ನವದೆಹಲಿ:ಅಹ್ಮದಾಬಾದ್- ಪುರಿ ಎಕ್ಸ್ ಪ್ರೆಸ್ ಟ್ರೈನ್ ಯಾವುದೇ ಇಂಜಿನ್ ಸಹಾಯವಿಲ್ಲದೆ  ರೈಲ್ವೆ ಟ್ರಾಕ್ ಮೇಲೆ ಎಲ್ಲರನ್ನು ಒಂದು ಕ್ಷಣ ಅಚ್ಚರಿಗೊಳಿಸಿದೆ.


COMMERCIAL BREAK
SCROLL TO CONTINUE READING

ಹೌದು,ಇದು ಅಚ್ಚರಿಯಾದರೂ ಸತ್ಯ. ಓಡಿಸ್ಸಾದ ಪುರಿಯಿಂದ ಅಹ್ಮದಾಬಾದ್ ಗೆ ತೆರಳಬೇಕಾಗಿದ್ದ ಈ ಟ್ರೈನ್ ತಿತ್ಲಾ ಗಡ್ ಹತ್ತಿರ ಯಾವುದೇ ಇಂಜಿನ್ ಇಲ್ಲದೆ ಸಾಗುತ್ತಿದೆ,ಈ ವಿಡಿಯೋ ವನ್ನು ಸುದ್ದಿ ಸಂಸ್ಥೆ ಎಎನ್ಐ ಬಿಡುಗಡೆಗೊಳಿಸಿದೆ.



ಈ ಘಟನೆಯ ಕುರಿತಾಗಿ ಸಂಬಲ್ ಪುರ ನ ವಿಭಾಗಿಯ ರೈಲ್ವೆ ಮ್ಯಾನೇಜರ್ ತನಿಖೆ ನಡೆಸಲು ಆದೇಶಿಸಿದ್ದಾರೆ.ಮತ್ತು ರೈಲಿನಲ್ಲಿ ಇದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ.