ನವದೆಹಲಿ: ಬಹು ನಿರೀಕ್ಷಿತ ಆಧಾರ್ ಸಿಂಧುತ್ವ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದ್ದು, 'ಆಧಾರ್' ಸಾಂವಿಧಾನಿಕ ಸಿಂಧುತ್ವವನ್ನು ನೀಡಿ ಐತಿಹಾಸಿಕ ತೀರ್ಪು ನೀಡಿದೆ.


COMMERCIAL BREAK
SCROLL TO CONTINUE READING

'ಆಧಾರ್'ಗೆ ಸಾಂವಿಧಾನಿಕ ಮಾನ್ಯತೆ, ಮಹತ್ವದ ತೀರ್ಪು ಪ್ರಕಟಿಸಿದ ಸುಪ್ರೀಂಕೋರ್ಟ್


ಆಧಾರ್ ಮೇಲಿನ ದಾಳಿ ಸಂವಿಧಾನಕ್ಕೆ ವಿರುದ್ಧವಾದುದು ಎಂದಿರುವ ಸುಪ್ರೀಂಕೋರ್ಟ್ ಆಧಾರ್ ದತ್ತಾಂಶಗಳ ಸೋರಿಕೆ ಅಥವಾ ಅವುಗಳನ್ನು ಕದಿಯುವುದು ಸಂವಿಧಾನಕ್ಕೆ ವಿರುದ್ಧವಾದದ್ದು. ಆಧಾರ್ ಮಾಹಿತಿ ರಕ್ಷಣೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಂತೆಯೇ ಸಮಾಜದ ಹಿತದೃಷ್ಟಿಯಿಂದ ಕೆಲವು ನಿರ್ಬಂಧಗಳು ಅಗತ್ಯ ಎಂದಿರುವ ಕೋರ್ಟ್, ಯೋಜನೆಗಳ ಫಲಾನುಭವಿಗಳಿಗೆ ಆಧಾರ್ ನಿಂದ ಉಪಯೋಗವಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದೆ. 


ಆಧಾರ್ ಹಾಗೂ ಇತರ ಗುರುತಿನ ಚೀಟಿಯ ನಡುವೆ ಅಂತರವಿದೆ ಎಂದು ತಿಳಿಸಿರುವ ಸುಪ್ರೀಂಕೋರ್ಟ್ ಆಧಾರ್ ಕಾರ್ಡ್ ಅನ್ನು ನಕಲು ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಯಾವುದೇ ವ್ಯಕ್ತಿ ಆಧಾರ್ ಅನ್ನು ನಕಲು ಮಾಡಲು ಪ್ರಯತ್ನಿಸಿದರೂ ಬಯೋಮೆಟ್ರಿಕ್ ಸಿಸ್ಟಂ ನಲ್ಲಿ ಸಿಲುಕಿಕೊಳ್ಳುತ್ತಾನೆ. ಹೀಗಾಗಿ ಆಧಾರ್ ಒಂದು ವಿಶಿಷ್ಟ ಗುರುತಿನ ಚೀಟಿ ಎಂದಿರುವ ಸುಪ್ರೀಂ ಆಧಾರ್ ಯಾವುದಕ್ಕೆ ಕಡ್ಡಾಯ/ ಯಾವುದಕ್ಕೆ ಕಡ್ಡಾಯವಲ್ಲ ಎಂದು ತಿಳಿಸಿದೆ.


ಇವುಗಳಿಗೆ ಆಧಾರ್ ಕಡ್ಡಾಯ:


  • ಸರ್ಕಾರದ ಯೋಜನೆಗಳಿಗೆ ಆಧಾರ್ ಕಡ್ಡಾಯ.

  • ಪಾನ್ ಕಾರ್ಡ್ ನೊಂದಿಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯ.

  • ಆದಾಯ ತೆರಿಗೆ ಪಾವತಿಗೂ ಆಧಾರ್ ಜೋಡಣೆ ಕಡ್ಡಾಯ.


ಇವುಗಳಿಗೆ ಆಧಾರ್ ಕಡ್ಡಾಯವಲ್ಲ:


  • ಬ್ಯಾಂಕ್ ಖಾತೆಗೆ ಆಧಾರ್ ಕಡ್ಡಾಯವಲ್ಲ.

  • ಮೊಬೈಲ್ ನಂಬರ್ ಗೆ ಆಧಾರ್ ಜೋಡಣೆ ಕಡ್ಡಾಯವಲ್ಲ.

  • ಶಾಲಾ-ಕಾಲೇಜುಗಳಲ್ಲಿ ಆಧಾರ್ ಕಡ್ಡಾಯವಲ್ಲ.

  • ಸಿಬಿಎಸ್ಇ, ನೀಟ್, ಯುಜಿಸಿಗೆ ಆಧಾರ್ ಕಡ್ಡಾಯವಲ್ಲ.

  • ಮೊಬೈಲ್ ಫೋನ್ ಗಳಿಗೆ ಆಧಾರ್ ಕಡ್ಡಾಯವಿಲ್ಲ.