ನವದೆಹಲಿ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಮತ್ತು ಬಾಲಿವುಡ್ ನಟ ಅನುಪಮ್ ಖೇರ್ ರವರ ಟ್ವಿಟ್ಟರ್  ಖಾತೆಯನ್ನು ಮಂಗಳವಾರದಂದು ಹ್ಯಾಕ್ ಮಾಡಲಾಗಿದೆ. ಪಾಕಿಸ್ತಾನ ಮೂಲದ ಆಯಿಲ್ಡಿಜ್ ಟಿಮ್ನಿಂದ ಹ್ಯಾಕ್ ಮಾಡಲ್ಪಟ್ಟಿದೆ ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಈ ಕುರಿತಾಗಿ ಪ್ರತಿಕ್ರಯಿಸಿರುವ 62 ವರ್ಷದ ನಟ  "ನನ್ನ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ, ಈ ಕುರಿತಾಗಿ  ಭಾರತದಲ್ಲಿನ ಸ್ನೇಹಿತರಿಂದ ನನಗೆ ಹಲವು ಕರೆಗಳು ಬಂದಿವೆ. ಸದ್ಯ ನಾನು LA ನಲ್ಲಿದ್ದೇನೆ. ಸ್ವಪನ್ ದಾಸ್ ಗುಪ್ತಾ ಅವರ ಖಾತೆಯಿಂದ ನನಗೆ ಹ್ಯಾಕ್ ಆದುದರ ಬಗ್ಗೆ ಮಾಹಿತಿ ಬಂದಿದೆ ಈಗಾಗಲೇ ನಾನು ಟ್ವಿಟ್ಟರ್ ಜೊತೆಗೆ ಮಾತನಾಡಿದ್ದೇನೆ ಎಂದು ಅನುಪಮ್ ಖೇರ್ ತಿಳಿಸಿದ್ದಾರೆ.