ಎಎಪಿ ಶಾಸಕರಿಗೆ ರಿಲೀಫ್, ಚುನಾವಣಾ ಆಯೋಗದ ಆದೇಶ ರದ್ದುಗೊಳಿಸಿದ ದೆಹಲಿ ಹೈಕೋರ್ಟ್
ಈ ಪ್ರಕರಣದಲ್ಲಿ ಚುನಾವಣಾ ಆಯೋಗದಿಂದ ನೈಸರ್ಗಿಕ ನ್ಯಾಯಪಾಲನೆ ಆಗಿಲ್ಲ ಎಂದು ಹೈಕೋರ್ಟ್ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.
ನವದೆಹಲಿ: ಲಾಭದಾಯಕ ಹುದ್ದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ(AAP) ಶಾಸಕರಿಗೆ ರಿಲೀಫ್ ಸಿಕ್ಕಿದೆ. ಲಾಭದಾಯಕ ಹುದ್ದೆ ಆರೋಪದಡಿ ಎಎಪಿ ಯ 20 ಶಾಸಕರನ್ನು ಅನರ್ಹಗೊಳಿಸುವಂತೆ ಚುನಾವಣಾ ಆಯೋಗ ಹೊರಡಿಸಿದ್ದ ಆದೇಶವನ್ನು ದೆಹಲಿ ಹೈಕೋರ್ಟ್ ರದ್ದುಗೊಳಿಸಿದೆ. ಈ ಪ್ರಕರಣದಲ್ಲಿ ಚುನಾವಣಾ ಆಯೋಗದಿಂದ ನೈಸರ್ಗಿಕ ನ್ಯಾಯಪಾಲನೆ ಆಗಿಲ್ಲ ಎಂದು ಹೈಕೋರ್ಟ್ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.
ಅದೇ ಸಮಯದಲ್ಲಿ ಚುನಾವಣಾ ಆಯೋಗವು ಕಾರ್ಯವಿಧಾನವನ್ನು ಅನುಸರಿಸಲಿಲ್ಲ ಎಂದು ನ್ಯಾಯಾಲಯ ಹೇಳಿದೆ. ಈ ಹಿನ್ನೆಲೆಯಲ್ಲಿ 20 ಶಾಸಕರ ಕೋರಿಕೆಯನ್ನು ಕೇಳುವಂತೆ ಚುನಾವಣಾ ಆಯೋಗಕ್ಕೆ ಕೋರ್ಟ್ ಸೂಚಿಸಿದೆ.
ಹೈಕೋರ್ಟ್ ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ 'ಸತ್ಯಕ್ಕೆ ಜಯ', ಹೈಕೋರ್ಟ್ ನ್ಯಾಯವನ್ನು ಎತ್ತಿ ಹಿಡಿದಿದೆ ಎಂದು ತಿಳಿಸಿದ್ದಾರೆ.
ಈ ವರ್ಷದ ಜನವರಿ 19 ರಂದು ಲಾಭದಾಯಕ ಹುದ್ದೆ ಹೊಂದಿರುವ ಆರೋಪದಡಿ ದೆಹಲಿಯ 20 ಶಾಸಕರನ್ನು ಅನರ್ಹಗೊಳಿಸಲಾಯಿತು. ಚುನಾವಣಾ ಆಯೋಗವು ಶಾಸಕರನ್ನು ಅನರ್ಹಗೊಳಿಸಿದ ನಂತರ, ರಾಷ್ಟ್ರಪತಿ ಆಯೋಗದ ಸಲಹೆಯ ಮೇರೆಗೆ ಅದಕ್ಕೆ ಅಂಕಿತ ಹಾಕಿದ್ದರು. ದೆಹಲಿ ಹೈಕೋರ್ಟ್ ವಿಚಾರಣೆಯನ್ನು ಪೂರ್ಣಗೊಳಿಸಿ ತೀರ್ಪು ನೀಡುವವರೆಗೂ ಉಪ-ಚುನಾವಣೆಗೆ ಹೋಗಬಾರದು ಎಂದು ಸೂಚಿಸಲಾಗಿತ್ತು.
ಚುನಾವಣಾ ಆಯೋಗದಿಂದ ಅನರ್ಹರಾಗಿರುವ ಶಾಸಕರ ಹೆಸರುಗಳು ಹೀಗಿವೆ:
ಶರದ್ ಕುಮಾರ್ (ನರೇಲಾ)
ಸೋಮದಾತ್ತಾ (ಸದರ್ ಬಜಾರ್)
ಆದರ್ಶ್ ಶಾಸ್ತ್ರಿ (ದ್ವಾರಕಾ)
ಅವತಾರ್ ಸಿಂಗ್ (ಕಲ್ಕಾಜಿ)
ನಿತಿನ್ ತ್ಯಾಗಿ (ಲಕ್ಷ್ಮಿ)
ಅನಿಲ್ ಕುಮಾರ್ ಬಾಜ್ಪಾಯಿ (ಗಾಂಧಿ ನಗರ)
ಮದನ್ ಲಾಲ್ (ಕಸ್ತೂರಬಾ ನಗರ)
ವಿಜೇಂದ್ರ ಗಾರ್ಗ್ ವಿಜಯ್ (ರಾಜೇಂದ್ರ ನಗರ)
ಶಿವಚರಣ್ ಗೋಯಲ್ (ಮೋತಿ ನಗರ)
ಸಂಜೀವ್ ಝಾ (ಬರಾಧಿ)
ಕೈಲಾಶ್ ಗಾಹ್ಲೋಟ್ (ನಜಫ್ಗಢ್)
ಸರಿತಾ ಸಿಂಗ್ (ರೋಹ್ತಾಶ್ ನಗರ)
ಅಲ್ಕಾ ಲಂಬಾ (ಚಾಂದನಿ ಚೌಕ್)
ನರೇಶ್ ಯಾದವ್ (ಮೆಹ್ರಾಲಿ)
ಮನೋಜ್ ಕುಮಾರ್ (ಕೊಂಡಾಳಿ)
ರಾಜೇಶ್ ಗುಪ್ತಾ (ವಾಜಿರ್ ಪುರ್)
ರಾಜೇಶ್ ರಿಷಿ (ಜನಕ್ ಪುರಿ)
ಸುಖ್ಬಿರ್ ಸಿಂಗ್ ದಲಾಲ್ (ಮುಂಡ್ಕಾ)
ಜರ್ನೈಲ್ ಸಿಂಗ್ (ತಿಲಕ್ ನಗರ)
ಪ್ರವೀಣ್ ಕುಮಾರ್ (ಜಂಗ್ಪುರಾ)