ಭಾರತದಲ್ಲಿ ವಾಸಿಸುವ ಯಹೂದಿಗಳ ಮೇಲೆ ISIS, Al Qaeda ಕಣ್ಣು!

ವರದಿಗಳ ಪ್ರಕಾರ, ಜನಪ್ರಿಯ ಸ್ಥಳಗಳಾದ ಫ್ರೀಮಾಸನ್ ಟೆಂಪಲ್, ಸರ್ವೊಥಮಾಮ್ ಮೇಸೋನಿಕ್ ಟೆಂಪಲ್ ಮತ್ತು ಕೇರಳದ ಕೊಚ್ಚಿಯ ಕೋಡರ್ ಹಾಲ್ ಪ್ರದೇಶಗಳಲ್ಲಿ ಜಿಹಾದಿಗಳಿಂದ ತೀವ್ರ ಬೆದರಿಕೆ ಇದೆ.

Last Updated : Nov 6, 2019, 11:18 AM IST
ಭಾರತದಲ್ಲಿ ವಾಸಿಸುವ ಯಹೂದಿಗಳ ಮೇಲೆ ISIS, Al Qaeda ಕಣ್ಣು! title=
Image for representational use only

ನವದೆಹಲಿ: ಅಲ್ ಖೈದಾ(Al Qaeda) ಮತ್ತು ಇಸ್ಲಾಮಿಕ್ ಸ್ಟೇಟ್ (ISIS) ನಂತಹ ಜಾಗತಿಕ ಭಯೋತ್ಪಾದಕ ಗುಂಪುಗಳು ಭಾರತದಲ್ಲಿ ವಾಸಿಸುತ್ತಿರುವ ಯಹೂದಿ ಮತ್ತು ಇಸ್ರೇಲಿ ಸಮುದಾಯಗಳನ್ನು ಗುರಿಯಾಗಿಸಲು ಸಂಚು ರೂಪಿಸುತ್ತಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಸಿದೆ.

ದೇಶದಲ್ಲಿ ವಾಸಿಸುತ್ತಿರುವ ಯಹೂದಿಗಳು ಮತ್ತು ಇಸ್ರೇಲಿಗಳನ್ನು ಗುರಿಯಾಗಿಸಲು ಎರಡು ಭಯೋತ್ಪಾದಕ ಸಂಘಟನೆಗಳು ತಮ್ಮ ಕಾರ್ಯಕರ್ತರಿಗೆ ನಿರ್ದೇಶನ ನೀಡಿವೆ ಎಂದು ಗುಪ್ತಚರ ಸಂಸ್ಥೆಗಳು ತಡೆದ ಆನ್‌ಲೈನ್ ಸಂದೇಶಗಳಿಂದ ತಿಳಿದುಬಂದಿದೆ.

ವರದಿಗಳ ಪ್ರಕಾರ, ಜನಪ್ರಿಯ ಸ್ಥಳಗಳಾದ ಫ್ರೀಮಾಸನ್ ಟೆಂಪಲ್, ಸರ್ವೊಥಮಾಮ್ ಮೇಸೋನಿಕ್ ಟೆಂಪಲ್ ಮತ್ತು ಕೇರಳದ ಕೊಚ್ಚಿಯ ಕೋಡರ್ ಹಾಲ್ ಪ್ರದೇಶಗಳಲ್ಲಿ ಜಿಹಾದಿಗಳಿಂದ ತೀವ್ರ ಬೆದರಿಕೆ ಇದೆ.

ಅಲ್ ಖೈದಾ ಮತ್ತು ಐಸಿಸ್ ಪ್ರೇರಿತ ಜಿಹಾದಿ ಗುಂಪುಗಳು ಭಾರತಕ್ಕೆ ಪ್ರಯಾಣಿಸುವ ಇಸ್ರೇಲಿ ಪ್ರವಾಸಿಗರನ್ನು ಅಪಹರಿಸಬಹುದು ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆಯ ಸಂದೇಶ ರವಾನಿಸಿವೆ.

