ಅಗ್ನಿಪಥ್ ಯೋಜನೆಯ ಮೂಲಕ ಅಗ್ನಿವೀರರ ನೇಮಕಾತಿಗೆ ಚಾಲನೆ

ವಿದ್ಯಾರ್ಥಿಗಳು ಮತ್ತು ರಕ್ಷಣಾ ಆಕಾಂಕ್ಷಿಗಳ ವಿಭಾಗದಿಂದ ಭಾರೀ ಟೀಕೆಗಳು ಮತ್ತು ರಾಷ್ಟ್ರವ್ಯಾಪಿ ಆಕ್ರೋಶದ ನಡುವೆಯೂ ಕೇಂದ್ರ ಮತ್ತು ಸಶಸ್ತ್ರ ಪಡೆಗಳು ಇತ್ತೀಚೆಗೆ ಪ್ರಾರಂಭಿಸಲಾದ ಅಗ್ನಿಪಥ್ ಯೋಜನೆಯ ಮೂಲಕ ನೇಮಕಾತಿಯನ್ನು ಪ್ರಾರಂಭಿಸಲು ಸಿದ್ಧವಾಗಿವೆ ಎಂದು ಎಎನ್ಐ ವರದಿ ಮಾಡಿದೆ.

Written by - Zee Kannada News Desk | Last Updated : Jun 19, 2022, 11:11 PM IST
  • ಅಗ್ನಿವೀರ್‌ ಎನ್ನುವುದು ಹೊಸ ನೇಮಕಾತಿ ಯೋಜನೆಯ ಮೂಲಕ ರಕ್ಷಣಾ ಪಡೆಗಳಿಗೆ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಬಳಸಲಾಗುವ ಪದವಾಗಿದೆ.
ಅಗ್ನಿಪಥ್ ಯೋಜನೆಯ ಮೂಲಕ ಅಗ್ನಿವೀರರ ನೇಮಕಾತಿಗೆ ಚಾಲನೆ title=

ನವದೆಹಲಿ: ವಿದ್ಯಾರ್ಥಿಗಳು ಮತ್ತು ರಕ್ಷಣಾ ಆಕಾಂಕ್ಷಿಗಳ ವಿಭಾಗದಿಂದ ಭಾರೀ ಟೀಕೆಗಳು ಮತ್ತು ರಾಷ್ಟ್ರವ್ಯಾಪಿ ಆಕ್ರೋಶದ ನಡುವೆಯೂ ಕೇಂದ್ರ ಮತ್ತು ಸಶಸ್ತ್ರ ಪಡೆಗಳು ಇತ್ತೀಚೆಗೆ ಪ್ರಾರಂಭಿಸಲಾದ ಅಗ್ನಿಪಥ್ ಯೋಜನೆಯ ಮೂಲಕ ನೇಮಕಾತಿಯನ್ನು ಪ್ರಾರಂಭಿಸಲು ಸಿದ್ಧವಾಗಿವೆ ಎಂದು ಎಎನ್ಐ ವರದಿ ಮಾಡಿದೆ.

ಏರ್ ಮಾರ್ಷಲ್ ಸೂರಜ್ ಕುಮಾರ್ ಝಾ ಅವರು ಅಗ್ನಿವೀರ್‌ ರ ಮೊದಲ ಬ್ಯಾಚ್‌ನ ನೋಂದಣಿ ಪ್ರಕ್ರಿಯೆಯು ಜೂನ್ 24 ರಂದು ಪ್ರಾರಂಭವಾಗುತ್ತದೆ ಮತ್ತು ನಂತರ ಆನ್‌ಲೈನ್ ಪರೀಕ್ಷೆಯ ಪ್ರಕ್ರಿಯೆಯು ಕೇವಲ ಒಂದು ತಿಂಗಳ ನಂತರ ಪ್ರಾರಂಭವಾಗುತ್ತದೆ ಎಂದು ಭಾನುವಾರ ಘೋಷಿಸಿದ್ದಾರೆ.ಅಗ್ನಿವೀರ್‌ ಎನ್ನುವುದು ಹೊಸ ನೇಮಕಾತಿ ಯೋಜನೆಯ ಮೂಲಕ ರಕ್ಷಣಾ ಪಡೆಗಳಿಗೆ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಬಳಸಲಾಗುವ ಪದವಾಗಿದೆ. ಅವರ 4 ವರ್ಷಗಳ ಸೇವಾ ಅವಧಿಯನ್ನು ಪೂರ್ಣಗೊಳಿಸಿದ ನಂತರ ಅವರಿಗೆ ವಿಶೇಷ ಅಗ್ನಿವೀರ್ ಪ್ರಮಾಣಪತ್ರವನ್ನು ನೀಡಲಾಗುತ್ತದೆ.

