ಅಯೋಧ್ಯೆಯಲ್ಲಿ ಅಪರೂಪದ ಘಟನೆ..! ʼರಾಮʼನನ್ನು ನೋಡಲು ಗರ್ಭಗುಡಿ ಪ್ರವೇಶಿಸಿದ ʼಮಾರುತಿʼ
Ayodhya ram mandir : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರದ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಕಣ್ಣಿಗೆ ಹಬ್ಬವಾಗಿತ್ತು. ನೂರಾರು ವರ್ಷಗಳ ತಪಸ್ಸು, ಹೋರಾಟ, ನಿರೀಕ್ಷೆ ಜನವರಿ 22 ರಂದು ಬಲರಾಮನ ಪ್ರತಿಷ್ಠಾಪನೆಯೊಂದಿಗೆ ಕೊನೆಗೊಂಡಿತು. ಅಂದು ರಾಮ ನಾಮ ಸ್ಮರಣೆ ಇಡೀ ದೇಶದ ಕೇಳಿ ಬಂತು..
Money in Ayodhya ram temple : ಅಯೋಧ್ಯೆ ನಗರದಲ್ಲಿ ಜರುಗಿದ ಭವ್ಯ ರಾಮ ಮಂದಿರದ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಕಣ್ಣಿಗೆ ಹಬ್ಬವಾಗಿತ್ತು. ನೂರಾರು ವರ್ಷಗಳ ನಿರೀಕ್ಷಿತ ಕಾರ್ಯಕ್ರಮವು ಜನವರಿ 22 ರಂದು ಬಲರಾಮನ ಪ್ರತಿಷ್ಠಾಪನೆಯೊಂದಿಗೆ ನೇರವೇರಿತು. ಜಾತಿ, ಧರ್ಮ ಮೀರಿ ಧಾರ್ಮಿಕ ಸೌಹಾರ್ದತೆ ತೋರುತ್ತ ಎಲ್ಲರೂ ಈ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಇದೀಗ ಇದರ ಮಧ್ಯೆ ಬಾಲರಾಮನ ಸನ್ನಿದಿಯಲ್ಲಿ ಅಪರೂಪದ ಘಟನೆಯೊಂದು ನಡೆದಿದೆ..
ಹೌದು.. ಬಲರಾಮನ ಪ್ರಾಣ ಪ್ರತಿಷ್ಟಾಪನೆ ಸಮಾರಂಭವನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿದರು. ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು, ನಟ ನಟಿಯರು, ಕ್ರಿಕೆಟ್ ತಾರೆಯರು, ಭವ್ಯ ರಾಮಮಂದಿರ ಟ್ರಸ್ಟ್‌ನ ಆಡಳಿತಾಧಿಕಾರಿಗಳು ಭಾಗವಹಿಸಿದ್ದರು.
ಇದನ್ನೂ ಓದಿ:9ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ
ಇದೀಗ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಮೆ ಸ್ಥಾಪನೆಯ ನಂತರ ಅಪರೂಪದ ಘಟನೆಯೊಂದು ನಡೆದಿದೆ. ರಾಮನ ಭಕ್ತರಲ್ಲಿ ಹನುಮಂತನೇ ಅಗ್ರಗಣ್ಯನೆಂದು ಹೇಳಲಾಗುತ್ತದೆ. ಎಲ್ಲೆ ರಾಮನೋ ಅಲ್ಲಿ ಹನುಮ.. ಎನ್ನುವ ಪದಕ್ಕೆ ಉದಾರಣೆಯಂತಿದೆ ಅಯೋಧ್ಯೆಯಲ್ಲಿ ನಡೆದ ಈ ಘಟನೆ.
ಕಳೆದ ಮಂಗಳವಾರ ಸಂಜೆ ಎಲ್ಲಿಂದ ಬಂತೋ ಹೇಗೆ ಬಂತೋ ಗೊತ್ತಿಲ್ಲ, ಮಂಗವೊಂದು ಗರ್ಭಗುಡಿ ಪ್ರವೇಶಿಸಿದೆ. ಸಂಜೆ 5:50ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ರಾಮಾಲಯ ಟ್ರಸ್ಟ್‌ನ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ. ದೇಗುಲದಲ್ಲಿ ಸಾಕಷ್ಟು ಭಕ್ತರಿದ್ದರೂ ಕೋತಿ ಯಾವುದೇ ಭಯವಿಲ್ಲದೆ ರಾಮನ ಮೂರ್ತಿಯ ದರ್ಶನ ಮಾಡಿದ್ದಾಗಿ ವರದಿಯಾಗಿದೆ.
ಇದನ್ನೂ ಓದಿ:ನೀವು ನಿಜವಾಗಿಯೂ ಬುದ್ದಿವಂತರೇ.? ಹಾಗಿದ್ರೆ 5 ಸೆಕೆಂಡ್‌ನಲ್ಲಿ YOY ಎಲ್ಲಿದೆ ಅಂತ ಹೇಳಿ ನೋಡೋಣ..
ಸ್ವಲ್ಪ ಸಮಯದವರೆಗೆ ಬಲರಾಮನ ಪ್ರತಿಮೆಯು ಹತ್ತಿರದಲ್ಲಿಯೇ ವಾನರ ನಿಂತಿದ್ದ. ಇದರಿಂದಾಗಿ ಹನುಮಂತ ಶ್ರೀರಾಮನನ್ನು ನೋಡಲು ಬಂದಿದ್ದಾನೋ ಎಂಬಂತೆ ಅಲ್ಲಿದ್ದ ಭಕ್ತರು ಜೋರಾಗಿ ಜೈ ಶ್ರೀರಾಮ್ ಘೋಷಣೆ ಕೂಗಿದರು. ತದನಂತರ ಭದ್ರತಾ ಸಿಬ್ಬಂದಿ ಕೋತಿಯನ್ನು ಹೊರಗೆ ಕಳುಹಿಸಿದರು. ಸಧ್ಯ ಈ ಕುರಿತ ವಿಡಿಯೋ ವೈರಲ್ ಆಗುತ್ತಿವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=xFI-KJNrEP8
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.