ನವದೆಹಲಿ: ಒಂದು ವೇಳೆ ನೀವು ಸರ್ಕಾರದ ಸಬ್ಸಿಡಿಯ ಲಾಭ ಪಡೆಯಲು ಬಯಸುತ್ತಿದ್ದರೆ ಮತ್ತು ಅದಕ್ಕೆ ನೀವು ಅದಕ್ಕೆ ಅರ್ಹರಾಗಿದ್ದರೆ, DBT ಸೌಕರ್ಯದ ಮೂಲಕ ಇದನ್ನು ಪಡೆಯಬಹುದಾಗಿದೆ. ಇನ್ಮುಂದೆ ನೀವು ಈ ಲಾಭವನ್ನು ನಿಮ್ಮ ಪೋಸ್ಟ್ ಆಫೀಸ್  (India Post) ಸೇವಿಂಗ್ ಅಕೌಂಟ್ ನಲ್ಲಿಯೂ ಕೂಡ ಪಡೆಯಬಹುದು. ಆದರೆ, ಇದಕ್ಕಾಗಿ ನೀವು ನಿಮ್ಮ ಖಾತೆಯನ್ನು ಆಧಾರ್ ಕಾರ್ಡ್ ನೊಂದಿಗೆ ಜೋಡಣೆ ಮಾಡಿರುವುದು ಅವಶ್ಯಕವಾಗಿದೆ.


COMMERCIAL BREAK
SCROLL TO CONTINUE READING

ಅರ್ಜಿಯಲ್ಲಿ ಸಿಗಲಿದೆ ನಿಮಗೆ ಈ ಆಯ್ಕೆ
ಭಾರತೀಯ ಅಂಚೆ ಇಲಾಖೆ ಇದಕ್ಕೆ ಸಂಬಂಧಿಸಿದಂತೆ ಆಗಸ್ಟ್  11 ರಂದು ರಂದು ಸುತ್ತೋಲೆಯೊಂದನ್ನು ಜಾರಿಗೊಳಿಸಿದೆ. ಸುತ್ತೋಲೆ ಪ್ರಕಾರ, ಪೋಸ್ಟ್ ಆಫೀಸ್ ಸೇವಿಂಗ್ ಅಕೌಂಟ್ ನಲ್ಲಿ DBT ಬೆನಿಫಿಟ್ ಪಡೆಯಬಹುದು ಎಂದು ಹೇಳಿದೆ. ಇದಕ್ಕಾಗಿ ಆಧಾರ್ ಕಾರ್ಡ್ ಲಿಂಕ್ ಮಾಡಲು ಫಾರ್ಮ್ ನಲ್ಲಿ ಒಂದು ಕಾಲಂ ಕೂಡ ನೀಡಲಾಗಿದೆ. ಈ ಕಾಲಂ ನಿಮಗೆ ಖಾತೆ ತೆರೆಯುವ ಅಪ್ಪ್ಲಿಕೆಶನ್ ಜೊತೆಗೆ ಪರ್ಚೆಸ್ ಆಫ್ ಸರ್ಟಿಫಿಕೆಟ್ ಫಾರ್ಮ್ ನಲ್ಲಿಯೂ ಕೂಡ ಕಾಣಿಸಲಿದೆ. ಠೇವಣಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಣಯ ಕೈಗೊಳ್ಳಲಾಗಿದೆ.


ಭಾರತೀಯ ಪೋಸ್ಟ್ ಇಲಾಖೆಯ ಸುತ್ತೋಲೆಯಲ್ಲಿ ಬದಲಾವಣೆ
ಕೇಂದ್ರ ಸರ್ಕಾರ ಪಬ್ಲಿಕ್ ಪ್ರಾವಿಡೆಂಟ್ ಫಂಡ್, ನ್ಯಾಷನಲ್ ಸೇವಿಂಗ್ ಸರ್ಟಿಫಿಕೆಟ್ ಹಾಗೂ ಇತರೆ ಸಣ್ಣ ಉಳಿತಾಯ್ ಅಯೋಜನೆಗಳಲ್ಲಿ ಹಣ ಹೂಡಿಕೆ ಮಾಡಲು ಒಂದೇ ಕಾಮನ್ ಅಪ್ಪ್ಲಿಕೆಶನ್ ಜಾರಿಗೊಳಿಸಿದೆ. ಇದನ್ನು ಪರಿಗಣಿಸಿ ಭಾರತೀಯ ಪೋಸ್ಟ್ ಇಲಾಖೆ ಈ ಬದಲಾವಣೆಯನ್ನು ಮಾಡಿದೆ.