ನವದೆಹಲಿ: ಭಯೋತ್ಪಾದನೆ ಕುರಿತ ಯುಎನ್ ವರದಿಯು ಕೇರಳ ಮತ್ತು ಕರ್ನಾಟಕದಲ್ಲಿ ಗಮನಾರ್ಹ ಸಂಖ್ಯೆಯ ಐಸಿಸ್ ಭಯೋತ್ಪಾದಕರು ಇದ್ದಾರೆ ಎಂದು ಎಚ್ಚರಿಸಿದೆ, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನಿಂದ 150 ರಿಂದ 200 ಉಗ್ರರ ಮೂಲಕ ಅಲ್-ಖೈದಾ ದಾಳಿ ನಡೆಸಲು ಸಂಚು ರೂಪಿಸಿದೆ ಎನ್ನುವ ಆತಂಕಕಾರಿ ಮಾಹಿತಿಯನ್ನು ವರದಿ ಬಹಿರಂಗಪಡಿಸಿದೆ.


COMMERCIAL BREAK
SCROLL TO CONTINUE READING

ಐಸಿಸ್, ಅಲ್-ಖೈದಾ ಮತ್ತು ಸಂಬಂಧಿತ ವ್ಯಕ್ತಿಗಳು ಮತ್ತು ಘಟಕಗಳಿಗೆ ಸಂಬಂಧಿಸಿದ 26 ನೇ ವರದಿಯು ಭಾರತೀಯ ಉಪಖಂಡದ (ಎಕ್ಯೂಐಎಸ್) ಅಲ್-ಖೈದಾ ಅಫ್ಘಾನಿಸ್ತಾನದ ನಿಮ್ರೂಜ್, ಹೆಲ್ಮಂಡ್ ಮತ್ತು ಕಂದಹಾರ್ ಪ್ರಾಂತ್ಯಗಳಲ್ಲಿ ತಾಲಿಬಾನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದೆ.


ಇದನ್ನು ಓದಿ: ಭಾರತದಲ್ಲಿ ವಾಸಿಸುವ ಯಹೂದಿಗಳ ಮೇಲೆ ISIS, Al Qaeda ಕಣ್ಣು!


ಈ ಗುಂಪು ಬಾಂಗ್ಲಾದೇಶ, ಭಾರತ, ಮ್ಯಾನ್ಮಾರ್ ಮತ್ತು ಪಾಕಿಸ್ತಾನದ 150 ರಿಂದ 200 ಸದಸ್ಯರನ್ನು ಹೊಂದಿದೆ ಎಂದು ವರದಿಯಾಗಿದೆ. ದಿವಂಗತ ಅಸಿಮ್ ಉಮರ್ ಅವರ ನಂತರ ಬಂದ ಒಸಾಮಾ ಮಹಮೂದ್ ಪ್ರಸ್ತುತ ನಾಯಕನಾಗಿದ್ದಾನೆ. ಈ ಸಂಘಟನೆ ತನ್ನ ಮಾಜಿ ನಾಯಕನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಈ ಪ್ರದೇಶದಲ್ಲಿ ಪ್ರತೀಕಾರದ ಕಾರ್ಯಾಚರಣೆಯನ್ನು ಯೋಜಿಸುತ್ತಿದೆ ಎಂದು ವರದಿಯಾಗಿದೆ.ಈಗ ಈ ವರದಿಯ ಪ್ರಕಾರ, 2019 ರ ಮೇ 10 ರಂದು ಘೋಷಿಸಲ್ಪಟ್ಟ ಐಎಸ್ಐಎಲ್ ಭಾರತೀಯ ಅಂಗಸಂಸ್ಥೆ (ಹಿಂದ್ ವಿಲಾಯಾ) ಸಂಘಟನೆ 180 ರಿಂದ 200 ಸದಸ್ಯರನ್ನು ಹೊಂದಿದೆ ಎನ್ನಲಾಗಿದೆ.ಕೇರಳ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಗಮನಾರ್ಹ ಸಂಖ್ಯೆಯ ಐಎಸ್ಐಎಲ್ ಕಾರ್ಯಕರ್ತರು ಇದ್ದಾರೆ ಎಂದು ಅದು ಹೇಳಿದೆ.


ಕಳೆದ ವರ್ಷ ಮೇ ತಿಂಗಳಲ್ಲಿ, ಇಸ್ಲಾಮಿಕ್ ಸ್ಟೇಟ್ (ಐಸಿಸ್, ಐಎಸ್ಐಎಲ್ ಅಥವಾ ದೇಶ್ ಎಂದೂ ಕರೆಯುತ್ತಾರೆ) ಭಯೋತ್ಪಾದಕ ಗುಂಪು ಭಾರತದಲ್ಲಿ ಹೊಸ ಪ್ರಾಂತ್ಯವನ್ನು ಸ್ಥಾಪಿಸಿದೆ ಎಂದು ಹೇಳಿಕೊಂಡಿದೆ, ಇದು ಕಾಶ್ಮೀರದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವಿನ ಘರ್ಷಣೆಯ ನಂತರ ಬಂದ ಮೊದಲ ಘೋಷಣೆಯಾಗಿದೆ.ಭಯೋತ್ಪಾದಕ ಸಂಘಟನೆಯು ತನ್ನ ಅಮಾಕ್ ನ್ಯೂಸ್ ಏಜೆನ್ಸಿ ಮೂಲಕ, ಹೊಸ ಶಾಖೆಯ ಅರೇಬಿಕ್ ಹೆಸರು 'ವಿಲಾಯಾಹ್ ಆಫ್ ಹಿಂದ್' (ಭಾರತ ಪ್ರಾಂತ್ಯ) ಎಂದು ಹೇಳಿದೆ.ಆದರೆ ಜಮ್ಮು ಮತ್ತು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ.


ಈ ಹಿಂದೆ, ಕಾಶ್ಮೀರದಲ್ಲಿ ಐಸಿಸ್ ದಾಳಿಯು ಅದರ ಖೋರಾಸಾನ್ ಪ್ರಾಂತ್ಯ ಶಾಖೆಗೆ ಸಂಬಂಧಿಸಿತ್ತು, ಇದನ್ನು "ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಹತ್ತಿರದ ಭೂಮಿಯನ್ನು" ಒಳಗೊಳ್ಳಲು 2015 ರಲ್ಲಿ ಸ್ಥಾಪಿಸಲಾಯಿತು ಎನ್ನಲಾಗಿದೆ.