ಮೆಟ್ರೋ ರೈಲನ್ನೇರಿ 30 ನಿಮಿಷದಲ್ಲಿ ಬಂತು ‘ಹೃದಯ’.! ಬದುಕಿತು ಜೀವ..!
ಹೃದಯ ಕಸಿ ಸಂದರ್ಭದಲ್ಲಿ ಗ್ರೀನ್ ಕಾರಿಡಾರ್ ಟ್ರಾಫಿಕ್ ಫ್ರೀ ಕಾರಿಡಾರ್ ನಲ್ಲಿ ಹೃದಯ ಸಾಗುವುದು ಸರ್ವೇಸಾಮಾನ್ಯ ಸಂಗತಿ..
ಹೈದರಾಬಾದ್ : ಹೃದಯ ಕಸಿ ಸಂದರ್ಭದಲ್ಲಿ ಗ್ರೀನ್ ಕಾರಿಡಾರ್ (Green Corridor), ಟ್ರಾಫಿಕ್ ಫ್ರೀ ಕಾರಿಡಾರ್ ನಲ್ಲಿ ಹೃದಯ ಸಾಗುವುದು ಸರ್ವೇಸಾಮಾನ್ಯ ಸಂಗತಿ. ಭಾರತದ ವೈದ್ಯಲೋಕ ಅಂಥಹ ಸಾಹಸಗಳನ್ನು ಮಾಡಿದೆ. ಆದರೆ ಈ ಸಲ ಹೃದಯ ಸಾಗಿದ್ದು (Heart Transport) ಮೆಟ್ರೋ ರೈಲಿನಲ್ಲಿ.
ಘಟನೆ ನಡೆದಿದ್ದು ಮುತ್ತಿನ ನಗರಿಯಲ್ಲಿ:
ಈ ಘಟನೆ ನಡೆದಿದ್ದು ಮುತ್ತಿನ ನಗರಿ (Pearl City) ಹೈದರಾಬಾದಿನಲ್ಲಿ (Hyderabad). ಇಲ್ಲಿನ ಎಲ್ ಬಿ ನಗರದ (LB Nagar) ಕಾಮಿನೇನಿ ಆಸ್ಪತ್ರೆಯಲ್ಲಿ (Kamineni Hospital) ವ್ಯಕ್ತಿಯೋರ್ವ ಮೆದುಳು ನಿಷ್ಕ್ರೀಯಗೊಂಡು (brain dead) ಸಾವನ್ನಪ್ಪಿದ್ದರು. ಜುಬಿಲಿ ಹಿಲ್ಸ್ ನ (Jubilee Hills) ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬರಿಗೆ ಹೃದಯ ಬೇಕಿತ್ತು. ಅವರಿಗೆ ಹೃದಯ ಕಸಿಮಾಡಲು ವೈದ್ಯರು ಸಿದ್ದತೆ ಮಾಡಿಕೊಂಡಿದ್ದರು. ಅಪೊಲೊ ಆಸ್ಪತ್ರೆಯ ಹೃದ್ರೋಗಿಯನ್ನು ಬದುಕಿಸಲು ಕಾಮಿನೇನಿ ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಹೃದಯವನ್ನು ಫಟಾಪಟ್ ತರಬೇಕಿತ್ತು.
CBSE Exam Date Sheet 2021: CBSE 10ನೇ ಮತ್ತು 12ನೇ ತರಗತಿ ಪರೀಕ್ಷೆಗಳ Date Sheet ಬಿಡುಗಡೆ, ಹೀಗೆ ಡೌನ್ಲೋಡ್ ಮಾಡಿ
ಎರಡು ಆಸ್ಪತ್ರೆಯ ನಡುವಿತ್ತು ಒಂದೂವರೆ ಗಂಟೆ ದೂರ.!
