CBSE Exam Date Sheet 2021: CBSE 10ನೇ ಮತ್ತು 12ನೇ ತರಗತಿ ಪರೀಕ್ಷೆಗಳ Date Sheet ಬಿಡುಗಡೆ, ಹೀಗೆ ಡೌನ್ಲೋಡ್ ಮಾಡಿ

CBSE Exam Date Sheet 2021: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ( CBSE) 10 ಮತ್ತು 12 ನೇ ಪರೀಕ್ಷೆ 2021 ರ (CBSE 10th & 12th Board Exams 2021 Date Sheet) ವೇಳಾಪಟ್ಬಿ ಬಿಡುಗಡೆ ಮಾಡಿದೆ. ಈ ವರ್ಷ ಕರೋನಾ ಸಾಂಕ್ರಾಮಿಕದ ದೃಷ್ಟಿಯಿಂದ, ಪರೀಕ್ಷೆಯ ಹಲವು ನಿಯಮಗಳನ್ನು ಬದಲಾಯಿಸಲಾಗುತ್ತಿದೆ. ಎಲ್ಲಾ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ cbse.nic.in ನಲ್ಲಿ ಡೇಟ್‌ಶೀಟ್ ಪರಿಶೀಲಿಸಬಹುದು.

Written by - Nitin Tabib | Last Updated : Feb 2, 2021, 06:53 PM IST
  • ಸಿಬಿಎಸ್ಇ ಬೋರ್ಡ್ ಎಕ್ಷಾಮ್ 2021 ಡೇಟ್ ಶೀಟ್ ಬಿಡುಗಡೆ.
  • ಅಧಿಕೃತ ವೆಬ್ ಸೈಟ್ cbse.nic.in ಗೆ ಭೇಟಿ ನೀಡಿ ಡೌನ್ ಲೋಡ್ ಮಾಡಿ.
  • ಪರೀಕ್ಷಾ ಫಲಿತಾಂಶಗಳನ್ನು ಜುಲೈ 15, 2021 ರಂದು ಘೋಷಣೆ.
CBSE Exam Date Sheet 2021: CBSE 10ನೇ ಮತ್ತು 12ನೇ ತರಗತಿ ಪರೀಕ್ಷೆಗಳ Date Sheet ಬಿಡುಗಡೆ, ಹೀಗೆ ಡೌನ್ಲೋಡ್ ಮಾಡಿ  title=
CBSE Exam Date Sheet 2021

ನವದೆಹಲಿ: CBSE Exam Date Sheet 2021 - ಕಳೆದ ಹಲವು ದಿನಗಳಿಂದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗಳು 2021 ಡೇಟ್‌ಶೀಟ್‌ಗಾಗಿ ಕಾಯುತ್ತಿದ್ದಾರೆ. ಆದರೆ ಇದೀಗ ಅವರ ನಿರೀಕ್ಷೆಗೆ ತೆರೆಬಿದ್ದಂತಾಗಿದೆ. ಏಕೆಂದರೆ ಕೇಂದ್ರೀಯ ಪ್ರೌಢ  ಶಿಕ್ಷಣ ಮಂಡಳಿ (CBSE) ಇಂದು ಸಿಬಿಎಸ್‌ಇ  10ನೇ ಮತ್ತು 12 ನೇ ತರಗತಿಗಳ ಪರೀಕ್ಷೆಯ ವೆಳಾಪಟ್ಟಿ 2021 ಅನ್ನು ಬಿಡುಗಡೆ ಮಾಡಿದೆ. ಅಂದರೆ 2 ಫೆಬ್ರವರಿ 2021 ರಂದು ಸಂಜೆ 5 ಗಂಟೆಗೆ. ಸಿಬಿಎಸ್‌ಇ 10 ಮತ್ತು 12 ನೇ ಪರೀಕ್ಷೆ-  2021ರ ವೇಳಾಪಟ್ಟಿಯನ್ನು  (CBSE 10th, 12th Board Exams 2021) cbse.nic.in ಮತ್ತು www.cbse.gov.in ನಲ್ಲಿ ಅಪ್‌ಲೋಡ್ ಮಾಡಿದೆ.

ಜಾರಿಯಾದ 10ನೇ ಮತ್ತು 12ನೇ ತರಗತಿಗಳ ಪರೀಕ್ಷಾ ವೇಳಾಪಟ್ಟಿ
ವೇಳಾಪಟ್ಟಿಯ ಪ್ರಕಾರ ಸಿಬಿಎಸ್‌ಇ ಬೋರ್ಡ್ ಪರೀಕ್ಷೆ 2021 (CBSE Board Exams 2021) ಮೇ 4 ರಿಂದ  ಜೂನ್ 10, 2021 ರವರೆಗೆ ನಡೆಯಲಿವೆ. ಸಿಬಿಎಸ್‌ಇ 10, 12 ನೇ ಪರೀಕ್ಷೆ 2021 ಕ್ಕೆ ಹಾಜರಾಗುವ ವಿದ್ಯಾರ್ಥಿಗಳು ಸಿಬಿಎಸ್‌ಇ ವೆಬ್‌ಸೈಟ್‌ನಿಂದ 10 ಮತ್ತು 12 ನೇ ಸಮಯದ ಟೇಬಲ್ 2021 ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

CBSE 10ನೇ ತರಗತಿ ಪರೀಕ್ಷೆಯ  ಡೇಟ್ ಶೀಟ್ 

CBSE 12 ನೇ ತರಗತಿ ಪರೀಕ್ಷೆಯ ಡೇಟ್ ಶೀಟ್ 

CBSE Board ಪರೀಕ್ಷೆಗಳು ಆಫ್ ಲೈನ್ ನಡೆಯಲಿವೆ
ಸಿಬಿಎಸ್‌ಇ 10 ಮತ್ತು 12 ನೇ 2021 ಪರೀಕ್ಷೆಗಳನ್ನು ಆಫ್‌ಲೈನ್‌ನಲ್ಲಿ ನಡೆಸಲಾಗುತ್ತಿದೆ. ಸಿಬಿಎಸ್ಇ 10ನೇ ಹಾಗೂ 12ನೇ ತರಗತಿಯ ಪರೀಕ್ಷೆಗಳಿಗಾಗಿ ಅಡ್ಮಿಟ್ ಕಾರ್ಡ್ (CBSE Board Exams 2021 Admit Card)ಗಳನ್ನು ಏಪ್ರಿಲ್ 2021ರಲ್ಲಿ ಜಾರಿಯಾಗುವ ಸಾಧ್ಯತೆ ಇದೆ. ಇನ್ನೊಂದೆಡೆ ಮಾರ್ಚ್ 1, 2021ರಿಂದ ಪ್ರಾಕ್ಟಿಕಲ್ ಪರೀಕ್ಷೆಗಳು  (CBSE Board Practical Exams 2021) ನಡೆಯಲಿವೆ.

ಇದೆ ವೇಳೆ ಸಿಬಿಎಸ್ಇ 10 ನೇ ಮತ್ತು 12ನೇ ತರಗತಿಗಳ ಪರೀಕ್ಷಾ ಫಲಿತಾಂಶ (CBSE 10, 12 Exams 2021 Results) ಜುಲೈ 15, 2021 ರಂದು ಘೋಷಣೆಯಾಗಲಿವೆ.

ಸಿಬಿಎಸ್ಇ 10 ನೇ ಮತ್ತು 12 ನೇ ತರಗತಿ ಪರೀಕ್ಷೆಗಳ ಡೇಟ್ ಶೀಟ್ ಹೇಗೆ ಡೌನ್ ಲೋಡ್ ಮಾಡಬಹುದು?
1. ಸಿಬಿಎಸ್‌ಇ 10, 12 ನೇ ತರಗತಿ ಪರೀಕ್ಷೆಗಳ (CBSE Board Exam 2021) ಡೇಟ್ ಶೀಟ್  ಡೌನ್‌ಲೋಡ್ ಮಾಡಲು, ವಿದ್ಯಾರ್ಥಿಗಳು ಸಿಬಿಎಸ್‌ಇ ಮಂಡಳಿಯ ಅಧಿಕೃತ ವೆಬ್‌ಸೈಟ್‌cbse.nic.in ಅಥವಾ www.cbse.gov.in ಗಳಿಗೆ ಭೇಟಿ ನೀಡಬೇಕು.
2. ಇಲ್ಲಿ ನೀವು ಸಿಬಿಎಸ್ಇ 10 ನೇ ತರಗತಿ ಪರೀಕ್ಷೆ ಡೇಟ್ ಶೀಟ್ 2021 ಅಥವಾ ಸಿಬಿಎಸ್ಇ 12 ನೇ ತರಗತಿ ಪರೀಕ್ಷೆ ಡೇಟ್ ಶೀಟ್  2021 ಲಿಂಕ್ ಅನ್ನು ಕ್ಲಿಕ್ ಮಾಡಬೇಕು.
3. ಸಿಬಿಎಸ್‌ಇ ವರ್ಗ 10/12 ಡೇಟ್ ಶೀಟ್ 2021 ನಿಮ್ಮ ಕಂಪ್ಯೂಟರ್ ಪರದೆಯ ಮೇಲೆ ತೆರೆದುಕೊಳ್ಳಲಿದೆ. 
4. ಇಬಳಿಕ ವಿದ್ಯಾರ್ಥಿಗಳು ತಮ್ಮ ತರಗತಿಯನ್ನು ಆರಿಸಬೇಕು.
5. ಇದಾದ ಬಳಿಕ  ಡೇಟ್‌ಶೀಟ್‌ನ ಪಿಡಿಎಫ್ ಫೈಲ್ ಡೌನ್‌ಲೋಡ್ ಆಗುತ್ತದೆ.

