NEET ಪರೀಕ್ಷೆ ಫೇಲ್ ಆದ ಪುತ್ರ ಆತ್ಮಹತ್ಯೆ; ಅಂತ್ಯಸಂಸ್ಕಾರದ ಬಳಿಕ ತಂದೆಯೂ ಸಾವಿಗೆ ಶರಣು!
ಜಗದೀಶ್ವರ್ ಖಾಸಗಿ ನೀಟ್ ಬೋಧನಾ ಕೇಂದ್ರದಲ್ಲಿ ಕೋಚಿಂಗ್ ಪಡೆದಿದ್ದ. ಸತತ 2ನೇ ಪ್ರಯತ್ನದಲ್ಲಿಯೂ ನೀಟ್ ಪರೀಕ್ಷೆಯಲ್ಲಿ ಫೇಲಾಗಿದ್ದ. ಆತನ ತಂದೆ 3ನೇ ಪ್ರಯತ್ನಕ್ಕಾಗಿ ಇನ್ನೊಂದು ಕೋಚಿಂಗ್ ಸೆಂಟರ್‍ಗೆ ಮಗನನ್ನು ಸೇರಿಸಲು ಪ್ರಯತ್ನಿಸಿದ್ದರು.
ನವದೆಹಲಿ: ನೀಟ್ ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ಮನನೊಂದು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದು, ಮಗನ ಸಾವಿನಿಂದ ಆಘಾತಕ್ಕೊಳಗಾದ ತಂದೆ ಸಹ ನೇಣಿಗೆ ಕೊರಳೊಡ್ಡಿರುವ ಘಟನೆ ನಡೆದಿದೆ.
ತಮಿಳುನಾಡಿನ ಚೆನ್ನೈನ ಕ್ರೋಮಾಪೇಟ್‍ನಲ್ಲಿ ಈ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ. ಸತತ ಪ್ರಯತ್ನದ ಬಳಿಕ 2ನೇ ಬಾರಿಯೂ ನೀಟ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ತೀವ್ರವಾಗಿ ಮನನೊಂದಿದ್ದ 19 ವರ್ಷದ ಜಗದೀಶ್ವರ್ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದ.
ಇದನ್ನೂ ಓದಿ: ಒಡಿಶಾದಲ್ಲಿ ಸಿಡಿಲು ಬಡಿದು 16 ವಿದ್ಯಾರ್ಥಿಗಳಿಗೆ ಗಾಯ
ಜಗದೀಶ್ವರ್ ಖಾಸಗಿ ನೀಟ್ ಬೋಧನಾ ಕೇಂದ್ರದಲ್ಲಿ ಕೋಚಿಂಗ್ ಪಡೆದಿದ್ದ. ಸತತ 2ನೇ ಪ್ರಯತ್ನದಲ್ಲಿಯೂ ನೀಟ್ ಪರೀಕ್ಷೆಯಲ್ಲಿ ಫೇಲಾಗಿದ್ದ. ಆತನ ತಂದೆ 3ನೇ ಪ್ರಯತ್ನಕ್ಕಾಗಿ ಇನ್ನೊಂದು ಕೋಚಿಂಗ್ ಸೆಂಟರ್‍ಗೆ ಮಗನನ್ನು ಸೇರಿಸಲು ಪ್ರಯತ್ನಿಸಿದ್ದರು. ಇದಲ್ಲದೇ ಆತನ ಅರ್ಜಿಯನ್ನು ಸಹ ತುಂಬಿದ್ದರಂತೆ. ಆದರೆ ನೀಟ್ ಪರೀಕ್ಷೆಯಲ್ಲಿ ತಾನು ಆಯ್ಕೆಯಾಗಲು ಸಾಧ್ಯವೇ ಇಲ್ಲವೆಂದು ಭಾವಿಸಿದ್ದ ಜಗದೀಶ್ವರ್ ಮಾನಸಿಕವಾಗಿ ಕುಸಿದು ಹೋಗಿದ್ದ. ವಿದ್ಯಾರ್ಥಿ ದುಡುಕಿನ ನಿರ್ಧಾರ ಕೈಗೊಂಡ ಆತ ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ.
ಪುತ್ರನ ಸಾವಿನಿಂದ ಕಂಗೆಟ್ಟ ತಂದೆಯೂ ಸಹ ಭಾನುವಾರ ಆತನ ಅಂತ್ಯಸಂಸ್ಕಾರ ನೆರವೇರಿಸಿ ಮನೆಗೆ ಬಂದಿದ್ದಾರೆ. ಮಗನ ಸಾವಿನ ಕೊರಗಿನಲ್ಲಿಯೇ ತಂದೆ ಕೂಡ ನೇಣಿಗೆ ಕೊರಳೊಡ್ಡಿ ಸಾವನ್ನಪ್ಪಿದ್ದಾರೆ. ತಂದೆ-ಮಗನ ಸಾವಿನಿಂದ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: B.Ed ಪದವೀಧರರು ‘ಪ್ರಾಥಮಿಕ ಶಾಲಾ ಶಿಕ್ಷಕ’ರ ಹುದ್ದೆಗೆ ಅರ್ಹರಲ್ಲ: ‘ಸುಪ್ರೀಂ’ ಮಹತ್ವದ ತೀರ್ಪು
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.