ಕಾಮಿನೇನಿ ಮತ್ತು ಅಪೊಲೊ ಆಸ್ಪತ್ರೆಗಳ ನಡುವಣ ದೂರ 21 ಕಿ.ಮಿ. ರಸ್ತೆ ಮಾರ್ಗದಲ್ಲಿ ಹೇಗೆ ಸಾಗಿದರೂ ಒಂದೂವರೆ ಗಂಟೆಯ ಜರ್ನಿ. ಹೃದಯ ರವಾನೆ (Heart Transport) ಕಾರ್ಯಾಚರಣೆಗೆ ಈ ಮೂಲಕ ವಿಘ್ನ ಎದುರಾಗಿತ್ತು. ಆಗ ದೇವರಂತೆ ಬಂದಿದ್ದು ಹೈದರಾಬಾದ್ ಮೆಟ್ರೊ ರೈಲು (Hyderabad Metro).
ಮೆಟ್ರೋ ಏರಿ 30 ನಿಮಿಷದಲ್ಲಿ ಬಂತು ಹೃದಯ..!
ಮೆಟ್ರೋ ಮೂಲಕ ಅಪೋಲೋ ಆಸ್ಪತ್ರೆಗೆ ಹೃದಯ ರವಾನಿಸಲು ಎರಡೂ ಆಸ್ಪತ್ರೆಗಳ ವೈದ್ಯರು ತೀರ್ಮಾನಿಸಿದರು. ಎಲ್ ಬಿ ನಗರ ಸಮೀಪ ಇರುವ ನಾಗೋಲ್ ಮೆಟ್ರೋ ಸ್ಟೇಷನ್ ನಿಂದ ಮೆಟ್ರೋದಿಂದ ಹೊರಟ ಹೃದಯ ನೇರವಾಗಿ ಜುಬಿಲಿ ಹಿಲ್ ಸ್ಟೇಷನ್ ಗೆ ಬಂತು. ಹೃದಯ ರವಾನೆಯ ದೃಷ್ಟಿಯಿಂದ ಒಂದೇ ಒಂದು ಸ್ಟೇಷನ್ ನಲ್ಲಿ ಕೂಡಾ ಮೆಟ್ರೋ ನಿಲ್ಲಲಿಲ್ಲ. ಶರವೇಗದಿಂದ ಬಂದು ಜುಬಿಲಿ ಹಿಲ್ ಸ್ಟೇಷನ್ ಸೇರಿತು ಹೃದಯ. 16 ಸ್ಠೇಷನ್ ಗಳನ್ನು ದಾಟಿ 21 ಕಿ.ಮಿ ಸಾಗಿ ಜುಬಿಲಿ ಹಿಲ್ಸ್ ಗೆ ಬಂತು ಮೆಟ್ರೋ. ಅಲ್ಲಿಂದ ಅಂಬುಲೆನ್ಸ್ ಮೂಲಕ ಅಪೊಲೋ ಅಸ್ಪತ್ರೆಗೆ ತರಲಾಯಿತು. ಈ ಎಲ್ಲಾ ಕಾರ್ಯಾಚರಣೆ ಕೇವಲ 30 ನಿಮಿಷದಲ್ಲಿ ಮುಗಿದಿತ್ತು.
ಇದನ್ನೂ ಓದಿ : 200 ಕ್ಕೂ ಹೆಚ್ಚು ಖಾತೆಗಳನ್ನು ನಿರ್ಬಂಧಿಸಲು ಟ್ವಿಟರ್‌ಗೆ ಕೇಂದ್ರದ ಆದೇಶ
ಈ ಅಪರೂಪದ ಸೇವಾ ಕಾರ್ಯಕ್ಕೆ ಕೈಜೋಡಿಸಿದ ಹೈದಾರಾಬಾದ್ ಮೆಟ್ರೋಗೆ ಜನತೆ ಥ್ಯಾಂಕ್ಸ್ ಹೇಳಿದ್ದಾರೆ. ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಹೃದಯ ರವಾನೆಯ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.