ಕೋಲ್ಕತ್ತಾ: ಓರ್ವ ಮನುಷ್ಯನ ಭಾಗ್ಯ ಹೇಗೆ ಮತ್ತು ಯಾವಾಗ ಬದಲಾಗಲಿದೆ ಎಂಬುದು ಯಾರಿಂದಲೂ ಹೇಳಲು ಸಾಧ್ಯವಿಲ್ಲ. ಹೌದು, ಅದೃಷ್ಟ ಒಲಿದು ಬಂದರೆ ಓರ್ವ ವ್ಯಕ್ತಿ ಕ್ಷಣಾರ್ಧದಲ್ಲಿ ಕೋಟ್ಯಾಧಿಪತಿ ಆಗಬಹುದು. ಇಂತಹುದೇ ಒಂದು ಘಟನೆ ಕೊಲ್ಕತಾದಲ್ಲಿ ನಡೆದಿದೆ. ಇಲ್ಲಿ ತರಕಾರಿ ಮಾರುವ ವ್ಯಾಪಾರಿಯ ಭಾಗ್ಯ ಯಾವ ರೀತಿ ಬದಲಾಗಿದೆ ಎಂದರೆ, ಎರಡು ಹೊತ್ತಿನ ಊಟಕ್ಕೆ ಶ್ರಮ ಪಡುತ್ತಿದ್ದ ಆ ವ್ಯಕ್ತಿ ರಾತ್ರೋರಾತ್ರಿ ಕೋಟ್ಯಾಧೀಶನಾಗಿದ್ದಾನೆ.
ಕೊಲ್ಕತ್ತಾದಲ್ಲಿ ತರಕಾರಿ ಮಾರುವ ಈ ವ್ಯಕ್ತಿಗೆ ಒಂದು ಕೋಟಿ ರೂ.ಗಳ ಲಾಟರಿ ಒಲಿದು ಬಂದಿದ್ದು, ಆತ ಒಂದು ಕೋಟಿ ರೂ.ಗೆದ್ದಿದ್ದಾನೆ.
ಮೂಲಗಳ ಪ್ರಕಾರ ಕೋಲ್ಕತ್ತಾದ ಡಂಡಂ ಪ್ರದೇಶದಲ್ಲಿ ತರಕಾರಿ ಮಳಿಗೆ ನಡೆಸುತ್ತಿದ್ದ ಸಾದಿಕ್ ಹೆಸರಿನ ಓರ್ವ ವ್ಯಕ್ತಿ ಹೊಸವರ್ಷದ ಅಂಗವಾಗಿ ಏರ್ಪಡಿಸಲಾಗಿದ್ದ ನಾಗಾಲ್ಯಾಂಡ್ ರಾಜ್ಯ ಲಾಟರಿಯ 5 ಟಿಕೆಟ್ ಗಳನ್ನು ಖರೀದಿಸಿದ್ದ ಎನ್ನಲಾಗಿದೆ.
ಕಸದ ತೊಟ್ಟಿಗೆ ಎಸೆಯಲಾಗಿತ್ತು ಲಾಟರಿ ಟಿಕೆಟ್
ಜನವರಿ 2ನೆ ತಾರೀಖಿಗೆ ಲಾಟರಿ ಫಲಿತಾಂಶ ಪ್ರಕಟಗೊಂಡಿದೆ. ಆದರೆ, ಈ ಫಲಿತಾಂಶದಲ್ಲಿ ಸಾದಿಕ್ ಗೆ ಯಾವುದೇ ಲಾಟರಿ ಬಂದಿಲ್ಲ. ಬಳಿಕ ಸಾದಿಕ್ ತನ್ನ ಬಳಿ ಇದ್ದ ಎಲ್ಲ ಐದು ಟಿಕೆಟ್ ಗಳನ್ನು ಕಸದ ಬುಟ್ಟಿಗೆ ಎಸೆದಿದ್ದಾನೆ. ನಂತರ ಆತನ ಒಂದು ಟಿಕೆಟ್ ಗೆ 1 ಕೋಟಿ ರೂ. ಬಹುಮಾನ ಬಂದಿರುವುದು ಆತನಿಗೆ ತಿಳಿದುಬಂದಿದೆ.