ಗುಪ್ತಚರ ಸಂಸ್ಥೆಗಳು ನೀಡಿದ ಮಾಹಿತಿಯನ್ನು ಅನುಸರಿಸಿ, ಈ ಸಮುದಾಯಗಳು ಅಧಿಕವಾಗಿ ವಾಸಿಸುವ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.

ಐಸಿಸ್ ಮತ್ತು ಅಲ್ ಖೈದಾ ಸಂಬಂಧಿತ ಭಯೋತ್ಪಾದಕ ಸಂಘಟನೆಗಳಿಂದ ಯಹೂದಿಗಳ ಸದಸ್ಯರು ಮತ್ತು ಭಾರತದ ಇಸ್ರೇಲಿ ಸಮುದಾಯದವರು ಗಂಭೀರ ಬೆದರಿಕೆಯನ್ನು ಎದುರಿಸುತ್ತಿದ್ದಾರೆ ಎಂದು ಗುಪ್ತಚರ ಬ್ಯೂರೋ ಇತ್ತೀಚೆಗೆ ಎಚ್ಚರಿಸಿದ್ದನ್ನು ನೆನಪಿಸಿಕೊಳ್ಳಬಹುದು.

ನವದೆಹಲಿಯ ಇಸ್ರೇಲಿ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಸಲು ಸಂಚು ರೂಪಿಸಿರುವ ಬಗ್ಗೆ ವಿದೇಶಿ ರಾಷ್ಟ್ರಗಳ ಗುಪ್ತಚರ ಸಂಸ್ಥೆಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಈ ಎಚ್ಚರಿಕೆ ನೀಡಲಾಗಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುವ ಕ್ರಮಕ್ಕೆ ಇಸ್ರೇಲ್ ಭಾರತವನ್ನು ಬೆಂಬಲಿಸಿದ್ದರಿಂದ, ಭಯೋತ್ಪಾದಕ ಸಂಘಟನೆಗಳು ಆ ದೇಶದೊಂದಿಗೂ ತಮ್ಮ ದ್ವೇಷ ತೀರಿಸಿಕೊಳ್ಳಲು ಮುಂದಾಗಿವೆ. ಹೀಗಾಗಿಯೇ ಭಾರತದಲ್ಲಿ ವಾಸಿಸುವ ಇಸ್ರೇಲಿಗರನ್ನು ಗುರಿಯಾಗಿಸಲು ಸಂಚು ರೂಪಿಸುತ್ತಿವೆ ಎಂದು ಏಜೆನ್ಸಿಗಳು ಎಚ್ಚರಿಸಿದೆ.

ಅಲ್ ಖೈದಾ ಮತ್ತು ಐಎಸ್‌ನೊಂದಿಗೆ ಸಂಯೋಜಿತವಾಗಿರುವ ಭಯೋತ್ಪಾದಕ ಸಂಘಟನೆಗಳು ವಿಶ್ವಾದ್ಯಂತ ಇಸ್ರೇಲಿಗರ ಮೇಲೆ ದಾಳಿ ನಡೆಸಲು ಪ್ರಯತ್ನಿಸುತ್ತಿವೆ.

ಅದೇ ದೃಷ್ಟಿಯಿಂದ, ಭಾರತದಲ್ಲಿ ನವದೆಹಲಿಯ ಇಸ್ರೇಲಿ ರಾಯಭಾರ ಕಚೇರಿ, ಸಿನಗಾಗ್ಗಳು, ಯಹೂದಿ ಶಾಲೆಗಳು, ರೆಸ್ಟೋರೆಂಟ್‌ಗಳು ಮತ್ತು ಹೊಸದಿಲ್ಲಿ ಮತ್ತು ಇತರ ನಗರಗಳಲ್ಲಿ ಇಸ್ರೇಲಿ ಪ್ರಜೆಗಳು ಆಗಾಗ್ಗೆ ಭೇಟಿ ನೀಡುವ ಹೋಟೆಲ್‌ಗಳು  ಸಂಭವನೀಯ ದಾಳಿಗೆ ಗುರಿಯಾಗುವ ಸಾಧ್ಯತೆ ಇದೇ”ಎಂದು ಗುಪ್ತಚರ ಸಂಸ್ಥೆಗಳು ತಿಳಿಸಿವೆ.

Trending News