Agniveer Recruitment Notification: ಅಗ್ನಿವೀರರ ಭರ್ತಿಗಾಗಿ ಭಾರತೀಯ ಸೇನೆಯಿಂದ ಅಧಿಸೂಚನೆ ಜಾರಿ, ಯಾವಾಗ ನೋಂದಣಿ ಆರಂಭ ಇಲ್ಲಿ ತಿಳಿಯಿರಿ
Agniveer Recruitment Notification -ಅಗ್ನಿವೀರರ ನೇಮಕಾತಿಗೆ ಸಂಬಂಧಿಸಿದಂತೆ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ, ಭಾರತೀಯ ಸೇನೆಯು ಅಗ್ನಿಪಥ್ ಯೋಜನೆಯಡಿ ಮೊದಲ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಜುಲೈನಿಂದ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ.
Agniveer Recruitment Notification - ಅಗ್ನಿವೀರರ ನೇಮಕಾತಿಗೆ ಸಂಬಂಧಿಸಿದಂತೆ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ, ಭಾರತೀಯ ಸೇನೆಯು ಅಗ್ನಿಪಥ್ ಯೋಜನೆಯಡಿ ಮೊದಲ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಅಧಿಸೂಚನೆಯು ಅರ್ಹತಾ ಷರತ್ತುಗಳು, ನೇಮಕಾತಿ ಪ್ರಕ್ರಿಯೆ, ವೇತನ ಮತ್ತು ಸೇವಾ ನಿಯಮಗಳಿಗೆ ಭತ್ಯೆಗಳ ವಿವರಗಳನ್ನು ಒಳಗೊಂಡಿದೆ. ಜುಲೈನಿಂದ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಆಸಕ್ತ ಅರ್ಜಿದಾರರು JOININDIANARMY.NIC.IN ಗೆ ಭೇಟಿ ನೀಡುವ ಮೂಲಕ ನೋಂದಾಯಿಸಿಕೊಳ್ಳಬಹುದು.
ಜೂನ್ 14 ರಂದು, ಸರ್ಕಾರವು 'ಅಗ್ನಿಪಥ್ ಯೋಜನೆ'ಯ ಘೋಷಣೆಯನ್ನು ಮಾಡಿತ್ತು, ಇದರ ಅಡಿಯಲ್ಲಿ ಹದಿನೇಳುವರಿ ವರ್ಷದಿಂದ 21 ವರ್ಷ ವಯಸ್ಸಿನ ಯುವಕರನ್ನು ನಾಲ್ಕು ವರ್ಷಗಳವರೆಗೆ ಸೇನೆಗೆ ನೇಮಿಸಿಕೊಳ್ಳಲಾಗುವುದು ಮತ್ತು ಅವರಲ್ಲಿ ಶೇ.25 ರಷ್ಟು ಜನರನ್ನು ಮುಂದಿನ 15 ವರ್ಷಗಳ ಅವಧಿಗಾಗಿ ಸೇನೆಯಲ್ಲಿನ ಸೇವೆಗಾಗಿ ಮುಂದುವರೆಸಲಾಗುವುದು ಎಂದು ಸರ್ಕಾರ ಹೇಳಿತ್ತು. ಆದರೆ, ನಂತರ ಸರ್ಕಾರವು ನೇಮಕಾತಿಗಾಗಿ ಗರಿಷ್ಠ ವಯಸ್ಸಿನ ಮಿತಿಯನ್ನು 2022 ರಲ್ಲಿ 23 ವರ್ಷಗಳಿಗೆ ಹೆಚ್ಚಿಸಿದೆ. ಈ ಹೊಸ ಯೋಜನೆಯಡಿ ನೇಮಕಗೊಂಡವರನ್ನು 'ಅಗ್ನಿವೀರ್' ಎಂದು ಕರಯಲಾಗುವುದು ಎಂದು ಸರ್ಕಾರ ಹೇಳಿತ್ತು.
