ಬೆಂಗಳೂರು: ಗೋವಿಂದರಾಜನಗರ ಕ್ಷೇತ್ರ ತೊರೆದು ಕಾಲ ಮೇಲೆ ಕಲ್ಲು ಹಾಕಿಕೊಂಡೆ ಎಂದಿರುವ ಬಿಜೆಪಿ ಮುಖಂಡ ವಿ.ಸೋಮಣ್ಣ ಹೇಳಿಕೆ ಬಗ್ಗೆ ಕಾಂಗ್ರೆಸ್ ಲೇವಡಿ ಮಾಡಿದೆ.
ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಸೋಮಣ್ಣನವರೇ, ನಿಮ್ಮ ಕಾಲ ಮೇಲೆ ನೀವೇ ಕಲ್ಲು ಹಾಕಿಕೊಂಡಿದ್ದಾ ಅಥವಾ ನಿಮ್ಮ ತಲೆಯ ಮೇಲೆ ಬೇರೆಯವರು ಕಲ್ಲು ಹಾಕಿದ್ದಾ? "ಲಿಂಗಾಯತ ಮುಕ್ತ ಬಿಜೆಪಿ" ಮಾಡುವ ಸಂತೋಷ ಕೂಟದ ಪ್ರಯತ್ನಕ್ಕೆ ನೀವು 3ನೇ ಬಲಿಪಶು ಆಗಿದ್ದಲ್ಲವೇ?’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದೆ.
ಬಿಜೆಪಿಯ ಫೇಕ್ ಫ್ಯಾಕ್ಟರಿಯ ಬಾಗಿಲು ಮುಚ್ಚಿಸುವುದು ನಿಶ್ಚಿತ!
‘ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹೆಸರಿನ ನಕಲಿ ವೆಬ್ಸೈಟ್ ತೆರೆದು ಅಪಪ್ರಚಾರ ನಡೆಸಿದ ಬಿಜೆಪಿ ಏಜೆಂಟ್ಗಳನ್ನು ಬಂಧಿಸಲಾಗಿದೆ. ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷರಾದ ಪ್ರಿಯಾಂಕ್ ಖರ್ಗೆಯವರ ದೂರಿನ ಮೆರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ನಕಲಿ ವೀರರನ್ನು ಹೆಡೆಮುರಿ ಕಟ್ಟಿದ್ದಾರೆ. ಬಿಜೆಪಿಯ ಫೇಕ್ ಫ್ಯಾಕ್ಟರಿಯ ಬಾಗಿಲು ಮುಚ್ಚಿಸುವುದು ನಿಶ್ಚಿತ’ವೆಂದು ಕಾಂಗ್ರೆಸ್ ಟೀಕಿಸಿದೆ.
ಇದನ್ನೂ ಓದಿ: 77ನೇ ಸ್ವಾತಂತ್ರ್ಯ ದಿನಾಚರಣೆಗೆ ಕೌಂಟ್ಡೌನ್, ಮದುವಣಗಿತ್ತಿಯಂತೆ ಸಿಂಗಾರಗೊಂಡ ಮಾಣಿಕ್ ಷಾ ಮೈದಾನ
ಭ್ರಷ್ಟರ ಕಲ್ಯಾಣಕ್ಕೆ ಬಳಸಿದ್ದೇ ಬಿಜೆಪಿ ಸಾಧನೆ!