ಲಾಟರಿ ಮಾರಾಟಗಾರ ನೀಡಿದ್ದ ಈ ಮಾಹಿತಿ
ಸಾದಿಕ್ ನೀಡಿರುವ ಮಾಹಿತಿ ಪ್ರಕಾರ, ಆತನ ಜೊತೆಗೆ ಇದ್ದವರು ಆತನಿಗೆ ಯಾವುದೇ ಲಾಟರಿ ಬಂದಿಲ್ಲ ಎಂಬ ಮಾಹಿತಿ ನೀಡಿದ್ದಾರೆ ಎಂದಿದ್ದಾನೆ. ಆದರೆ, ಮಾರನೆಯ ದಿನವೇ ಲಾಟರಿ ಅಂಗಡಿಯ ಮಾಲೀಕ ಸಾದೀಕ್ ಗೆ ಆತನ ಒಂದು ಟಿಕೆಟ್ ಮೇಲೆ 1 ಕೋಟಿ ರೂ. ಬಹುಮಾನ ಬಂದಿರುವುದಾಗಿ ತಿಳಿಸಿದ್ದು, ಉಳಿದ ನಾಲ್ಕು ಟಿಕೆಟ್ ಗಳ ಮೇಲೆ ತಲಾ 1 ಲಕ್ಷ ರೂ.ಗಳ ಬಹುಮಾನ ಬಂದಿರುವುದಾಗಿ ಹೇಳಿದ್ದಾನೆ.
ತಕ್ಷಣ ಅಲ್ಲಿಂದ ಕಾಲ್ಕಿತ್ತ ಸಾದೀಕ್ ಮನೆಗೆ ಧಾವಿಸಿ ತನ್ನ ಪತ್ನಿ ಹಾಗೂ ಮಕ್ಕಳ ಜತೆಗೂಡಿ ಕಸದ ತೊಟ್ಟಿಗೆ ಹೋಗಿ ಲಾಟರಿ ಟಿಕೆಟ್ ಗಾಗಿ ಹುಡುಕಾಟ ನಡೆಸಿದ್ದಾನೆ. ಸಾಕಷ್ಟು ಶ್ರಮದ ಬಳಿಕ ಆತನಿಗೆ ಲಾಟರಿ ಟಿಕೆಟ್ ಗಳು ದೊರೆತಿವೆ.
ಈ ಲಾಟರಿ ಹಣ ಪಡೆಯಲು ಸಾದಿಕ್ ಗೆ 1-2 ತಿಂಗಳು ಕಾಲ ಕಾಯಬೇಕಾಗಲಿದೆ. ಆದರೆ, ಈಗಾಗಲೇ ಸಾದಿಕ್ ಹಾಗೂ ಆತನ ಪತ್ನಿ ಅಮೀನಾ ತಮಗೆ ಲಾಟರಿಯಿಂದ ಬಂದ ಹಣವನ್ನು ಹೇಗೆ ವಿನಿಯೋಗಿಸಬಹುದು ಎಂಬುದರ ಕುರಿತು ಯೋಜನೆಗಳನ್ನು ಸಿದ್ಧಪಡಿಸಿದ್ದಾರೆ. ಸಾದೀಕ್ ತನಗಾಗಿ ಒಂದು SUV ಕಾರ್ ಬುಕ್ ಮಾಡಿದರೆ, ಅವರ ಪತ್ನಿ ಅಮೀನಾ ಮಕ್ಕಳನ್ನು ಒಳ್ಳೆಯ ಶಾಲೆಯಲ್ಲಿ ಓದಿಸುವ ಕುರಿತು ಹಾಗೂ ಒಂದು ಮನೆ ಖರೀದಿಸಲು ಯೋಜನೆ ರೂಪಿಸುತ್ತಿದ್ದಾಳೆ.