ಈಕೆ ಆರೋಗ್ಯ ವೃದ್ಧಿಗೆಂದು ಸೇವಿಸಿದ ಪಾನೀಯವೇ ಪ್ರಾಣಕ್ಕೆ ಕುತ್ತಾಯಿತು
ಪುಣೆಯ ಬಾನರ್ ಪ್ರದೇಶದಲ್ಲಿ ಗೌರಿ ಷಾ ಮುಂಜಾನೆ ವಾಕ್ ನಿಂದ ಬಂದ ಬಳಿಕ ಸೋರೆಕಾಯಿ ಜ್ಯೂಸ್ ಸೇವೆಸಿದರು. ಜ್ಯೂಸ್ ಸೇವಿಸಿದ ಬಳಿಕ ಹೊಟ್ಟೆ ನೋವು ಆರಂಭವಾಗಿದೆ, ನಂತರ ವಾಂತಿಯಾಗಿದೆ.
ಪುಣೆ: ಈ ದಿನಗಳಲ್ಲಿ ಜನರ ಮಧ್ಯೆ ಆರೋಗ್ಯಕರವಾಗಿರಲು ಹಾಗೂ ಫಿಟ್ ಆಗಿರಲು ಸ್ಪರ್ಧೆ ಇದೆ. ತಮ್ಮ ಆರೋಗ್ಯ ವೃದ್ಧಿಗಾಗಿ ಹಲವಾರು ಪ್ರಯೋಗಗಳಿಗೆ ತಮ್ಮನ್ನು ತಾವು ಒಡ್ಡಿಕೊಳ್ಳುತ್ತಾರೆ. ಅನೇಕ ಬಾರಿ ಜನರು ಫಿಟ್ ಆಗಿರಲು ಹಲವು ಆಹಾರ ಪದ್ಧತಿಗಳನ್ನು ಮೈಗೂಡಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಮನೆ ಪರಿಹಾರಗಳನ್ನು ಬಳಸುತ್ತಾರೆ. ಮಹಾರಾಷ್ಟ್ರದಲ್ಲಿ ಓರ್ವ ಮಹಿಳೆ ತನ್ನ ಆರೋಗ್ಯ ವೃದ್ಧಿಗಾಗಿ ಸೇವಿಸಿದ ಈ ಪಾನೀಯ ಆಕೆಯ ಪ್ರಾಣವನ್ನೇ ತೆಗೆದುಕೊಂಡಿದೆ. ಪುಣೆಯಲ್ಲಿ ಸೋರೆಕಾಯಿಯ ಜ್ಯೂಸ್ ಸೇವಿಸಿ 41 ವರ್ಷದ ಮಹಿಳೆ ಮೃತಪಟ್ಟಿದ್ದಾರೆ.
ಪುಣೆಯ ಬಾನರ್ ಪ್ರದೇಶದಲ್ಲಿ ಗೌರಿ ಷಾ ಮುಂಜಾನೆ ವಾಕ್ ನಿಂದ ಬಂದ ಬಳಿಕ ಸೋರೆಕಾಯಿ ಜ್ಯೂಸ್ ಸೇವೆಸಿದರು. ಜ್ಯೂಸ್ ಸೇವಿಸಿದ ಬಳಿಕ ಹೊಟ್ಟೆ ನೋವು ಆರಂಭವಾಗಿದೆ, ನಂತರ ವಾಂತಿಯಾಗಿದೆ. ಆನಂತರದಲ್ಲಿ ಆಕೆಯನ್ನು ಒಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಜೂನ್ 12 ರಂದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ ನಂತರ, ವೈದ್ಯರು ವೈದ್ಯರು ಆಕೆಗೆ ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜೂನ್ 16 ರಂದು ಆ ಮಹಿಳೆ ಮೃತಪಟ್ಟರು.
ವಿಷಕಾರಿ ರಸ ಸೇವನೆಯಿಂದ ಮರಣ- ವೈದ್ಯರು
ಕಹಿ ಸೋರೆಕಾಯಿ ರಸ ಸೇವನೆಯಿಂದ ಮಹಿಳೆಯ ಸಾವು ಸಂಭವಿಸಿದೆ ಎಂದು ಮಹಿಳೆಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಹೇಳಿದ್ದಾರೆ. ಕಹಿ ಸೋರೆ ರಸವು ಕಹಿಯಾಗಿರುತ್ತದೆ, ಅದು ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ. ಜೂನ್ 12ರಂದು ಮಹಿಳೆ ಸೋರೆಕಾಯಿ ರಸ ಸೇವಿಸಿದಾಗ, ಅದರಲ್ಲಿ ಕ್ಯಾರೆಟ್ ರಸ ಮಿಶ್ರಣವಾಗಿತ್ತು. ಹಾಗಾಗಿ ಮಹಿಳೆಗೆ ರುಚಿ ತಿಳಿದಿರಲಿಲ್ಲ. ಕಹಿಯಾದ ಸೋರೆಕಾಯಿ ರಸ ಸೇವನೆಯಿಂದ ಆಕೆಗೆ ಹೊಟ್ಟೆ ನೋವುಂಟಾಗಿದೆ ಮತ್ತು ವಿಷವು ಇಡೀ ದೇಹದಲ್ಲಿ ಹರಡಿತು, ಹಾಗಾಗಿ ಅವರು ಮೃತಪಟ್ಟರು ಎಂದು ವೈದ್ಯರು ಹೇಳಿದರು.
ಆಯುರ್ವೇದದಲ್ಲಿ ಸೋರೆಕಾಯಿ ರಸವನ್ನು ಆರೋಗ್ಯಕರ ಎಂದು ಪರಿಗಣಿಸಲಾಗಿದೆ. ಹೆಚ್ಚಿನ ಜನರು ಸೋರೆಕಾಯಿಯನ್ನು ಅಡಿಗೆಗೆ ಬಳಸುತ್ತಾರೆ. ಆದರೆ ಅದರ ರಸವನ್ನು ವಿವಿಧ ವಿಧಾನಗಳಲ್ಲಿ ಬಳಸಿದರೆ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದು. ಸೋರೆಕಾಯಿ ಒಳಗೊಂಡಿರುವ ವಿಟಮಿನ್ ಗಳು ಮತ್ತು ಖನಿಜಗಳು ದೇಹದ ಚರ್ಮ, ಕೂದಲು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಅಲ್ಲದೆ ಸೋರೆಕಾಯಿ ದೇಹಕ್ಕೆ ತಂಪು ಎಂದೂ ಸಹ ಹೇಳುತ್ತಾರೆ. 'ಅತಿಯಾದರೆ ಅಮೃತವೂ ವಿಷ' ಎಂಬಂತೆ ಯಾವುದನ್ನೂ ಅತಿಯಾಗಿ ಮಾಡದೆ, ಎಲ್ಲವೂ ಇತಿ ಮಿತಿಯಲ್ಲಿದ್ದರೆ ಒಳ್ಳೆಯದು.