ಸುಮಾರು ದಶಕಗಳ ನಂತರ ಭಾರತದಲ್ಲಿ ನಡೆಯಲಿದೆ 71ನೇ ಆವೃತ್ತಿಯ ವಿಶ್ವ ಸುಂದರಿ ಸ್ಪರ್ಧೆ
Miss world in india : ಸುಮಾರು ವರ್ಷಗಳ ನಂತರ ಭಾರತದಲ್ಲಿ ವಿಶ್ವ ಸುಂದರಿ ಸ್ಪರ್ಧೆ ನಡೆಯುತ್ತಿದೆ. ಇದು 71ನೇ ಆವೃತ್ತಿಯ ಸ್ಪರ್ಧೆಯಾಗಿದ್ದು ಭಾರತದಲ್ಲಿ ನಡೆಯಲಿದೆ ಎಂದು ಆಯೋಜಕರು ಶುಕ್ರವಾರ ತಿಳಿಸಿದ್ದಾರೆ.
71st edition of Miss World in india : 71ನೇ ಆವೃತ್ತಿಯ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆ ಭಾರತದಲ್ಲಿ ನಡೆಯಲಿದ್ದು, ಫೆಬ್ರವರಿ 18 ರಿಂದ ಮಾರ್ಚ್ 9 ರವರೆಗೆ ನಡೆಯಲಿದೆ ಎಂದು ಆಯೋಜಕರು ಶುಕ್ರವಾರ ತಿಳಿಸಿದ್ದಾರೆ. 1996ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯನ್ನು ಭಾರತವು ಕೊನೆಯದಾಗಿ ಆಯೋಜಿಸಿತ್ತು ಇದಾದ ಸುಮಾರು ವರ್ಷಗಳ ನಂತರ ಈ ಸ್ಪರ್ಧೆ ಭಾರತದಲ್ಲಿ ಏರ್ಪಡುತ್ತಿದೆ.
ಈ ಸ್ಪರ್ಧೆಯು ನವದೆಹಲಿಯ ಭಾರತ್ ಮಂಟಪ ಸೇರಿದಂತೆ ವಿವಿಧ ಸ್ಥಳಗಳಲ್ಲಿ ನಡೆಯಲಿದೆ ಮತ್ತು ವಿವಿಧ ದೇಶಗಳ 120 ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.ಇಂದು ನಡೆದ ಸುದ್ದಿಘೋಷ್ಠಿಯಲ್ಲಿ ಪ್ರಸ್ತುತ ವಿಶ್ವ ಸುಂದರಿ ಪೋಲೆಂಡ್‌ನ ಕರೋಲಿನಾ ಬಿಲಾವ್ಸ್ಕಾ, ಮಾಜಿ ವಿಜೇತರಾದ ಟೋನಿ ಆನ್ ಸಿಂಗ್ (ಜಮೈಕಾ), ವನೆಸ್ಸಾ ಪೊನ್ಸ್ ಡಿ ಲಿಯಾನ್ (ಮೆಕ್ಸಿಕೊ), ಮಾನುಷಿ ಛಿಲ್ಲರ್ (ಭಾರತ) ಮತ್ತು ಸ್ಟೆಫನಿ ಡೆಲ್ ತಿಳಿಸಿದರು.
ಇದನ್ನು ಓದಿ : ಮಾರ್ಚ್ 28ಕ್ಕೆ "ಯುವ" ರಿಲೀಸ್ : ಹೊಸ ಅಪಡೇಟ್ ಕೊಟ್ಟ "ಯುವರಾಜಕುಮಾರ್
ಈ ಸ್ಪರ್ಧೆಯ ಉದ್ಘಾಟನಾ ಸಮಾರಂಭ ಫೆಬ್ರವರಿ 20 ರಂದು ನವದೆಹಲಿಯಲ್ಲಿ ಭಾರತ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ನಡೆಯಲಿದೆ ಮತ್ತು "ಇಂಡಿಯಾ ವೆಲ್ಕಮ್ಸ್ ದಿ ವರ್ಲ್ಡ್ ಗಾಲಾ"ದೊಂದಿಗೆ ಸ್ಪರ್ಧೆ ಪ್ರಾರಂಭವಾಗುತ್ತದೆ. ಈ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯು ಮಾರ್ಚ್ 9 ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯುವ ಮೂಲಕ ಮುಕ್ತಾಯಗೊಳ್ಳಲಿದೆ.
೭೧ನೇ ಆವೃತ್ತಿಯ ಈ ಈ ಸ್ಪರ್ಧೆಯು ಭಾರತದಲ್ಲಿ ಹಮ್ಮಿಕೊಳ್ಳುವುದು ತುಂಬಾ ಅರ್ಥಗರ್ಭಿತವಾಗಿದೆ ಮತ್ತು ಈ ಆವೃತ್ತಿಗಾಗಿ ನಾನು ಉತ್ತಮ ತಂಡವನ್ನು ಸಿದ್ದಪಡಿಸಿದ್ದೇನೆ ಎಂದು ವಿಶ್ವ ಸುಂದರಿ ಸಂಸ್ಥೆಯ ಅಧ್ಯಕ್ಷೆ ಮತ್ತು ಸಿಇಒ ಜೂಲಿಯಾ ಮೊರ್ಲಿ ತಿಳಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.