ನೋಕಿಯಾ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸಲು ಮತ್ತು ಮಾರಾಟ ಮಾಡಲು ಪರವಾನಗಿ ಹೊಂದಿರುವ ಎಚ್‌ಎಂಡಿ ಗ್ಲೋಬಲ್ ಅಧಿಕೃತವಾಗಿ ನೋಕಿಯಾ(Nokia) 2.3 ಅನ್ನು ಬಿಡುಗಡೆ ಮಾಡಿದೆ. ಈಜಿಪ್ಟ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಜೆಟ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಾಗಿದೆ.  ಇದರ ಬೆಲೆ € 109.  ಭಾರತದಲ್ಲಿ ನೋಕಿಯಾ 2.3 ಬೆಲೆಯನ್ನು ಅಧಿಕೃತ ನೋಕಿಯಾ ಇಂಡಿಯಾ ವೆಬ್‌ಸೈಟ್‌ನಲ್ಲಿ 5,999 ರೂ. ಎಂದು ತಿಳಿಸಿದೆ.


COMMERCIAL BREAK
SCROLL TO CONTINUE READING

ಫೋನ್ ಸಯಾನ್ ಗ್ರೀನ್, ಸ್ಯಾಂಡ್ ಮತ್ತು ಚಾರ್ಕೋಲ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿರುತ್ತದೆ. ನೋಕಿಯಾ 2.3 ಮೂರು ವರ್ಷಗಳವರೆಗೆ ಮಾಸಿಕ ಭದ್ರತಾ ನವೀಕರಣ ಮತ್ತು ಎರಡು ವರ್ಷಗಳ ಓಎಸ್ ನವೀಕರಣಗಳನ್ನು ನೀಡುತ್ತದೆ.  6.2 ಇಂಚಿನ ಈ ಸ್ಮಾರ್ಟ್ಫೋನ್, 720p ಡಿಸ್ಪ್ಲೇಯನ್ನು ಹೊಂದಿದೆ ಮತ್ತು ಗೂಗಲ್ ಅಸಿಸ್ಟೆಂಟ್ಗಾಗಿ ಮೀಸಲಾದ ಬಟನ್ ಹೊಂದಿದೆ. ಹೆಚ್ಚುವರಿ ಹಿಡಿತಕ್ಕಾಗಿ ಫೋನ್‌ನ ಹಿಂಭಾಗವು 3D ನ್ಯಾನೊ-ಟೆಕ್ಸ್ಚರ್ಡ್ ಕವರ್ ಅನ್ನು ರಿಬ್ಬಡ್ ಮಾದರಿಯೊಂದಿಗೆ ಹೊಂದಿದೆ ಎಂದು ಕಂಪನಿ ತಿಳಿಸಿದೆ.


"ಪ್ರಪಂಚದಾದ್ಯಂತದ ಗ್ರಾಹಕರು ನೋಕಿಯಾ 2 ಉತ್ಪನ್ನಗಳನ್ನು ಮೆಚ್ಚಿದ್ದಾರೆ ಎಂದು ತಿಳಿಸಿದ ಎಚ್‌ಎಂಡಿ ಗ್ಲೋಬಲ್ ಮುಖ್ಯ ಉತ್ಪನ್ನ ಅಧಿಕಾರಿ ಜುಹೊ ಸರ್ವಿಕಾಸ್,  ನೋಕಿಯಾ 2.3 ನಿಮಗೆ ಹೊಸ ಅನುಭವವನ್ನು ನೀಡುವ ಭರವಸೆಯಲ್ಲಿ ಒಂದು ಹೆಜ್ಜೆ ಮುಂದಿದೆ - ಗ್ರಾಹಕರಿಗೆ ಎರಡು ವರ್ಷಗಳ ಓಎಸ್ ನವೀಕರಣ ಮತ್ತು ಮೂರು ವರ್ಷಗಳ ಮಾಸಿಕ ಭದ್ರತಾ ನವೀಕರಣಗಳ ಸೌಲಭ್ಯವನ್ನು ನೀಡುತ್ತದೆ. ಜೊತೆಗೆ ಈ ಫೋನ್ ಕೈಗೆಟುಕುವ ಬೆಲೆಯಲ್ಲಿ ಸಿಗಲಿದೆ ಎಂಬುದು ಇದರ ಬಹುಮುಖ್ಯ ಲಕ್ಷಣ. ಅಷ್ಟೇ ಅಲ್ಲ ಈ ಪೋನ್ ಅನ್ನು ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ ಬ್ಯಾಟರಿ ಎರಡು ದಿನಗಳವರೆಗೆ(ಸ್ಟಾಂಡ್ ಬೈ) ಬಾಳಕೆ ಬರಲಿದೆ" ಎಂದು ಹೇಳಿದರು.


ನೋಕಿಯಾ 2.3 ಮೀಡಿಯಾ ಟೆಕ್ ಹೆಲಿಯೊ A 22 ಚಿಪ್‌ಸೆಟ್‌ನೊಂದಿಗೆ 2 GB ಮೆಮೊರಿ ಮತ್ತು 32 GB ಹೆಚ್ಚುವರಿ ಸಂಗ್ರಹವನ್ನು ಹೊಂದಿದೆ. ಇದು ಡ್ಯುಯಲ್ ಸಿಮ್, ವೈ-ಫೈ 802.11n, ಬ್ಲೂಟೂತ್ 5.0, ಮೈಕ್ರೊಯುಎಸ್ಬಿ, ಎಫ್ಎಂ ರೇಡಿಯೋ ಮತ್ತು ಹೆಡ್‌ಫೋನ್ ಜ್ಯಾಕ್ ಅನ್ನು ಒಳಗೊಂಡಿದೆ.  ಕ್ಯಾಮರಾ ಬಗ್ಗೆ ಹೇಳುವುದಾದರೆ, ಫೋನ್ 13MP f2.2 ಮುಖ್ಯ ಕ್ಯಾಮೆರಾ ಮತ್ತು 2MP ಡ್ಯುಯಲ್ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ. ಮುಂಭಾಗದಲ್ಲಿ, ಇದು 5 MP ಎಫ್ 2.4 ಕ್ಯಾಮೆರಾವನ್ನು ಹೊಂದಿದ್ದು ಅದು ಫೇಸ್ ಅನ್ಲಾಕ್ ಅನ್ನು ಸಹ ಬೆಂಬಲಿಸುತ್ತದೆ ಎಂದು ಕಂಪನಿ ಮಾಹಿತಿ ನೀಡಿದೆ.


ನೋಕಿಯಾ 2.3 4000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ, ಇದು 2 ದಿನಗಳ ಬ್ಯಾಟರಿ ಅವಧಿಯನ್ನು ಒದಗಿಸುತ್ತದೆ ಎಂದು ನೋಕಿಯಾ ಹೇಳಿಕೊಂಡಿದೆ. ಆದಾಗ್ಯೂ, ಇದು ವೇಗವಾಗಿ ಚಾರ್ಜಿಂಗ್ ಬೆಂಬಲದೊಂದಿಗೆ ಬರುವುದಿಲ್ಲ. ಅಲ್ಲದೆ, ಆಂಡ್ರಾಯ್ಡ್ 10 ರ ಬದಲು ಆಂಡ್ರಾಯ್ಡ್ 9 ರೊಂದಿಗೆ ಫೋನ್ ರವಾನೆಯಾಗುತ್ತದೆ ಮತ್ತು ಅದು ಯಾವಾಗ ನವೀಕರಣೆಯಾಗುತ್ತದೆ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.