Karnataka Election Results 2023:  ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕ ಜಯ ಅನೇಕ ಹಿರಿಯ ನಾಯಕರ ದೃಷ್ಟಿಕೋನವನ್ನೇ ಬದಲಾಯಿಸಿದೆ. ಕಾಂಗ್ರೆಸ್ ಒಂದು ಮುಳುಗುವ ಹಡಗು ಎಂದೇ ಪರಿಗಣಿಸಿದವರು ಇದೀಗ ಕಾಂಗ್ರೆಸ್ ಕುರಿತು ಹೊಗಳಿಕೆಯ ಮಾತುಗಳನ್ನು ಆಡುತ್ತಿದ್ದಾರೆ.  ಈ ಹಿನ್ನೆಲೆ ಇದೀಗ ಕಾಂಗ್ರೆಸ್ ಪಕ್ಷವನ್ನು ಈ ಮೊದಲು ಟೀಕಿಸುತ್ತಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಕಾಂಗ್ರೆಸ್ ಬಗ್ಗೆ ಇರುವ ತಮ್ಮ ನಿಲುವನ್ನು ಬದಲಾಯಿಸಿದ್ದಾರೆ. ಕರ್ನಾಟಕ ಚುನಾವಣೆ ಫಲಿತಾಂಶದ ಬಳಿಕ ಸಿಎಂ ಮಮತಾ ಅವರು, ಎಲ್ಲಿ ಕಾಂಗ್ರೆಸ್ ಪ್ರಬಲವಾಗಿದೆಯೋ ಅದನ್ನು ಅಲ್ಲಿ ಬೆಂಬಳಿಸಲಾಗುವುದು ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

2024ರ ಲೋಕಸಭೆ ಚುನಾವಣೆಗಾಗಿ ತೃಣಮೂಲ ಕಾಂಗ್ರೆಸ್‌ನ ಕಾರ್ಯತಂತ್ರದ ಕುರಿತು ಮಾತನಾಡಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಎಲ್ಲೆಲ್ಲಿ ಪ್ರಬಲವಾಗಿದೆಯೋ ಅಲ್ಲಲ್ಲಿ ಅದನ್ನು ಬೆಂಬಳಿಸಲಾಗುವುದು ಎಂದು ಹೇಳಿದ್ದಾರೆ. ಸೀಟು ಹಂಚಿಕೆ ಸೂತ್ರದ ಕುರಿತು ಬ್ಯಾನರ್ಜಿ ಅವರು ಪ್ರಬಲ ಪ್ರಾದೇಶಿಕ ಪಕ್ಷಗಳಿಗೆ ಆದ್ಯತೆ ನೀಡಬೇಕು ಹೇಳಿದ್ದಾರೆ.


ಇದನ್ನೂ ಓದಿ-Maharashtra Politics: ಶರದ್ ಪವಾರ್ ಮನೆಯಲ್ಲಿ ಎಂವಿಎ ಸಭೆ, 2024ರ ಸ್ಥಾನ ಹಂಚಿಕೆ ಕುರಿತು ಚರ್ಚೆ


ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಬಿಜೆಪಿ ವಿರುದ್ಧ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಹೋರಾಟ ನಡೆಸಲ್ಲ ಮತ್ತು ಏಕಾಂಗಿಯಾಗಿ ಹೋರಾಟ ನಡೆಸಲಿದೆ ಎಂದು ಮಮತಾ ಈ ಮೊದಲು ಹೇಳಿದ್ದರು.   ಆದರೆ ಇದೀಗ ಯೂಟರ್ನ್ ಹೊಡೆದಿರುವ ಮಮತಾ ಅವರ, ಕಾಂಗ್ರೆಸ್ ಬಗೆಗಿನ  ಧೋರಣೆ ಬದಲಾಗಿದೆ. ಕಾಂಗ್ರೆಸ್ ಎಲ್ಲಿ ಪ್ರಬಲವಾಗಿದೆಯೋ ಅಲ್ಲಿ ಎಲ್ಲಾ ವಿರೋಧ ಪಕ್ಷಗಳು ಕಾಂಗ್ರೆಸ್ ಅನ್ನು ಬೆಂಬಲಿಸಬೇಕು ಎಂದು ಅವರು ಹೇಳಿದ್ದಾರೆ. ಆದರೆ, ಇದು ಕೇವಲ ಏಕ ಪಕ್ಷೀಯವಾಗಿರಬಾರದು, ಕಾಂಗ್ರೆಸ್ ಕೂಡ ನಮ್ಮ ವಿರುದ್ಧ ಹೋರಾಟದ ಧೋರಣೆಯನ್ನು ಬಿಡಬೇಕು ಎಂದು ಮಮತಾ ಹೇಳಿದ್ದಾರೆ. 


ಇದನ್ನೂ ಓದಿ-Pak Politics: ರಾಜಕೀಯ ಬೆಂಕಿಯಲ್ಲಿ ಪಾಕ್ ಕೊತಕೊತ, ಇಮ್ರಾನ್ ಗಲ್ಲಿಗೆ ತೀವ್ರ ಆಗ್ರಹ, ಲಾಹೋರ್ ನಲ್ಲಿ ಸೆಕ್ಷನ 144 ಜಾರಿ


ಎಲ್ಲೆಲ್ಲಿ ಯಾವ ಯಾವ ಪಕ್ಷಗಳು ಪಕ್ಷಗಳು ಬಲಿಷ್ಠವಾಗಿವೆಯೋ ಅಲ್ಲಲ್ಲಿ ಅವು ಬಿಜೆಪಿ ವಿರುದ್ಧ ಏಕಾಂಗಿಯಾಗಿ ಹೋರಾಟ ನಡೆಸಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹೇಳಿದ್ದಾರೆ. ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಪಕ್ಷ ಮತ್ತು ದೆಹಲಿಯಲ್ಲಿ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವು ಬಿಜೆಪಿ ವಿರುದ್ಧ ಏಕಾಂಗಿಯಾಗಿ ಹೋರಾಡಬೇಕು. ಕರ್ನಾಟಕದ ವಿಜಯದ ನಂತರ ಕಾಂಗ್ರೆಸ್ ಪ್ರತಿಪಕ್ಷದ ದೊಡ್ಡ ನಾಯಕರನ್ನು ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನಿಸಿರುವ ಸಮಯದಲ್ಲಿ ಮಮತಾ ಬ್ಯಾನರ್ಜಿಯವರ ಈ ಹೇಳಿಕೆ ಬಂದಿರುವುದು ಇಲ್ಲಿ ಗಮನಾರ್ಹ. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