YouTube ನಿಂದ ಹಣ ಗಳಿಸುವ ಹೊಸ ಅವಕಾಶ, ಸಿಗಲಿದೆಯಂತೆ ಲಕ್ಷಗಟ್ಟಲೆ ಆದಾಯ
ಸಾಮಾನ್ಯವಾಗಿ ಜನರು ಯು-ಟ್ಯೂಬ್ ಕಂಪನಿಯು ವೀಡಿಯೊಗಳನ್ನು ತಯಾರಿಸುವಾಗ ಮತ್ತು ಪೋಸ್ಟಿಂಗ್ ಮಾಡುವಾಗ ಸರಿಯಾಗಿ ಹಣ ನೀಡುವುದಿಲ್ಲ ಎಂದು ಯು-ಟ್ಯೂಬ್ ಬಗ್ಗೆ ದೂರು ನೀಡುತ್ತಿದ್ದಾರೆ. ಆದರೆ ಈಗ ಹಣ ಗಳಿಸಲು ಯು-ಟ್ಯೂಬ್ ನಿಂದ ಹೊಸ ಅವಕಾಶ ಸಿಗಲಿದೆ.
ನವದೆಹಲಿ: ಸಾಮಾನ್ಯವಾಗಿ ಜನರು ಯು-ಟ್ಯೂಬ್ ಕಂಪನಿಯು ವೀಡಿಯೊಗಳನ್ನು ತಯಾರಿಸುವಾಗ ಮತ್ತು ಪೋಸ್ಟಿಂಗ್ ಮಾಡುವಾಗ ಸರಿಯಾಗಿ ಹಣ ನೀಡುವುದಿಲ್ಲ ಎಂದು ಯು-ಟ್ಯೂಬ್ ಬಗ್ಗೆ ದೂರು ನೀಡುತ್ತಿದ್ದಾರೆ. ಆದರೆ ಈಗ ಹಣ ಗಳಿಸಲು ಯು-ಟ್ಯೂಬ್ ನಿಂದ ಹೊಸ ಅವಕಾಶ ಸಿಗಲಿದೆ. ವಾಸ್ತವವಾಗಿ YouTube ಇದೀಗ ಜನರು ವೀಕ್ಷಕರಿಂದ ಹಣ ಪಡೆಯಲು ಸಾಧ್ಯವಾಗುವಂತೆ ಚಾನಲ್ ಅನ್ನು ಪ್ರಾರಂಭಿಸಲು ಅನುಮತಿಸುತ್ತದೆ. ಗೂಗಲ್ನ ಸ್ವಾಮ್ಯದ ಹಕ್ಕುಗಳ ಸೇವೆಯಲ್ಲಿ ಹೆಚ್ಚಿನ ಆದಾಯವು ಪ್ರಸ್ತುತ ಜಾಹೀರಾತುಗಳಿಂದ ಲಭಿಸುತ್ತದೆ ಎಂದು ಯೂಟ್ಯೂಬ್ನ ಮುಖ್ಯ ಉತ್ಪನ್ನ ಅಧಿಕಾರಿ ನೀಲ್ ಮೋಹನ್ ಹೇಳಿದರು.
