ಹಾವಿನ ಜೊತೆ ಕಾಳಗಕ್ಕಿಳಿದ ಅಳಿಲು: ಮುಂದೆ ಗೆದ್ದವರು ಯಾರು?

ಈ ವೀಡಿಯೊದಲ್ಲಿ ಮೊದಲಿಗೆ ಕೆಂಪು ಗೋಡೆ ಕಂಡುಬರುತ್ತದೆ. ಕ್ಯಾಮೆರಾವನ್ನು ಝೂಮ್ ಮಾಡಿದರೆ ಗೋಡೆಯ ಒಂದು ಬದಿಯಲ್ಲಿ ಅಳಿಲು ಮತ್ತು ಇನ್ನೊಂದು ಬದಿಯಲ್ಲಿ ಹಾವು ಕಾಣಿಸುತ್ತದೆ. ನಿಧಾನವಾಗಿ ಎರಡೂ ಸಹ ಪರಸ್ಪರ ಸಮೀಪಿಸುತ್ತಿರುವುದನ್ನು ಕಾಣಬಹುದು. ಇದರ ನಂತರ, ಏನಾಗುತ್ತದೆ ಎಂದು ನೀವೇ ನೋಡಿ.  

Written by - Bhavishya Shetty | Last Updated : Jul 30, 2022, 02:48 PM IST
  • ಅಳಿಲು ಹಾವಿನೊಂದಿಗೆ ಕಾದಾಡುವ ವಿಡಿಯೋ ಎಂದಾದರೂ ಕಂಡಿದ್ದೀರಾ?
  • ಹಾವನ್ನ ಎದುರಿಸುತ್ತಿರುವ ಅಳಿಲಿನ ಧೈರ್ಯವನ್ನು ನೋಡುಗರು ಮೆಚ್ಚುತ್ತಿದ್ದಾರೆ
  • ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿರುವ ವಿಡಿಯೋ
ಹಾವಿನ ಜೊತೆ ಕಾಳಗಕ್ಕಿಳಿದ ಅಳಿಲು: ಮುಂದೆ ಗೆದ್ದವರು ಯಾರು?  title=
Squirrel fight

ಅನೇಕ ಪ್ರಾಣಿಗಳ ಚೇಷ್ಟೆ ವಿಡಿಯೋಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವು ಮನಸ್ಸಿಗೆ ಉಲ್ಲಾಸ ನೀಡಿದ್ರೆ, ಇನ್ನೂ ಕೆಲವು ಭಯವನ್ನು ಹುಟ್ಟು ಹಾಕುತ್ತದೆ. ಅಂತಹದ್ದೇ ವಿಡಿಯೋ ಒಂದು ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ: ಮೊದಲ ಪಂದ್ಯದಲ್ಲಿ  ಈ ದೊಡ್ಡ ತಪ್ಪು ಮಾಡಿದ ರೋಹಿತ್ ಶರ್ಮಾ!

ಅಳಿಲು ಹಾವಿನೊಂದಿಗೆ ಕಾದಾಡುವ ವಿಡಿಯೋ ಎಂದಾದರೂ ಕಂಡಿದ್ದೀರಾ? ಇಲ್ಲೊಂದು ವಿಡಿಯೋದಲ್ಲಿ ಆ ದೃಶ್ಯವನ್ನು ನೋಡಬಹುದು. ಹಾವು ಮತ್ತು ಅಳಿಲುಗಳ ನಡುವಿನ ಜಗಳವನ್ನು ಯಾರೂ ನೋಡಿರಲು ಸಾಧ್ಯವಿಲ್ಲ. ಇನ್ನು ಈ ವಿಡಿಯೋದಲ್ಲಿ ಹಾವನ್ನ ಎದುರಿಸುತ್ತಿರುವ ಅಳಿಲಿನ ಧೈರ್ಯವನ್ನು ನೋಡುಗರು ಮೆಚ್ಚುತ್ತಿದ್ದಾರೆ. ಈ ವಿಡಿಯೋವನ್ನು ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ವೀಡಿಯೊದಲ್ಲಿ ಮೊದಲಿಗೆ ಕೆಂಪು ಗೋಡೆ ಕಂಡುಬರುತ್ತದೆ. ಕ್ಯಾಮೆರಾವನ್ನು ಝೂಮ್ ಮಾಡಿದರೆ ಗೋಡೆಯ ಒಂದು ಬದಿಯಲ್ಲಿ ಅಳಿಲು ಮತ್ತು ಇನ್ನೊಂದು ಬದಿಯಲ್ಲಿ ಹಾವು ಕಾಣಿಸುತ್ತದೆ. ನಿಧಾನವಾಗಿ ಎರಡೂ ಸಹ ಪರಸ್ಪರ ಸಮೀಪಿಸುತ್ತಿರುವುದನ್ನು ಕಾಣಬಹುದು. ಇದರ ನಂತರ, ಏನಾಗುತ್ತದೆ ಎಂದು ನೀವೇ ನೋಡಿ.  

 

ಅಷ್ಟಕ್ಕೂ ಗೆದ್ದವರು ಯಾರು?
ಈ ವಿಡಿಯೋದ ಶೀರ್ಷಿಕೆಯಲ್ಲಿ ʼಗೋಡೆಯ ಮೇಲೆ ಹಾವಿನೊಂದಿಗೆ ಅಳಿಲು ಕಾದಾಟʼ ಎಂದು ಬರೆಯಲಾಗಿದೆ. ವೀಡಿಯೋದಲ್ಲಿ ಕಾಗೆಯೊಂದು ಈ ಎರಡರ ನಡುವೆ ಬಂದು ಗಲಾಟೆ ಮಾಡುತ್ತಾ ಅಳಿಲನ್ನು ಬೆಂಬಲಿಸಲು ಆರಂಭಿಸಿದೆ. ಕೊನೆಗೆ ಹಾವು ಓಡಿಹೋಗುತ್ತದೆ. ಈ ವಿಡಿಯೋ (ಟ್ರೆಂಡಿಂಗ್ ವೀಡಿಯೋ) 'ಮೂರ್ತಿ ಚಿಕ್ಕದಾದದರೂ ಕೀರ್ತಿ ದೊಡ್ಡದು' ಎಂಬ ಮಾತನ್ನು ಸಾಬೀತುಪಡಿಸುತ್ತದೆ. ಈ ವಿಡಿಯೋಗೆ ಸಾಕಷ್ಟು ಲೈಕ್‌ಗಳು ಸಿಕ್ಕಿವೆ. 

ಇದನ್ನೂ ಓದಿ: ಕೊನೆಗೂ ಜಿಲ್ಲಾ ಉಸ್ತುವಾರಿ ಸ್ಥಾನ ಗಿಟ್ಟಿಸಿಕೊಂಡ ಸಚಿವ ಆನಂದ್ ಸಿಂಗ್!

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡುತ್ತಿದೆ. ಈ 34 ಸೆಕೆಂಡುಗಳ ವೀಡಿಯೊದಲ್ಲಿ, ಅಪಾಯಕಾರಿ ಹಾವು ಅಳಿಲು ಮತ್ತು ಕಾಗೆಯ ಮುಂದೆ ಸೋಲನ್ನು ಒಪ್ಪಿಕೊಂಡು ಓಡಿ ಹೋಗುವುದನ್ನು ಕಾಣಬಹುದು. ಇಂತಹ ಸಣ್ಣ ಜೀವಿಗಳು ಉಗ್ರ ಹಾವಿನೊಂದಿಗೆ ಕೆಣಕಿದ್ದಲ್ಲದೆ ಅದಕ್ಕೆ ಸಮಾನ ಪೈಪೋಟಿಯನ್ನೂ ನೀಡಿವೆ ಎಂಬುದನ್ನು ಜನ (ಸಾಮಾಜಿಕ ಮಾಧ್ಯಮ ಬಳಕೆದಾರರು) ನಂಬಲು ಸಾಧ್ಯವಾಗುತ್ತಿಲ್ಲ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News