ಇದನ್ನೂ ಓದಿ: ಕದ್ದುಮುಚ್ಚಿ ಥಿಯೇಟರ್‌ಗೆ ಬಂದು ‘ಕೆಜಿಎಫ್-2’ ನೋಡಿದ್ರಾ ನಟಿ ಸಾಯಿ ಪಲ್ಲವಿ..?

ಅಗ್ನಿಪಥ್ ಯೋಜನೆಗೆ ಸೇರ್ಪಡೆಗೊಳ್ಳಲು ಸಿದ್ಧರಿರುವ ಅಭ್ಯರ್ಥಿಗಳ ಪ್ರಮುಖ ದಿನಾಂಕಗಳು ಇಲ್ಲಿವೆ.

ವಾಯುಪಡೆಯ 'ಅಗ್ನಿವೀರ್'ಗೆ ಪ್ರಮುಖ ಘೋಷಣೆ
ನೋಂದಣಿ ಪ್ರಕ್ರಿಯೆಯ ಆರಂಭ- ಜೂನ್ 24

ಜುಲೈ 24 ರಿಂದ ಹಂತ 1 ಆನ್‌ಲೈನ್ ಪರೀಕ್ಷೆಯ ಪ್ರಕ್ರಿಯೆ ಪ್ರಾರಂಭ
ಮೊದಲ ಬ್ಯಾಚ್ ಅನ್ನು ಡಿಸೆಂಬರ್ 2022 ರೊಳಗೆ ನೋಂದಾಯಿಸಲಾಗುವುದು
ಮೊದಲ 'ಅಗ್ನಿವೀರ್' ಬ್ಯಾಚ್‌ನ ತರಬೇತಿಯ ಪ್ರಾರಂಭ- ಡಿಸೆಂಬರ್ 30, 2022

ನೌಕಾಪಡೆಯ ‘ಅಗ್ನಿವೀರ್ಸ್’ಗೆ ಮಹತ್ವದ ಘೋಷಣೆ

ಈ ವರ್ಷ ನವೆಂಬರ್ 21 ರಿಂದ, ಮೊದಲ ನೌಕಾಪಡೆ 'ಅಗ್ನಿವೀರ್ಸ್' ಒಡಿಶಾದ INS ಚಿಲ್ಕಾ ತರಬೇತಿ ಸಂಸ್ಥೆಯನ್ನು ತಲುಪಲು ಪ್ರಾರಂಭಿಸುತ್ತದೆ. ಹೆಣ್ಣು ಮತ್ತು ಗಂಡು ಅಗ್ನಿವೀರ್‌ಗಳಿಗೆ ಅವಕಾಶವಿದೆ ಎಂದು ವೈಸ್ ಅಡ್ಮಿರಲ್ ದಿನೇಶ್ ತ್ರಿಪಾಠಿ ಘೋಷಿಸಿದರು.

ಸೇನೆಯ ‘ಅಗ್ನಿವೀರ್ಸ್’ಗೆ ಮಹತ್ವದ ಘೋಷಣೆ

ಡಿಸೆಂಬರ್ ಮೊದಲ ವಾರದ ವೇಳೆಗೆ, ನಾವು 25,000 'ಅಗ್ನಿವೀರ್‌ಗಳ' ಮೊದಲ ಬ್ಯಾಚ್ ಅನ್ನು ಪಡೆಯುತ್ತೇವೆ ಮತ್ತು ಎರಡನೇ ಬ್ಯಾಚ್ ಅನ್ನು ಫೆಬ್ರವರಿ 2023 ರ ಸುಮಾರಿಗೆ ಸೇರ್ಪಡೆಗೊಳಿಸಲಾಗುವುದು ಎಂದು ಲೆಫ್ಟಿನೆಂಟ್ ಜನರಲ್ ಬನ್ಸಿ ಪೊನಪ್ಪ ಭಾನುವಾರ ಘೋಷಿಸಿದ್ದಾರೆ.

