ಜೈಪುರ: ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಗುಜರಾತ್'ನ 597 ಅಡಿ ಎತ್ತರದ ಸರ್ದಾರ್ ವಲ್ಲಭಾಭಾಯಿ ಪಾಟೇಲರ 'ಏಕತಾ ಮೂರ್ತಿ' ಉದ್ಘಾಟನೆಯ ಬೆನ್ನಲ್ಲೇ ರಾಜಸ್ಥಾನದಲ್ಲಿ ವಿಶ್ವದ ಅತೀ ಎತ್ತರದ ಶಿವನ ಪ್ರತಿಮೆ ಉದ್ಘಾಟನೆಗೆ ಸಿದ್ಧವಾಗುತ್ತಿದೆ.


COMMERCIAL BREAK
SCROLL TO CONTINUE READING

ರಾಜಸ್ಥಾನದ ನಾಥ್​ದ್ವಾರದಲ್ಲಿ 351 ಅಡಿ​ ಎತ್ತರದ ಶಿವ ಮೂರ್ತಿಯನ್ನು ಸ್ಥಾಪನೆ ಮಾಡಲಾಗುತ್ತಿದ್ದು,  ಇದು ಪ್ರಪಂಚದಲ್ಲಿಯೇ ಅತೀ ಎತ್ತರದ ಶಿವಮೂರ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. ರಾಜಸ್ಥಾನದ ಉದಯಪುರದಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ ನಾಥ್​ದ್ವಾರದಲ್ಲಿನ ಗಣೇಶ್ ಟೆಕ್ರಿಯಲ್ಲಿ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಶೇ.85ರಷ್ಟು ಪ್ರತಿಮೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, 2019 ಮಾರ್ಚ್​ ತಿಂಗಳಿನಲ್ಲಿ ಲೋಕಾರ್ಪಣೆಗೊಳ್ಳಲಿದೆ. 


2012ರ ಆಗಸ್ಟ್ 18 ರಂದು ಮೂರ್ತಿ ಸ್ಥಾಪನೆಗೆ ಫೌಂಡೇಷನ್ ಹಾಕಲಾಗಿತ್ತು. ಅಂದಿನ ಮುಖ್ಯಮಂತ್ರಿ  ಅಶೋಕ್ ಗೆಹ್ಲೋಟ್, ಪೂಜ್ಯ ಮುರಾರಿ ಬಾಪು ಅವರು ಈ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.


ಶಿವ ಪ್ರತಿಮೆಯ ವಿಶೇಷತೆ:
* ಸುಮಾರು 750 ಕಾರ್ಮಿಕರ ನಾಲ್ಕು ವರ್ಷಗಳ ಸತತ ಪರಿಶ್ರಮದಿಂದಾಗಿ ಈ ಮೂರ್ತಿ ಸಿದ್ಧವಾಗುತ್ತಿದೆ. 
* ಆಸ್ಟ್ರೇಲಿಯಾದ Mirage Group ಕಂಪೆನಿ ಕಾಮಗಾರಿ ವಹಿಸಿಕೊಂಡಿದೆ.
* ವಿಶ್ವದ ಅತ್ಯಂತ ಎತ್ತರದ ಶಿವನ ಪ್ರತಿಮೆ ಎಂಬ ಹೆಗ್ಗಳಿಕೆ ಪಾತ್ರವಾಗಲಿರುವ 351 ಆಡಿ ಎತ್ತರದ ಶಿವನ ಪ್ರತಿಮೆ.
* 3000 ಟನ್ ಉಕ್ಕನ್ನ ಬಳಸಿ, ಬರೋಬ್ಬರಿ 30 ಸಾವಿರ ಟನ್ ತೂಕದ ಶಿವನ ಪ್ರತಿಮೆ ನಿರ್ಮಾಣ
* ಪ್ರವಾಸೋದ್ಯಮ ಅಭಿವೃದ್ಧಿಯ ಉದ್ದೇಶದಿಂದ 280 ಫೀಟ್ ಎತ್ತರದವೆರೆಗೆ ನಾಲ್ಕು ಲಿಫ್ಟ್ ಮತ್ತು ಮೂರು ಎಸ್ಕಲೇಟರ್​​ಗಳ ಅಳವಡಿಕೆ. 
* ಪ್ರತಿಮೆಯನ್ನು ಸುಮಾರು 20 ಕಿ.ಮೀ. ದೂರದಿಂದಲೇ ವೀಕ್ಷಿಸಬಹುದು.
* ಶಿವನ ವಿಗ್ರಹ ನಿರ್ಮಾಣ ಸ್ಥಳದಲ್ಲಿ ಮನೋರಂಜನೆಗಾಗಿ ರಂಗಮಂದಿರ ಹಾಗೂ ಉದ್ಯಾನವನಗಳ ನಿರ್ಮಾಣ.