ಭಾನುವಾರದಂದು ಭಾರತೀಯ ಸೇನೆಯು 'ಅಗ್ನಿಪಥ್ ಸೇನಾಭರ್ತಿ ಯೋಜನೆ' ಅಡಿಯಲ್ಲಿ ಸೇನೆಗೆ ಸೇರಲು ಬಯಸುವ ಅರ್ಜಿದಾರರಿಗೆ ಮಾರ್ಗಸೂಚಿಗಳು ಮತ್ತು ಇತರ ಸಂಬಂಧಿತ ಮಾಹಿತಿಯನ್ನು ನೀಡಿತ್ತು. ಭಾರತೀಯ ಸೇನೆಯಲ್ಲಿ 'ಅಗ್ನಿವೀರ್' ಪ್ರತ್ಯೇಕ ವಿಭಾಗವಾಗಿದ್ದು, ಪ್ರಸ್ತುತ ಇರುವ ಶ್ರೇಣಿಗಿಂತ ಇದು ಭಿನ್ನವಾಗಿರಲಿದೆ ಮತ್ತು ಅವರನ್ನು ಯಾವುದೇ ರೆಜಿಮೆಂಟ್ ಅಥವಾ ಘಟಕದಲ್ಲಿ ನಿಯೋಜಿಸಲಾಗುವುದು ಎಂದು ಸೇನೆ ಹೇಳಿತ್ತು.
ಅಧಿಕೃತ ರಹಸ್ಯ ಕಾಯಿದೆ, 1923 ರ ಅಡಿಯಲ್ಲಿ, ನಾಲ್ಕು ವರ್ಷಗಳ ಸೇವೆಯಲ್ಲಿ ಸಲ್ಲಿಸಿದವರು ಗೌಪ್ಯ ಮಾಹಿತಿಯನ್ನು ಯಾವುದೇ ಅನಧಿಕೃತ ವ್ಯಕ್ತಿ ಅಥವಾ ಮೂಲಗಳಿಗೆ ಬಹಿರಂಗಪಡಿಸುವಿಕೆಯನ್ನು 'ಅಗ್ನಿವೀರರಿಗೆ' ನಿಷೇಧಿಸಲಾಗುವುದು ಎಂದು ಸೇನೆ ಹೇಳಿದೆ.
‘‘ಈ ಯೋಜನೆ ಜಾರಿಯಿಂದ ಸೇನೆಯ ವೈದ್ಯಕೀಯ ವಿಭಾಗದ ತಾಂತ್ರಿಕ ವರ್ಗವನ್ನು ಹೊರತುಪಡಿಸಿ ಉಳಿದೆಲ್ಲ ಸಾಮಾನ್ಯ ವರ್ಗದ ಸೈನಿಕರ ನೇಮಕಾತಿಯು ಅಗ್ನಿವೀರ್ ಆಗಿ ಅಧಿಕಾರಾವಧಿ ಪೂರ್ಣಗೊಳಿಸಿದವರಿಗೆ ಮಾತ್ರ ಮುಕ್ತವಾಗಲಿದೆ’’ ಎಂದು ಸೇನೆ ತಿಳಿಸಿತ್ತು.
ಇದನ್ನೂ ಓದಿ-Agnipath Scheme : ಅಗ್ನಿಪಥ ಯೋಜನೆ ಬಗ್ಗೆ ಇಂಚು ಇಂಚು ಮಾಹಿತಿ ನೀಡಿದ ಭಾರತೀಯ ಸೇನೆ!
‘ಅಗ್ನಿವೀರ್’ ಸೇವಾವಧಿ ಮುಗಿಯುವ ಮುನ್ನ ಯಾವುದೇ ಅಗ್ನಿವೀರ ಸ್ವಂತ ಇಚ್ಛೆಯ ಮೇರೆಗೆ ಸೇನೆಯನ್ನು ತೊರೆಯುವಂತಿಲ್ಲ ಎಂದು ಸೇನೆಯು ತನ್ನ ಮತ್ತೊಂದು ಪ್ರಕಟಣೆಯಲ್ಲಿ ತಿಳಿಸಿದೆ. "ಆದರೆ, ಅತ್ಯಂತ ಅಪರೂಪದ ಪ್ರಕರಣದಲ್ಲಿ, ಈ ಯೋಜನೆಯಡಿಯಲ್ಲಿ ನೇಮಕಗೊಂಡ ಸೈನಿಕನನ್ನು ಸಕ್ಷಮ ಪ್ರಾಧಿಕಾರದ ಅನುಮತಿಯೊಂದಿಗೆ ಸೇನೆಯನ್ನು ತೊರೆಯಲು ಅನುಮತಿಸಲಾಗುವುದು" ಎಂದು ಅದು ಸ್ಪಷ್ಟಪಡಿಸಿತ್ತು.
ಇದನ್ನೂ ಓದಿ-ಅಗ್ನಿಪಥ್ ಯೋಜನೆಯ ಮೂಲಕ ಅಗ್ನಿವೀರರ ನೇಮಕಾತಿಗೆ ಚಾಲನೆ
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.