ನವದೆಹಲಿ: ಚುನಾವಣಾ ಪ್ರಚಾರದ ವೇಳೆ ಸೈನ್ಯದ ಬಗ್ಗೆ ಉಲ್ಲೇಖಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.


COMMERCIAL BREAK
SCROLL TO CONTINUE READING

ಇತ್ತೀಚಿಗೆ ಚುನಾವಣಾ ರ್ಯಾಲಿಗಳಲ್ಲಿ ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ಅವರು ಪ್ರಚಾರದ ಸಂದರ್ಭದಲ್ಲಿ ಸೈನ್ಯವನ್ನು ಉಲ್ಲೇಖಿಸಿದ್ದರು. ಈಗ ಈ ವಿಚಾರವಾಗಿ ಚುನಾವಣಾ ಆಯೋಗದ ಮೂಲಗಳು ಹೇಳುವಂತೆ ಅಂತಹ ಸಂಗತಿಗಳ ಕುರಿತಾಗಿ ಆಯೋಗ ಪರಿಶೀಲನೆ ನಡೆಸುತ್ತಿದ್ದು, ಶೀಘ್ರವೇ ಈ ವಿಚಾರವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿವೆ.ಲೋಕಸಭಾ ಚುನಾವಣೆ ಮುಗಿಯುವವರೆಗೆ ಕಾಯ್ದು ಕುಳಿತುಕೊಳ್ಳುವುದಿಲ್ಲ ತಕ್ಷಣವೇ ಇದಕ್ಕೆ ಸಂಬಂಧಿಸಿದಂತೆ ಕ್ರಮ ಜರುಗಿಸಲಾಗುವುದು ಎಂದು ಮೂಲಗಳು ಹೇಳಿವೆ.


ಏಪ್ರಿಲ್ 9 ರಂದು ಮಹಾರಾಷ್ಟ್ರದ ಚುನಾವಣಾ ರ್ಯಾಲಿಯೊಂದರಲ್ಲಿ ಪ್ರಧಾನಿ ಮೋದಿ ಮಾತನಾಡುತ್ತಾ "ಮೊದಲ ಬಾರಿಗೆ ಮತ ಹಾಕುವವರಲ್ಲಿ ನಾನು ವಿನಂತಿಸಿಕೊಳ್ಳುವುದಿಷ್ಟೇ ನಿಮ್ಮ ಮತವನ್ನು ಬಾಲಾಕೊಟ್ ನಲ್ಲಿ ವಾಯುದಾಳಿಯನ್ನು ನಡೆಸಿದ ಸೈನಿಕರಿಗೆ ಅರ್ಪಿಸಲು ಆಗುತ್ತೆ ? ನಿಮ್ಮ ಮೊದಲ ಮತವನ್ನು ಪುಲ್ವಾಮಾ ದಾಳಿಯಲ್ಲಿ  ಮೃತರಾದ ಸೈನಿಕರ ಹೆಸರಿನಲ್ಲಿ ಹಾಕಲು ಸಾಧ್ಯವಾಗುತ್ತದೆಯೇ ? ಎಂದು ಕೇಳಿಕೊಂಡಿದ್ದರು.


ಈ ವಿಚಾರವಾಗಿ ಏಪ್ರಿಲ್ 11 ರಂದು ಪ್ರಧಾನಿ ಮೋದಿಯವರು ನೀತಿ ಸಂಹಿತೆ ಉಲ್ಲಂಘಿಸಿರುವ ಕುರಿತಾಗಿ ಸ್ಥಳೀಯ ಚುನಾವಣಾ ಅಧಿಕಾರಿಗಳು ವರದಿಯಲ್ಲಿ ತಿಳಿಸಿದ್ದರು.