ನವದೆಹಲಿ: ಕರೋನವೈರಸ್‌ನಿಂದ ಬಳಲುತ್ತಿದ್ದ 52 ವರ್ಷದ ಮಹಿಳೆಯೊಬ್ಬರು ಆಸ್ಪತ್ರೆಯ ಕೊಠಡಿಯ ಕಿಟಕಿಯಿಂದ ಹೊರಗೆ ಹಾರಿರುವ ಘಟನೆ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ (RGSSH) ಬುಧವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ವಿಚಾರಣೆ ವೇಳೆ ಮಹಿಳೆಯನ್ನು ಮಂಗಳವಾರ ಸಂಜೆಯಷ್ಟೇ ಆರ್‌ಜಿಎಸ್‌ಎಸ್‌ಎಚ್‌ಗೆ ದಾಖಲಿಸಲಾಗಿತ್ತು ಎಂದು ತಿಳಿದುಬಂದಿದೆ. ರೋಗಿಯು ಐದನೇ ಮಹಡಿಯಲ್ಲಿರುವ ತನ್ನ ಕೊಠಡಿಯಿಂದ ಹಾರಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.


ದೆಹಲಿಯಲ್ಲಿ ದಾಖಲೆಯ 8,593 ಹೊಸ ಕೊರೊನಾ ಪ್ರಕರಣಗಳ ದಾಖಲು


ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿ ತನಿಖೆ ನಡೆಸಿದ್ದಾರೆ.  ಘಟನೆಯಲ್ಲಿ  ದಿಲ್ಷಾದ್ ಕಾಲೋನಿ ನಿವಾಸಿ ಪದ್ಮಜಾ ಎಂಬ ಮಹಿಳೆ ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ಶರಣಾಗಿರುವ ಮಹಿಳೆ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ವೈದ್ಯರು ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.


UNICEF Alert:ಮಾತನಾಡುವುದು ಹಾಗೂ ಉಸಿರಾಟದಿಂದಲೂ ಕೊರೊನಾ ಹರಡುತ್ತದೆ


ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್‌ಜಿಎಸ್‌ಎಸ್‌ಎಚ್‌ನ ಹಿರಿಯ ವೈದ್ಯರೊಬ್ಬರು ಮಹಿಳೆಯ ಮಗ ಮತ್ತು ಗಂಡನನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ, ಇದು ಕರೋನವೈರಸ್ (Coronavirus)  ರೋಗಿಗಳಿಗೆಂದೇ ಮೀಸಲಾಗಿರುವ ಆಸ್ಪತ್ರೆಯಾಗಿದೆ. ಮೃತ ಮಹಿಳೆ ಮತ್ತವರ ಮಗನನ್ನು ಐದನೇ ಮಹಡಿಯಲ್ಲಿ ಇರಿಸಲಾಗಿತ್ತು. ಪತಿ ಆರನೇ ಮಹಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿಸಿದ್ದಾರೆ.


ಸದ್ಯ ಶವವನ್ನು ಜಿಟಿಬಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.