ನವದೆಹಲಿ: ದೇಶಾದ್ಯಂತ ಮುಂದುವರೆದಿರುವ ಲಾಕ್ ಡೌನ್ ಹಾಗೂ ಅನ್ ಲಾಕ್ ನಡುವೆಯೇ ಸೈಬರ್ ವಂಚನೆಯ ಪ್ರಕರಣಗಳ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಹೀಗಾಗಿ ಸದ್ಯ ವಾಟ್ಸ್ ಆಪ್ ಮೂಲಕ ಎಸಗಲಾಗುತ್ತಿರುವ ವಂಚನೆಯ ಕುರಿತು ದೆಹಲಿ ಪೊಲೀಸರು ಅಲರ್ಟ್ ಜಾರಿಗೊಳಿಸಿದ್ದಾರೆ. ಹೌದು, ಸದ್ಯ ನಡೆಸಲಾಗುತ್ತಿರುವ ವಂಚನೆಗಳಲ್ಲಿ WhatsApp ಮೂಲಕ ವಂಚಕರು ಬಳಕೆದಾರರ ವೈಯಕ್ತಿಕ ಮಾಹಿತಿಗೆ ಕನ್ನಹಾಕುವುದರ ಜೊತೆಗೆ ಅದನ್ನು ಲಾಕ್ ಮಾಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ದೆಹಲಿ ಪೊಲೀಸರಿಂದ ಟ್ವೀಟ್ 
ದೆಹಲಿ ಪೊಲೀಸರ ಸೈಬರ್ ಅಪರಾಧ ವಿಭಾಗವು ವಾಟ್ಸಾಪ್ ವಂಚನೆ ಬಗ್ಗೆ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ಈ ಟ್ವೀಟ್ ನಲ್ಲಿ  ಪೊಲೀಸರು ವಾಟ್ಸ್ ಆಪ್ ಬಳಕೆದಾರರಿಗೆ ಹೊಸದಾಗಿ ಎಸಗಲಾಗುತ್ತಿರುವ ಒಂದು ವಂಚನೆಯ ಕುರಿತು ಅಲರ್ಟ್ ಜಾರಿಗೊಳಿಸಿದ್ದಾರೆ. ಈ ವಂಚನೆಯಲ್ಲಿ ಹೈಜಾಕರ್ಸ್ ಗಳು ನಿಮ್ಮ ಬ್ಯಾಂಕ್ ಮಾಹಿತಿಗೆ ಕನ್ನಹಾಕಿ ಅದನ್ನು ಲಾಕ್ ಮಾಡಲಿದ್ದಾರೆ ಎಂದು ಎಚ್ಚರಿಸಿದ್ದಾರೆ.



ಅಷ್ಟೇ ಅಲ್ಲ ವಂಚನೆ ಎಸಗುವವರು ನಕಲಿ ಖಾತೆಯನ್ನು ಬಳಸಿ, ವೆರಿಫಿಕೆಶನ್ ಪಿನ್ ಹಂಚಿಕೊಳ್ಳಲು ಹೇಳುತ್ತಾರೆ. ನೀವು ಈ ಮಾಹಿತಿಯನ್ನು ಹಂಚಿಕೊಳ್ಳುತ್ತಲೇ ನಿಮ್ಮ ಖಾತೆ ಹೈಜಾಕ್ ಆಗಲಿದೆ. ನಂತರ ನಿಮ್ಮ ಬಳಿ OTP ಕೇಳಲಾಗುತ್ತದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.


ಈ ರೀತಿಯ ವಂಚನೆಯ ಕುರಿತು ವಿವರಣೆ ನೀಡಿರುವ ದೆಹಲಿ ಪೊಲೀಸರು, ಹ್ಯಾಕರ್ ಮೊದಲು ತನ್ನಷ್ಟಕ್ಕೆ ತಾನು ವಾಟ್ಸ್ ಆಪ್ ಬಳಕೆದಾರರ ಸಿಬ್ಬಂದಿಯಾಗಿರುವುದಾಗಿ ಹೇಳುತ್ತಾನೆ. ಬಳಿಕ ಬಳಕೆದಾರರಿಗೆ ಖಾತರಿ ಪಡಿಸಲು ನಕಲಿ ಖಾತೆಯನ್ನು ಬಳಸುತ್ತಾರೆ ಇದರಲ್ಲಿ ವಾಟ್ಸ್ ಆಪ್ ಲೋಗೋ ಕೂಡ ಬಳಸಲಾಗಿರುತ್ತದೆ. ಇದಾದ ಬಳಿಕ ಬಳಕೆದಾರರಿಗೆ ವೆರಿಫಿಕೇಶನ್ ಕೋಡ್ ಹಂಚಿಕೊಳ್ಳಲು ಹೇಳಲಾಗುತ್ತದೆ. ನಂತರ ನಿಮ್ಮ ವಾಟ್ಸ್ ಆಪ್ ಖಾತೆ ಬಳಸಿ ನಿಮ್ಮ ಸ್ಮಾರ್ಟ್ ಫೋನಲ್ಲಿರುವ ನಿಮ್ಮ ವೈಯಕ್ತಿಕ ಮಾಹಿತಿ ಕದಿಯುತ್ತಾರೆ. ಈ ಖದೀಮರು ಮೊದಲು ಒಂದು ಸಂದೇಶ ರವಾನಿಸಿ, ಬಳಕೆದಾರರಿಗೆ ಬಂದಿರುವ 6 ಅಂಕಿಗಳ ವೆರಿಫಿಕೆಶನ್ ಕೋಡ್ ಹಂಚಿಕೊಳ್ಳಲು ಹೇಳುತ್ತಾರೆ.ವಾಟ್ಸ್ ಆಪ್ ಅಧಿಕೃತ ತಂಡವೆಂದು ತಿಳಿದು ಬಳಕೆದಾರರೂ ಕೂಡ ಅವರ ಬಲೆಗೆ ಸುಲಭವಾಗಿ ಬೀಳುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.