ಇದೀಗ ಮುಖ್ಯ ಗಮನವೂ ಇದರಲ್ಲಿ ಕೇಂದ್ರಿಕೃತವಾಗುತ್ತದೆ. ಆದರೆ ನಾವು ಜಾಹೀರಾತುಗಳನ್ನು ಹೊರತುಪಡಿಸಿ, ವಿಡಿಯೋ ತಯಾರಕರೊಂದಿಗೆ ಹಣ ಸಂಪಾದಿಸಲು ಹಲವು ಮಾರ್ಗಗಳು ಮತ್ತು ಅವಕಾಶಗಳಿವೆ ಎಂದು ನೀಲ್ ಮೋಹನ್ ಹೇಳಿದರು. ಒಂದಕ್ಕಿಂತ ಹೆಚ್ಚು ಮಿಲಿಯನ್ ಚಂದಾದಾರರನ್ನು ಹೊಂದಿರುವ ಚಾನಲ್ಗಳಿಗೆ ಚಂದಾದಾರರಾಗಲು, ಪ್ರೇಕ್ಷಕರು ಮಾಸಿಕ $ 4.99 ಅಂದರೆ 320 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ವಿಡಿಯೋ ಶಾಟ್ ಗಳನ್ನು ಸಹ ಚಾನಲ್ ನಲ್ಲಿ ಮಾರಾಟ ಮಾಡಬಹುದು ಎಂದು ಕಂಪನಿ ಹೇಳಿದೆ.
ಈ ಮೊದಲು YouTube ಮೂಲಕ ಹಣ ಗಳಿಸುವ ಏಕೈಕ ಆಯ್ಕೆ ಇತ್ತು. ಅದೇನೆಂದರೆ ನೀವು YouTubeನಲ್ಲಿ ಯಾವುದೇ ವಿಡಿಯೋವನ್ನು ಹಂಚಿಕೊಂಡಿದ್ದರೆ, ಅದರಲ್ಲಿ ಬರುವ ಜಾಹೀರಾತಿಗೆ ಅನುಗುಣವಾಗಿ ಹಣ ಪಾವತಿಸಲಾಗುತ್ತಿತ್ತು. ಜಾಹೀರಾತು ವ್ಯವಹಾರವನ್ನು ನಡೆಸುತ್ತಿರುವ Google ನ ಕಂಪನಿ ಆಡ್ಸೆನ್ಸ್(Adsense) ಪರವಾಗಿ ನಿಮಗೆ ಹಣ ನೀಡಲಾಗುತ್ತದೆ. ಗೂಗಲ್ ನಿಮ್ಮ ಕೆಲಸದ ಬಗ್ಗೆ ಜಾಹೀರಾತುಗಳನ್ನು ನೀಡುತ್ತದೆ, ಈ ಜಾಹೀರಾತುಗಳಲ್ಲಿ ಬಳಕೆದಾರರನ್ನು ಹೆಚ್ಚಿಸುತ್ತದೆ. ಈ ಮೂಲಕ ನೀವು ಕಂಪನಿಯಿಂದ ಹಣ ಸಂಪಾದಿಸುತ್ತೀರಿ. ಈ ಕೆಲಸದಿಂದ ಹಲವು ಜನರು ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸುತ್ತಿದ್ದಾರೆ.
YouTube, ಬ್ಲಾಗ್, ವೆಬ್ಸೈಟ್ಗೆ ಜಾಹೀರಾತುಗಳನ್ನು ತರಲು Google ಆಡ್ಸೆನ್ಸ್ ಕಾರ್ಯನಿರ್ವಹಿಸುತ್ತದೆ. ಈ ರೀತಿಯಲ್ಲಿ, ನೀವು ರಚಿಸಿದ ವೀಡಿಯೊ ಅಥವಾ ಲೇಖನದಲ್ಲಿನ ಬಳಕೆದಾರರ ಸಂಖ್ಯೆಯು ಹೆಚ್ಚಾಗುತ್ತದೆ. ಆದ್ದರಿಂದ ನಿಮ್ಮ ಗಳಿಕೆಯ ಮಟ್ಟವು ಹೆಚ್ಚಾಗುತ್ತದೆ. ಆದರೆ ಈಗ ಗೂಗಲ್ ಒಂದು ಮಿಲಿಯನ್ ಅಥವಾ ಹೆಚ್ಚಿನ ಚಂದಾದಾರರೊಂದಿಗೆ ಚಾನೆಲ್ಗಳಿಗಾಗಿ ಹೊಸ ಯೋಜನೆಯನ್ನು ಪರಿಚಯಿಸಿದೆ.