ಇದನ್ನೂ ಓದಿ: ‘ನಾವು ವಿವೇಕಾನಂದರ ವಂಶಸ್ಥರೇ ವಿನಃ ಮೊಘಲರ ವಂಶಸ್ಥರಲ್ಲ’

ಯಾವುದೇ ಹಿಂಸಾತ್ಮಕ ಪ್ರತಿಭಟನಾಕಾರರನ್ನು ಅಗ್ನಿಪಥ್ ಅಡಿಯಲ್ಲಿ ದಾಖಲಿಸಲಾಗುವುದಿಲ್ಲ. ಭಾರತೀಯ ಸೇನೆಯ ಶಿಸ್ತಿನ ಅಡಿಪಾಯ ಆದ್ದರಿಂದ ಅಗ್ನಿಸ್ಪರ್ಶ ಮತ್ತು ವಿಧ್ವಂಸಕ ಕೃತ್ಯಗಳಿಗೆ ಜಾಗವಿಲ್ಲ. ಪ್ರತಿಯೊಬ್ಬ ವ್ಯಕ್ತಿಯು ಪ್ರತಿಭಟನೆ ಅಥವಾ ವಿಧ್ವಂಸಕ ಕೃತ್ಯದ ಭಾಗವಾಗಿಲ್ಲ ಎಂದು ಪ್ರಮಾಣಪತ್ರವನ್ನು ನೀಡುತ್ತಾರೆ. ಶೇ 100 ರಷ್ಟು ಪೋಲಿಸ್ ಪರಿಶೀಲನೆ ಇರುತ್ತದೆ, ಅದು ಇಲ್ಲದೆ ಯಾರೂ ಸೇರಲು ಸಾಧ್ಯವಿಲ್ಲ ಎಂದು ಅನಿಲ್ ಪುರಿ ಘೋಷಿಸಿದ್ದಾರೆ.

ಅಗ್ನಿಪಥ ಯೋಜನೆಯಲ್ಲಿ ತಿದ್ದುಪಡಿಗಳು

ಕೇಂದ್ರವು ಇತ್ತೀಚೆಗೆ ಪ್ರಾರಂಭಿಸಿರುವ ಅಗ್ನಿಪಥ್ ನೇಮಕಾತಿ ಯೋಜನೆಯ ವಿರುದ್ಧ ರಾಷ್ಟ್ರವ್ಯಾಪಿ ಹಿಂಸಾತ್ಮಕ ಪ್ರತಿಭಟನೆಗಳು ವ್ಯಕ್ತವಾಗಿದ್ದರಿಂದ, ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಮತ್ತು ರಕ್ಷಣಾ ಆಕಾಂಕ್ಷಿಗಳ ಕಳವಳಗಳನ್ನು ಪರಿಹರಿಸಲು ಸರ್ಕಾರವು ಕೆಲವು ತಿದ್ದುಪಡಿಗಳನ್ನು ಮಾಡಿದೆ. ಶನಿವಾರದಂದು ಅಗ್ನಿಪಥ್ ಯೋಜನೆಯ ಪ್ರಕಾರ ನಾಲ್ಕು ವರ್ಷಗಳ ಸೇವಾ ಅವಧಿಯನ್ನು ಪೂರ್ಣಗೊಳಿಸಿದ ನಂತರ ಕೇಂದ್ರವು ವಿವಿಧ ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ 'ಅಗ್ನಿವೀರ್'ಗಳಿಗೆ 10% ಮೀಸಲಾತಿಯನ್ನು ಘೋಷಿಸಿತು.ಇದಲ್ಲದೆ, ಮೊದಲ ವರ್ಷದ ನೇಮಕಾತಿಯ ವಯಸ್ಸಿನ ಮಿತಿಯನ್ನು ಸಹ ಹೆಚ್ಚಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News