NSA Ajit Doval's Big Statement: ದೇಶದೊಳಗಿನ ಶಾಂತಿಯನ್ನು ಕದಡುತ್ತಿರುವ ಕಿಡಿಗೇಡಿಗಳ ಬಗ್ಗೆ ದೇಶದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಶನಿವಾರ ಮಹತ್ವದ ಹೇಳಿಕೆ ನೀಡಿದ್ದಾರೆ. ದೆಹಲಿಯಲ್ಲಿ ಅಖಿಲ ಭಾರತ ಸೂಫಿ ಸಜ್ಜದನಾಶಿನ್ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೋವಲ್ ಈ ಹೇಳಿಕೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡರು ಚರ್ಚಿಸಿ ಶಾಂತಿ ಮತ್ತು ಏಕತೆಗಾಗಿ ನಿರ್ಣಯವನ್ನು ಅಂಗೀಕರಿಸಿದ್ದಾರೆ.


COMMERCIAL BREAK
SCROLL TO CONTINUE READING

ದೇಶದಲ್ಲಿ ಅಶಾಂತಿ ಸೃಷ್ಟಿಸಲು ಸಂಚು
ಕೆಲವು ಮಾಜ ಘಾತಕ ಅಂಶಗಳು ದೇಶದಲ್ಲಿ ಆ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ, ಇದು ಭಾರತದ ಪ್ರಗತಿಗೆ ಅಡ್ಡಿಯಾಗುತ್ತಿದೆ ಎಂದು ದೋವಲ್ ಹೇಳಿದ್ದಾರೆ. ಧರ್ಮ ಮತ್ತು ಸಿದ್ಧಾಂತದ ಹೆಸರಿನಲ್ಲಿ ಹುಳಿ ಹಿಂಡಿ, ಸಂಘರ್ಷವನ್ನೇ ಹುಟ್ಟುಹಾಕುತ್ತಿದ್ದಾರೆ ಮತ್ತು ಅದು ಇಡೀ ದೇಶವನ್ನೇ ಬಾಧಿಸುತ್ತಿದ್ದು, ದೇಶದ ಹೊರಗೂ ಕೂಡ ಹರಡುತ್ತಿದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-"ಮರಾಠದ ಹೆಮ್ಮೆಗೆ ಅವಮಾನ": ರಾಜ್ಯಪಾಲರನ್ನು ತರಾಟೆಗೆ ತೆಗೆದುಕೊಂಡ ಉದ್ಧವ್ ಠಾಕ್ರೆ


ದೋವಲ್ ನೀಡಿದ ಎಚ್ಚರಿಕೆ ಏನು?
ಪ್ರಸ್ತುತ ಅಮಾನತ್ತಿನಲ್ಲಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ,  ಪ್ರವಾದಿ ಮುಹಮ್ಮದ್ ಕುರಿತು ಟಿವಿಯಲ್ಲಿ ಕಾಮೆಂಟ್ ಮಾಡಿದ ಎರಡು ತಿಂಗಳ ನಂತರ ರಾಷ್ಟ್ರೀಯ ಭದ್ರತಾ ಸಲಹೆಗಾರರ ​​ಈ ಎಚ್ಚರಿಕೆ ಬಂದಿರುವುದು ಇಲ್ಲಿ ಉಲ್ಲೇಖನೀಯ. ನೂಪುರ್ ಶರ್ಮಾ ಹೇಳಿಕೆಯನ್ನು ಕೊಲ್ಲಿ ರಾಷ್ಟ್ರಗಳು ಖಂಡಿಸಿವೆ. ಇದಾದ ನಂತರ ಭಾರತ ಇಂತಹ ಹೇಳಿಕೆಗಳನ್ನು ಸಹಿಸುವುದಿಲ್ಲ ಎಂಬ ಭರವಸೆ ಕೊಲ್ಲಿ ರಾಷ್ಟ್ರಗಳಿಗೆ ನೀಡಿದೆ.


ಹಾವಿನ ಜೊತೆ ಕಾಳಗಕ್ಕಿಳಿದ ಅಳಿಲು: ಮುಂದೆ ಗೆದ್ದವರು ಯಾರು?


ಟೇಲರ್ ಹತ್ಯೆ 
ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಕ್ಕಾಗಿ ರಾಜಸ್ಥಾನದ ಉದಯ್‌ಪುರದಲ್ಲಿ ಇಬ್ಬರು ಮುಸ್ಲಿಂ ಯುವಕರು ಹಿಂದೂ ಟೈಲರ್ ಅನ್ನು ಕ್ಯಾಮೆರಾ ಮುಂದೆ ಬರ್ಬರವಾಗಿ ಕೊಲೆ ಮಾಡಿರುವುದು ಇಲ್ಲಿ ಉಲ್ಲೇಖನೀಯ. ಈ ಘಟನೆಯ ಹಿನ್ನೆಲೆ, ದೇಶದ ಕೆಲವು ಭಾಗಗಳಲ್ಲಿ ಘರ್ಷಣೆಗಳೂ ಕೂಡ ಕಂಡುಬಂದಿದ್ದವು. ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲೂ ಇಂತಹದ್ದೇ ಘಟನೆ ನಡೆದಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.