ನವದೆಹಲಿ: ಕೇರಳದ ಶಬರಿಮಲೆ ದೇವಾಲಯಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರು ಪ್ರವೇಶಿಸಬಹುದು ಎಂಬ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಂತರ ದೇವಾಲಯದ ಬಾಗಿಲು ಇಂದು ಮೂರನೇ ಬಾರಿಗೆ ತೆರೆಯುತ್ತಿದೆ. ಮತ್ತೊಂದೆಡೆ, ಇಂದು (ನವೆಂಬರ್ 16) ಭೂಮಾತಾ ಬ್ರಿಗೇಡ್ ಮುಖ್ಯಸ್ಥೆ, ತೃಪ್ತಿ ದೇಸಾಯಿ ಶಬರಿಮಲ ಅಯ್ಯಪ್ಪನ ದರ್ಶನಕ್ಕಾಗಿ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿದ್ದಾರೆ. ಆದರೆ ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರು ಏರ್ ಪೋರ್ಟ್ ನಿಂದ ಹೊರಗೆ ಬರಲು ಸಾಧ್ಯವಾಗಿಲ್ಲ.


COMMERCIAL BREAK
SCROLL TO CONTINUE READING


ವಿಮಾನ ನಿಲ್ದಾಣದ ಹೊರಗೆ ಪ್ರತಿಭಟನಾಕಾರರು (ಫೋಟೋ ANI)


ಒಂದೆಡೆ ಇಂದು ಬೆಳಿಗ್ಗೆ 4:40ಕ್ಕೆ ಪುಣೆಯಿಂದ ತನ್ನ ಬೆಂಬಲಿಗರೊಂದಿಗೆ ಆಗಮಿಸಿರುವ ತೃಪ್ತಿ ಅವರನ್ನು ಯಾವುದೇ ಕಾರಣಕ್ಕೂ ವಿಮಾನ ನಿಲ್ದಾಣದಿಂದ ಹೊರಗೆ ಹೋಗಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.


ಮತ್ತೊಂದೆಡೆ, "ಶಬರಿಮಲೆ ದೇಗುಲಕ್ಕೆ ಭೇಟಿ ನೀಡಿ, ದರ್ಶನ ಪಡೆಯದೆ ನಾವು ಮಹಾರಾಷ್ಟ್ರಕ್ಕೆ ಹಿಂದಿರುಗುವುದಿಲ್ಲ. ಸರ್ಕಾರ ನಮಗೆ ರಕ್ಷಣೆ ಒದಗಿಸುತ್ತದೆ ಎಂಬ ವಿಶ್ವಾಸವಿದೆ. ನಮಗೆ ರಕ್ಷಣೆ ಒದಗಿಸುವುದು ರಾಜ್ಯ ಸರ್ಕಾರ ಮತ್ತು ಪೊಲೀಸರ ಜವಾಬ್ದಾರಿ. ಮತ್ತು ಸುಪ್ರೀಂಕೋರ್ಟ್​ ಆದೇಶದಂತೆ ಎಲ್ಲ ವಯೋಮಾನದ ಮಹಿಳೆಯರು ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು," ಎಂದು ತೃಪ್ತಿ ದೇಸಾಯಿ ಹೇಳಿದ್ದಾರೆ.


ಏತನ್ಮಧ್ಯೆ, ವಿಮಾನ ನಿಲ್ದಾಣದ ಹೊರಗೆ ಬಿಜೆಪಿ ಮುಖಂಡ ಎಂ.ಎನ್ ಗೋಪಿಯವರು ದೇಸಾಯಿ ಅವರ ನಿರ್ಧಾರವನ್ನು ವಿರೋಧಿಸಿದ್ದಾರೆ. 'ಪೋಪ್ ಅಥವಾ ಇತರ ಸರ್ಕಾರಿ ವಾಹನಗಳಲ್ಲಿ ವಿಮಾನ ನಿಲ್ದಾಣದಿಂದ ಹೊರಬರಲು ನಾವು ತೃಪ್ತಿ ದೇಸಾಯಿಯನ್ನು ಅನುಮತಿಸುವುದಿಲ್ಲ. ವಿಮಾನ ನಿಲ್ದಾಣದಲ್ಲಿನ ಟ್ಯಾಕ್ಸಿ ಕೂಡ ಅವರನ್ನು ಹತ್ತಿಸುತ್ತಿಲ್ಲ. ಅವರು ಹೋಗಲು ಬಯಸಿದರೆ, ಅವರು ಖಾಸಗಿ ವಾಹನದಿಂದ ಹೋಗಬಹುದು' ಎಂದಿದ್ದಾರೆ.



