ನವದೆಹಲಿ: ಭಾರ್ತಿ ಏರ್‌ಟೆಲ್ ತನ್ನ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ (Airtel Xstream Fiber )ಬ್ರಾಡ್‌ಬ್ಯಾಂಡ್ ಬಳಕೆದಾರರಿಗಾಗಿ ಹೊಸ ಪ್ರಚಾರದ ಯೋಜನೆಯನ್ನು ಪರಿಚಯಿಸಿದೆ.ಪ್ರಸ್ತಾಪದ ಭಾಗವಾಗಿ, ಟೆಲಿಕಾಂ ಕಂಪನಿ ತನ್ನ ಎಲ್ಲಾ ಹೊಸ ಚಂದಾದಾರರಿಗೆ 1,000 ಜಿಬಿ ಬೋನಸ್ ಡೇಟಾವನ್ನು ನೀಡುತ್ತಿದೆ.


COMMERCIAL BREAK
SCROLL TO CONTINUE READING

ಟೆಲಿಕಾಂ ಟಾಕ್‌ನ ವರದಿಯ ಪ್ರಕಾರ, ಹೊಸ ಬಳಕೆದಾರರು 6 ತಿಂಗಳ ಅವಧಿಗೆ 1,000 ಜಿಬಿ ಬೋನಸ್ ಡೇಟಾವನ್ನು ಪಡೆಯುತ್ತಾರೆ. ಈ ಕೊಡುಗೆ ಎಕ್ಸ್‌ಸ್ಟ್ರೀಮ್ ಫೈಬರ್‌ನ ಮೂಲ, ಮನರಂಜನೆ ಮತ್ತು ಪ್ರೀಮಿಯಂ ಯೋಜನೆಗಳಲ್ಲಿ ಲಭ್ಯವಿರುತ್ತದೆ.ವಿಐಪಿ ಯೋಜನೆಯನ್ನು ಈ ಆಫರ್ ನಲ್ಲಿ ಸೇರಿಸಲಾಗಿಲ್ಲ ಎನ್ನಲಾಗಿದೆ.


ಈ ಮೂರು ಯೋಜನೆ ಬಗ್ಗೆ ನಿಮಗೆ ಸಂಕ್ಷಿಪ್ತವಾಗಿ ತಿಳಿಸುವುದಾದಲ್ಲಿ ಮೂಲ ಯೋಜನೆಯ ಬೆಲೆ 799 ರೂ ಮತ್ತು ಇದು 100Mbps ವೇಗದಲ್ಲಿ 150GB ಡೇಟಾವನ್ನು ನೀಡುತ್ತದೆ ಮತ್ತು ಅನಿಯಮಿತ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳು ಮತ್ತು ಏರ್‌ಟೆಲ್ ಎಕ್ಸ್‌ಸ್ಟ್ರೀಮ್‌ಗೆ ಪೂರಕ ಪ್ರವೇಶವನ್ನು ನೀಡುತ್ತದೆ. ಎಂಟರ್‌ಟೈನ್‌ಮೆಂಟ್ ಯೋಜನೆಗೆ ₹ 999 ಬೆಲೆಯಿದೆ ಮತ್ತು ಇದು 200Mbps ವೇಗದಲ್ಲಿ 300GB ಡೇಟಾವನ್ನು ನೀಡುತ್ತದೆ ಮತ್ತು ಅನಿಯಮಿತ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳು ಮತ್ತು ಏರ್‌ಟೆಲ್ ಎಕ್ಸ್‌ಸ್ಟ್ರೀಮ್, Zee5 ಪ್ರೀಮಿಯಂ ಮತ್ತು ಅಮೆಜಾನ್ ಪ್ರೈಮ್‌ಗೆ ಪೂರಕ ಪ್ರವೇಶವನ್ನು ನೀಡುತ್ತದೆ. ಅಂತೆಯೇ, ಪ್ರೀಮಿಯಂ ಯೋಜನೆಯ ಬೆಲೆ 1,499 , ಇದು 300Mbps ವೇಗದಲ್ಲಿ 500GB ಡೇಟಾವನ್ನು ನೀಡುತ್ತದೆ ಮತ್ತು ಅನಿಯಮಿತ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳು ಮತ್ತು ಏರ್‌ಟೆಲ್ ಎಕ್ಸ್‌ಸ್ಟ್ರೀಮ್, Zee5 ಪ್ರೀಮಿಯಂ ಮತ್ತು ಅಮೆಜಾನ್ ಪ್ರೈಮ್‌ಗೆ ಪೂರಕ ಪ್ರವೇಶವನ್ನು ನೀಡುತ್ತದೆ.


ಹೊಸದಾಗಿ ಪರಿಚಯಿಸಲಾದ ಆಫರ್ ಜೂನ್ 7 ರವರೆಗೆ ಇರಲಿದೆ ಮತ್ತು ಇದು ಎರ್ನಾಕುಲಂ, ಕೊಯಮತ್ತೂರು, ಕೊಚ್ಚಿನ್ ಮತ್ತು ಚೆನ್ನೈಗಳನ್ನು ಒಳಗೊಂಡಿರುವ ಆಯ್ದ ನಗರಗಳಲ್ಲಿ ಲಭ್ಯವಿದೆ.ಇದಲ್ಲದೆ, ಏರ್ಟೆಲ್ ದೀರ್ಘಾವಧಿಯ ಯೋಜನೆಗಳಿಗೆ 15% ವರೆಗೆ ರಿಯಾಯಿತಿ ಮತ್ತು ಆರು ತಿಂಗಳ ಯೋಜನೆಗಳಿಗೆ ಸೈನ್ ಅಪ್ ಮಾಡುವಾಗ 7.50% ರಿಯಾಯಿತಿ ನೀಡುತ್ತದೆ. ಈ ಕೊಡುಗೆಗಳು ಉಚಿತ ಅನುಸ್ಥಾಪನಾ ಕೊಡುಗೆಯೊಂದಿಗೆ ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ವಾಸಿಸುವ ಚಂದಾದಾರರಿಗೆ ಲಭ್ಯವಿದೆ.