ನವದೆಹಲಿ: ಭಾರತೀಯ ನೋಟುಗಳಲ್ಲಿ ಮಹಾತ್ಮ ಗಾಂಧೀಜಿಯವರ ಚಿತ್ರದ ಬದಲಿಗೆ ಸಮಾಜ ಸುಧಾರಕ ವೀರ್ ಸಾವರ್ಕರ್ ಅವರ ಚಿತ್ರ ಮುದ್ರಿಸುವಂತೆ ಕೋರಿ ಅಖಿಲ್ ಭಾರತ್ ಹಿಂದೂ ಮಹಾಸಭಾ (ABHM) ಕೇಂದ್ರ ಸರ್ಕಾರವನ್ನು ಕೋರಿದೆ.


COMMERCIAL BREAK
SCROLL TO CONTINUE READING

ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಸಾವರ್ಕರ್ ಮಹತ್ತರ ಪಾತ್ರವನ್ನು ವಹಿಸಿದ್ದಾರೆ. ಭಾರತೀಯ ನೋಟುಗಳಲ್ಲಿ ಅವರ ಭಾವಚಿತ್ರವನ್ನು ಮುದ್ರಿಸುವ ಮೂಲಕ ಅವರ ಹೋರಾಟವನ್ನು ಗೌರವಿಸಬೇಕು. ಜೊತೆಗೆ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ABHM ಮುಖ್ಯಸ್ಥ ಸ್ವಾಮಿ ಚಕ್ರಪಾಣಿ ಆಗ್ರಹಿಸಿದರು.



ವಿನಾಯಕ್ ದಾಮೋದರ್ ಸಾವರ್ಕರ್ ಮೊದಲ ಬಾರಿಗೆ ಹಿಂದೂತ್ವ ಎಂಬ ಪದವನ್ನು ಬಳಸಿಕೊಂಡಿದ್ದಾರೆ. 1923 ರಲ್ಲಿ ಅವರು ತಮ್ಮ ಪ್ರಸಿದ್ಧ ಪರಿಕಲ್ಪನಾ ಲೇಖನ 'ಹಿಂದೂತ್ವ: ಹೂ ಈಸ್ ಹಿಂದೂ?' ರಲ್ಲಿ ಈ ಪದವನ್ನು ಉಲ್ಲೇಖಿಸಲಾಗಿದೆ.


ವೀರ ಸಾವರ್ಕರ್ ಮಹಾರಾಷ್ಟ್ರದ ಭುಗರ್ ನಗರದಲ್ಲಿ ಮೇ 28, 1863 ರಂದು ಜನಿಸಿದರು. ಮುಂಬೈ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ ವೀರ್ ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟಗಾರ, ಸಾಮಾಜಿಕ ಸುಧಾರಕ, ವಕೀಲ, ರಾಜಕಾರಣಿ, ಕವಿ, ಬರಹಗಾರ, ಚಿಂತಕ ಎಂದು ಗುರುತಿಸಲ್ಪಟ್ಟಿದ್ದಾರೆ.