ಬಿಜೆಪಿ ನಾಯಕ (ಫೋಟೋ ANI)


ಶನಿ ಶಿಂಗನಾಪುರ ದೇವಸ್ಥಾನ, ಹಾಜಿ ಅಲಿ ದರ್ಗಾ, ಮಹಾಲಕ್ಷ್ಮಿ ದೇವಸ್ಥಾನ ಮತ್ತು ಟ್ರೈಂಬಕೇಶ್ವರ ಶಿವ ಮಂದಿರ ಸೇರಿದಂತೆ ಅನೇಕ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರನ್ನು ಪ್ರವೇಶಿಸಲು ಅಭಿಯಾನವನ್ನು ನಡೆಸಿದ ದೇಸಾಯಿ ಅವರು ಕೇರಳದ ಮುಖ್ಯಮಂತ್ರಿ ಪಿನಾರೈ ವಿಜಯನಾನನಿಗೆ ಇ-ಮೇಲ್ ಬರೆಯುವುದರ ಮೂಲಕ ಭದ್ರತೆಯನ್ನು ಬಯಸಿದ್ದರು. ದೇವಸ್ಥಾನದ ದಾಳಿ ಭಯವಾಗಿತ್ತು. ಅವರು ಹೇಳಿದರು, "ನಾವು ಶಬರಿಮಲೆ ದೇವಸ್ಥಾನವನ್ನು ನೋಡದೆ ಮಹಾರಾಷ್ಟ್ರಕ್ಕೆ ಹಿಂತಿರುಗುವುದಿಲ್ಲ, ಅದು ನಮಗೆ ಭದ್ರತೆಯನ್ನು ಒದಗಿಸುತ್ತಿದೆ ಎಂದು ನಾವು ನಂಬುತ್ತೇವೆ."


ಶನಿ ಶಿಂಗನಾಪುರ ದೇವಸ್ಥಾನ, ಹಾಜಿ ಅಲಿ ದರ್ಗಾ, ಮಹಾಲಕ್ಷ್ಮಿ ದೇವಸ್ಥಾನ ಮತ್ತು ಟ್ರೈಂಬಕೇಶ್ವರ ಶಿವ ಮಂದಿರ ಸೇರಿದಂತೆ ಅನೇಕ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರನ್ನು ಪ್ರವೇಶಿಸಲು ಅಭಿಯಾನವನ್ನು ನಡೆಸಿದ ದೇಸಾಯಿ ಅವರು ಕೇರಳದ ಮುಖ್ಯಮಂತ್ರಿ ಪಿನಾರೈ ವಿಜಯನ್ ಅವರಿಗೆ ಇ-ಮೇಲ್ ಬರೆಯುವುದರ ಮೂಲಕ ಭದ್ರತೆಯನ್ನು ಕೋರಿದ್ದರು. ದೇವಸ್ಥಾನಕ್ಕೆ ತೆರಳುವ ವೇಳೆ ದಾಳಿಯ ಭಯವಿರುವ ಬಗ್ಗೆ ಅವರು ಮಾಹಿತಿ ನೀಡಿದ್ದರು.



ಫೋಟೋ ANI


ಅದೇ ಸಮಯದಲ್ಲಿ, ಕೊಚ್ಚಿ ವಿಮಾನ ನಿಲ್ದಾಣಕ್ಕೆ ತಲುಪುವ ಮೊದಲು, "ಪ್ರತಿಭಟನಾಕಾರರು ಹಿಂಸಾಚಾರಕ್ಕೆ ಒಳಗಾಗಬಾರದು. ನಾವು ಕೊಚ್ಚಿಯಲ್ಲಿ ಬಂದಾಗ, ನಮಗೆ ಒದಗಿಸಿದ ಸುರಕ್ಷತೆಯನ್ನು ನಾವು ನಿರ್ಣಯಿಸುತ್ತೇವೆ" ಎಂದು ತೃಪ್ತಿ ದೇಸಾಯಿ ವಿಮಾನದಲ್ಲಿ ಹೇಳಿದ್ದರು.



