛೀಮಾರಿ ಹಾಕಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News