ನವದೆಹಲಿ : ನಾವು ಬೆಳಿಗ್ಗೆ ಎದ್ದು ಇದ್ದಕ್ಕಿದ್ದಂತೆ ಮಿಲಿಯನೇರ್ ಆಗುವ ಒಳ್ಳೆಯ ಸುದ್ದಿ ಬಂದರೆ ಹೇಗಿರುತ್ತೆ. ಎಲ್ಲರೂ ರಾತ್ರೋರಾತ್ರಿ ಶ್ರೀಮಂತರಾಗಬೇಕೆಂದು ಕನಸು ಕಾಣುವುದು ಸಹಜವೇ. ಆದರೆ ಹಲವರಿಗೆ ಮಾತ್ರ ಈ ಅದೃಷ್ಟ ಇರುತ್ತದೆ. ಅಂತಹವರಲ್ಲೇ ಒಬ್ಬರು ಅಮೃತಸರ (ಪಂಜಾಬ್) ನಲ್ಲಿ ವಾಸಿಸುವ ಗೃಹಿಣಿ ರೇಣು ಚೌಹಾಣ್ (Renu Chauhan). ಆಕೆ ರಾತ್ರೋರಾತ್ರಿ ಮಿಲಿಯನೇರ್ ಆಗಿದ್ದಾರೆ. ಕೇಳಿದರೆ ಆಶ್ಚರ್ಯವಾಗಬಹುದು ಆದರೆ ಇದು ಸತ್ಯ. ಅದು ಹೇಗೆಂದು ತಿಳಿಯಲು ಮುಂದೆ ಓದಿ.


COMMERCIAL BREAK
SCROLL TO CONTINUE READING

ಒಂದು ಕೋಟಿ ಬಹುಮಾನ ಗೆದ್ದ ಮಹಿಳೆ: 
ಪಂಜಾಬ್‌ನ  (Punjab) ಅಮೃತಸರ ನಗರದಲ್ಲಿ ವಾಸಿಸುತ್ತಿರುವ  ರೇಣು ಚೌಹಾಣ್ ಗೃಹಿಣಿ. ಕೆಲವು ದಿನಗಳ ಹಿಂದೆ ಅವರು 100 ರೂಪಾಯಿಗೆ ಲಾಟರಿ ಟಿಕೆಟ್ (Lottery Ticket)  ಖರೀದಿಸಿದ್ದರು. ಪಂಜಾಬ್ ಲಾಟರಿ ಫಲಿತಾಂಶ (Punjab Lottery Result)ಬಂದಾಗ, ಅವರು ಲಾಟರಿಯಲ್ಲಿ ಪ್ರಥಮ ಬಹುಮಾನವನ್ನು ಗೆದ್ದಿದ್ದಾರೆ ಎಂದು ತಿಳಿದುಬಂದಿದೆ. ಈ ಬಹುಮಾನದ ಮೊತ್ತ (Prize Money) ಬರೋಬ್ಬರಿ 1 ಕೋಟಿ ರೂ. ಇದರಿಂದಾಗಿ ಗೃಹಿಣಿ ರೇಣು ಚೌಹಾಣ್ ರಾತ್ರೋ ರಾತ್ರಿ ಕೋಟ್ಯಾಧಿಪತಿ (Millionaire) ಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರೇಣು ಚೌಹಾಣ್ ನಾನು ಕೇವಲ 100 ರೂಪಾಯಿಗೆ ಲಾಟರಿ ಖರೀದಿಸಿದ್ದೆ. ದೇವರು ನಮಗೆ ಇಷ್ಟು ಬೇಗ ನಮ್ಮ ಕನಸನ್ನು  ಈಡೇರಿಸುತ್ತಾರೆ ಎಂದು ನಾನು ಭಾವಿಸಿರಲಿಲ್ಲ. ಇದರಿಂದ ತುಂಬಾ ಸಂತೋಷವಾಗಿದೆ ಮತ್ತು ಇದನ್ನು ದೇವರ ಆಶೀರ್ವಾದವೆಂದು ಪರಿಗಣಿಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ - ಒಂದೇ ರಾತ್ರಿಯಲ್ಲಿ ಕೋಟ್ಯಾಧೀಶನಾದ ತರಕಾರಿ ಮಾರಾಟಗಾರ...! ಹೇಗೆ?


ರೇಣು ಅವರ ಅದೃಷ್ಟವೇ ಬದಲಾಯಿತು :
ಎಎನ್‌ಐ ವರದಿಯ ಪ್ರಕಾರ, ರೇಣು ಚೌಹಾಣ್ ಮಧ್ಯಮ ವರ್ಗದ ಕುಟುಂಬದವರಾಗಿದ್ದು ಪಂಜಾಬ್‌ನ (Punjab) ಅಮೃತಸರದ ಲಾರೆನ್ಸ್ ರೋಡ್ ನಲ್ಲಿ ವಾಸಿಸುತ್ತಾರೆ. ಆಕೆಯ ಪತಿ ಬಟ್ಟೆ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ. ಈಗ ಲಾಟರಿಯಿಂದ ಗೆದ್ದ ಮೊತ್ತದಿಂದ ನಮ್ಮ ಜೀವನ ಮತ್ತಷ್ಟು ಸುಲಭವಾಗಲಿದೆ ಎಂದು ರೇಣು ವಿಶ್ವಾಸದಿಂದ ನುಡಿದಿದ್ದಾರೆ.


ಇದನ್ನೂ ಓದಿ - ಇಲ್ಲಿದೆ ಕೇವಲ ₹595ಗೆ ಲಕ್ಷಾಧಿಪತಿ ಆಗುವ ಅವಕಾಶ


1 ಕೋಟಿ ರೂ. ಶೀಘ್ರದಲ್ಲೇ ಖಾತೆಗೆ ವರ್ಗಾಯಿಸಲಾಗುವುದು :
ಪಂಜಾಬ್ ರಾಜ್ಯ ಲಾಟರಿ ಇಲಾಖೆಯ ವಕ್ತಾರರ ಪ್ರಕಾರ, ಪ್ರತಿ ತಿಂಗಳು ಬಿಡುಗಡೆಯಾಗುವ ಪಂಜಾಬ್ ಸ್ಟೇಟ್ ಡಿಯರ್ 100 + ಲಾಟರಿ ಡ್ರಾ (Punjab State Dear 100 + Lottery Draw)ವನ್ನು ಈ ಬಾರಿ ಫೆಬ್ರವರಿ 11, 2021 ರಂದು ಬಿಡುಗಡೆ ಮಾಡಲಾಯಿತು. ಇದರಲ್ಲಿ, ಟಿಕೆಟ್ ಸಂಖ್ಯೆ ಡಿ -12228 ನಲ್ಲಿ ಪ್ರಥಮ ಬಹುಮಾನ ಹೊರಬಂದಿತು. ಬಹುಮಾನದ ಹಣವನ್ನು ಪಡೆಯಲು ರೇಣು ತಮ್ಮ ಲಾಟರಿ ಟಿಕೆಟ್ ಮತ್ತು ಎಲ್ಲಾ ದಾಖಲೆಗಳನ್ನು ಜಮಾ ಮಾಡಿದ್ದಾರೆ. ಶೀಘ್ರದಲ್ಲೇ ಬಹುಮಾನದ ಮೊತ್ತವನ್ನು ಅವರ ಖಾತೆಗೆ ವರ್ಗಾಯಿಸಲಾಗುತ್ತದೆ ಎಂದು ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.