ಹಿಂದಿನ ಬಿಜೆಪಿಯ 40% ಸರ್ಕಾರದ 100% ಭ್ರಷ್ಟಾಚಾರದ ಕತೆ ಇದು. ಬಿಜೆಪಿ ಅಡಳಿತವೆಂದರೆ "ಭ್ರಷ್ಟಾಚಾರದ ಅಕ್ಷಯ ಪಾತ್ರೆ" ಇದ್ದಂತೆ, ಬಗೆದಷ್ಟೂ ಹೊರಬರುತ್ತದೆ. ರಾಯಚೂರು ಕೃಷಿ ವಿವಿಯ ಡಿಜಿಟಲ್ ಸಾಮಗ್ರಿ ಖರೀದಿಯಲ್ಲಿ ಸಾಮಗ್ರಿಗಳನ್ನು ಮಾರುಕಟ್ಟೆ ದರಕ್ಕಿಂತ 200%ವರೆಗೂ ಹೆಚ್ಚು ಬೆಲೆ ನಿಗದಿ ಮಾಡಿ ಖರೀದಿಸಲಾಗಿದೆ. ಕಲ್ಯಾಣ ಕರ್ನಾಟಕದ ಕಲ್ಯಾಣಕ್ಕೆ ಇರುವ KKRDB ಹಣವನ್ನು ಭ್ರಷ್ಟರ ಕಲ್ಯಾಣಕ್ಕೆ ಬಳಸಿದ್ದೇ ಬಿಜೆಪಿ ಸಾಧನೆ’ ಎಂದು ಕಾಂಗ್ರೆಸ್ ಕುಟುಕಿದೆ.
ಒಂದೊಂದು ಪೈಸೆಗೂ ಲೆಕ್ಕ ಪಡೆಯುತ್ತೇವೆ!
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಯಚೂರು ಕೃಷಿ ವಿವಿಗೆ ಡಿಜಿಟಲ್ ಸಾಮಗ್ರಿಗಳನ್ನು ಖರೀದಿಸಿದ ದರಪಟ್ಟಿ.
ಮಾರುಕಟ್ಟೆ ದರಕ್ಕಿಂತ 200% ಹೆಚ್ಚು ಮೊತ್ತಕ್ಕೆ ಖರೀದಿಸಿದ ಸಾಮಗ್ರಿಗಳು ಬಂಗಾರದಿಂದ ಮಾಡಿದ್ದವೇ @BJP4Karnataka ?
ಬಗೆದಷ್ಟೂ ಬಯಲಾಗುವ ಬಿಜೆಪಿಯ ಎಲ್ಲಾ ಭ್ರಷ್ಟಾಚಾರಗಳನ್ನೂ ತನಿಖೆಗೆ ಒಳಪಡಿಸಲಿದೆ ನಮ್ಮ ಸರ್ಕಾರ.
ಜನರ… pic.twitter.com/8KSAGDzlI3
— Karnataka Congress (@INCKarnataka) August 14, 2023
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಯಚೂರು ಕೃಷಿ ವಿವಿಗೆ ಡಿಜಿಟಲ್ ಸಾಮಗ್ರಿಗಳನ್ನು ಖರೀದಿಸಿದ ದರಪಟ್ಟಿ. ಮಾರುಕಟ್ಟೆ ದರಕ್ಕಿಂತ 200% ಹೆಚ್ಚು ಮೊತ್ತಕ್ಕೆ ಖರೀದಿಸಿದ ಸಾಮಗ್ರಿಗಳು ಬಂಗಾರದಿಂದ ಮಾಡಿದ್ದವೇ ಬಿಜೆಪಿ? ಬಗೆದಷ್ಟೂ ಬಯಲಾಗುವ ಬಿಜೆಪಿಯ ಎಲ್ಲಾ ಭ್ರಷ್ಟಾಚಾರಗಳನ್ನೂ ತನಿಖೆಗೆ ಒಳಪಡಿಸಲಿದೆ ನಮ್ಮ ಸರ್ಕಾರ. ಜನರ ತೆರಿಗೆ ಹಣದ ಒಂದೊಂದು ಪೈಸೆಗೂ ಲೆಕ್ಕ ಪಡೆಯುತ್ತೇವೆ’ ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಕೈ-ದಳ ನಡುವೆ ನಿವೇಶನ ಹಂಚಿಕೆ ಒಪ್ಪಂದ?..ತುಮಕೂರಿನಲ್ಲಿ ನಿಲ್ಲದ ಹಾಲಿ-ಮಾಜಿ ಶಾಸಕರ ಟಾಕ್ ವಾರ್..!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.