ಫೋಟೋ ANI


ರಾಜ್ಯ ಸರ್ಕಾರವು ನಮಗೆ ಅಗತ್ಯ ಭದ್ರತೆಯನ್ನು ಒದಗಿಸದಿದ್ದರೂ ನಾವು ಶಬರಿಮಲೆ ದೇವಸ್ಥಾನಕ್ಕೆ ಹೋಗುತ್ತೇವೆ ಎಂದು ತಿಳಿಸಿದ ಅವರು, ಅವರಿಗೆ ಹಲವಾರು ಬಾರಿ ದಾಳಿ ಬೆದರಿಕೆಗಳನ್ನು ಸ್ವೀಕರಿಸಿರುವುದಾಗಿ ಮಾಹಿತಿ ನೀಡಿದರು.


ಸರ್ವಪಕ್ಷ ಸಭೆ ವಿಫ‌ಲ:
ಸುಪ್ರೀಂಕೋರ್ಟ್‌ ಸೆ.28ರಂದು ನೀಡಿದ್ದ ತೀರ್ಪಿನ ಬಳಿಕ ಉಂಟಾಗಿರುವ ಬೆಳವಣಿಗೆ ಗಳ ಬಗ್ಗೆ ಚರ್ಚೆ ನಡೆಸಲು ಗುರುವಾರ ತಿರುವ ನಂತಪುರದಲ್ಲಿ ಸರ್ವ ಪಕ್ಷಗಳ ಸಭೆ ಕರೆಯ ಲಾಗಿತ್ತು. ಮೂರು ತಾಸುಗಳ ಕಾಲ ನಡೆದ ಸಭೆಯಲ್ಲಿ ಸಮಸ್ಯೆಗೆ ಯಾವುದೇ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಜ.22ರ ವರೆಗೆ ಸುಪ್ರೀಂ ಕೋರ್ಟ್‌ ಆದೇಶ ಅನುಷ್ಠಾನ ಸಾಧ್ಯವಿಲ್ಲ ವೆಂದು ಮನವಿ ಮಾಡುವಂತೆ ಕಾಂಗ್ರೆಸ್‌, ಬಿಜೆಪಿ ಒತ್ತಾಯಿಸಿದವು. ಅದಕ್ಕೆ ಒಪ್ಪದ ಮುಖ್ಯಮಂತ್ರಿ, ತೀರ್ಪಿಗೆ ಸುಪ್ರೀಂ ಕೋರ್ಟ್‌ ತಡೆ ನೀಡಿಲ್ಲ. ಹೀಗಾಗಿ 10-50ರ ವಯೋ ಮಿತಿಯ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ನೀಡಲೇಬೇಕಾಗಿದೆ ಎಂದರು. ಅದಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಆಕ್ಷೇಪಿಸಿದವು. ಸರಕಾರ ಹಠಮಾರಿ ಧೋರಣೆಯಿಂದ ಕೂಡಿದೆ. ಸಲಹೆಗಳನ್ನು ಸ್ವೀಕರಿಸಲು ಸಿದ್ಧವಿಲ್ಲ ಎಂದು ಬಿಜೆಪಿ ಮತ್ತು ಕಾಂಗ್ರೆಸ್‌ ಆರೋಪಿಸಿ ಸಭೆ ಬಹಿಷ್ಕರಿಸಿ ಹೊರ ನಡೆದವು.


ಈ ನಡುವೆ ಮಹಿಳೆ ಯರ ದೇಗುಲ ಭೇಟಿಗೆಂದು ಪ್ರತ್ಯೇಕ ದಿನ ಗಳನ್ನು ನಿಗದಿಪಡಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ಸಿಎಂ ಹೇಳಿದ್ದಾರೆ. ಪಂದಳಂ ರಾಜಮನೆತನ ಕೂಡ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮಹಿಳೆಯರ ಪ್ರವೇಶಕ್ಕೆ ತತ್ಕಾಲಕ್ಕೆ ತಡೆ ಕೋರುವಂತೆ ಮನವಿ ಮಾಡಿಕೊಳ್ಳಬಹುದು ಎಂದು ಪಿಣರಾಯಿ ಸುಳಿವು ನೀಡಿದ್ದಾರೆ.