ಇದನ್ನು ಓದಿ- CBSE ಬೋರ್ಡ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಲು ಇದು ಬೆಸ್ಟ್ ಟ್ರಿಕ್

ಸಿಬಿಎಸ್ಇ 10ನೇ ಮತ್ತು 12 ನೇ ತರಗತಿ ಡೇಟ್ ಶೀಟ್ 2021ಕ್ಕೆ ಸಂಬಂಧಿಸಿದ ಕೆಲ ಅಪ್ಡೇಟ್ ಗಳು ಇಲ್ಲಿವೆ
1.ಈ ಬಾರಿ ಪರೀಕ್ಷೆಯಲ್ಲಿ ವಿವಿಧ ವಿಷಯಗಳ ನಡುವಿನ ಅಂತರ ಕಡಿಮೆ ಇರಲಿದೆ.
2. ಸಿಬಿಎಸ್‌ಇ 10 ನೇ ತರಗತಿ, 12 ಐಚ್ಚಿಕ್ ಪರೀಕ್ಷೆಗಳನ್ನು ವಿವಿಧ ದಿನಗಳಲ್ಲಿ ನಡೆಸಲಾಗುವುದು ಇದರಿಂದ ಸಾಮಾಜಿಕ ಅಂತರ ಕಾಯುವಿದೆ ಸುನಿಶ್ಚಿತಗೊಳಿಸಲಾಗುತ್ತಿದೆ. 
3. ಜೆಇಇ ಮುಖ್ಯ  (JEE Main 2021) ಪ್ರಾರಂಭವಾಗುವ ಮೊದಲು ಸಿಬಿಎಸ್‌ಇ 12 ನೇ ತರಗತಿ ವಿಜ್ಞಾನ ಪರೀಕ್ಷೆಗಳು ಮುಗಿಯುವ ನಿರೀಕ್ಷೆಯಿದೆ.
4.CBSE 10/12ನೇ ತರಗತಿ ಪರೀಕ್ಷ ಗಳನ್ನು ಕೊವಿಡ್ 19 (COVID-19) ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ  ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ನಡೆಸಲಾಗುತ್ತಿದೆ. 
5. ಸಿಬಿಎಸ್‌ಇ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹಾಜರಾಗಲು ವಿವಿಧ ಮಾರ್ಗಸೂಚಿಗಳನ್ನು ಪಾಲಿಸಬೇಕು.
6. ಫೇಸ್ ಮಾಸ್ಕ್ ಧರಿಸುವುದು, ಕೈಗಳನ್ನು ಸ್ವಚ್ಚಗೊಳಿಸುವುದು, ಸ್ಯಾನಿಟೈಜರ್ ಬಳಕೆ  ಮತ್ತು ಸಾಮಾಜಿಕ ದೂರ ಕಾಯ್ದುಕೊಳ್ಳುವುದು ಕಡ್ಡಾಯವಾಗಿರಲಿದೆ.

ಇದನ್ನು ಓದಿ- ಲಾಕ್‌ಡೌನ್‌ನಲ್ಲಿ ಬೇರೆಡೆ ಸಿಲುಕಿರುವ ವಿದ್ಯಾರ್ಥಿಗಳಿಗೆ ಪರಿಹಾರ ನೀಡಿದ CBSE

ಹೊಸ ಸಿಲೆಬಸ್ ಆಧರಿಸಿ ಪರೀಕ್ಷಾ ಸಿದ್ಧತೆ ನಡೆಸಿ
10 ಮತ್ತು 12ನೇ ತರಗತಿಗಳ ಪರೀಕ್ಷಾ ಫಲಿತಾಂಶಗಳನ್ನು ಜುಲೈ 15 ರಂದು ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ (Education Minister Ramesh Pokhriyal Nishank) ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದ್ದರು. ಮಂಡಳಿಯು ಈಗಾಗಲೇ ಅಕೌಂಟನ್ಸಿ, ಭೌತಶಾಸ್ತ್ರ, ಗಣಿತ, ಜೀವಶಾಸ್ತ್ರ ಮತ್ತು ಮನೋವಿಜ್ಞಾನ ಸೇರಿದಂತೆ ಎಲ್ಲಾ ವಿಷಯಗಳಿಗೆ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಮತ್ತು ಅವುಗಳ ಗುರುತು ಯೋಜನೆಗಳನ್ನು ಬಿಡುಗಡೆ ಮಾಡಿದೆ. COVID ಲಾಕ್‌ಡೌನ್ ಅವಧಿಯಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ತೊಂದರೆಗಳಿಂದಾಗಿ ಮಂಡಳಿಯು ಪಠ್ಯಕ್ರಮವನ್ನು ಶೇ.30 ರಷ್ಟು ಕಡಿಮೆ ಮಾಡಿದೆ. ಆದ್ದರಿಂದ ವಿದ್ಯಾರ್ಥಿಗಳು ಅದಕ್ಕೆ ತಕ್ಕಂತೆ ತಯಾರಿ ನಡೆಸಬೇಕು.

ಇದನ್ನು ಓದಿ- CBSE Board Exam 2021: CBSE ಹೊಸ ನಿಯಮ, ಈ ಪರೀಕ್ಷೆಯಲ್ಲಿ ಯಾರಿಗೂ ಕೂಡ Fail ಮಾಡಲಾಗುವುದಿಲ್ಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News